Sunday, September 8, 2024

ಕುಂದಾಪುರ: ಯುವ ಬಂಟರ ಸಂಘದಿಂದ ಆಸರೆ, ನವಚೇತನ ಯೋಜನೆಯಡಿ 20 ಲಕ್ಷ ರೂ.ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ

ಕುಂದಾಪುರ: ದೂರದೃಷ್ಟಿಯಿಂದ ಹಿರಿಯರು ಸ್ಥಾಪಿಸಿದ ಬಂಟರ ಸಂಘದ ಉದ್ದೇಶಗಳು ಈಗ ಸಾಕಾರಗೊಳ್ಳುತ್ತಿವೆ. ಬಂಟ ಸಮುದಾಯವು ಪ್ರಬಲ ಸಮುದಾಯವಾಗಿದ್ದು ಎಲ್ಲರನ್ನು ಒಳಗೊಂಡು ಸಮಾಜಕ್ಕೆ ಒಳಿತಾಗುವ ಕೆಲಸಗಳು ಸಂಘಟನೆ ಮೂಲಕ ನಡೆಯಬೇಕು ಎಂದು ಹೇರಂಬ ಆಗ್ರೋ ಇಂಡಸ್ಟ್ರೀಸ್ ಮುಂಬೈಯ ಆಡಳಿತ ನಿರ್ದೇಶಕ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

ಅವರು ಸೆಪ್ಟೆಂಬರ್ 24ರ ರವಿವಾರ ಬಂಟರ ಯಾನೆ ನಾಡವರ ಸಂಕೀರ್ಣದ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆಸರೆ ಮತ್ತು ನವಚೇತನ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿ ದಶಮ ಸಂಭ್ರಮದ ಸಲುವಾಗಿ ಒಂದು ವರ್ಷದಲ್ಲಿ ಎರಡು ಸಾವಿರ ಜನರಿಗೆ ದಾನಿಗಳ ಮೂಲಕ ವಿವಿಧ ಉದ್ದೇಶಕ್ಕಾಗಿ ೧.೨೫ ಕೋಟಿ ರೂ ಗಳ ಅರ್ಥಿಕ ನೆರವು ನೀಡಲಾಗಿದೆ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಭಿನಂದನಾ ನುಡಿಯಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಹಿರಿಯ ಗಣ್ಯರಿಗೆ ದಶಮ ಸಂಭ್ರಮ ಪ್ರಶಸ್ತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಆಡಳಿತ ಧರ್ಮದರ್ಶಿ ಬಿ ಅಪ್ಪಣ್ಣ ಹೆಗ್ಡೆ ಪ್ರಧಾನ ಮಾಡಿದರು.

ಇಸ್ರೋ ಚಂದ್ರಯಾನ-03 ರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಹುಬ್ಬಳ್ಳಿಯ ಹಿರಿಯ ಉದ್ಯಮಿ ಎನ್.ಐ ಶೆಟ್ಟಿ, ತೆಲಂಗಾಣ ಹೋಟೆಲ್ ಉದ್ಯಮಿ ಕೊಡ್ಲಾಡಿ ಗಂಜಿಕೊಡ್ಲು ಶಿವರಾಮ್ ಶೆಟ್ಟಿ ಗೃಹ ಚೇತನ ಯೋಜನೆಯ ಮನೆಗಳನ್ನು ಹಸ್ತಾಂತರಿಸಿದರು.

ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರೊ. ಮೊಳಹಳ್ಳಿ ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ನೇತ್ರ ಶಸ್ತ್ರ ಚಿಕಿತ್ಸಕರಾದ ಡಾ. ವೈ. ಎಸ್ ಹೆಗ್ಡೆ ಕುಂದಾಪುರ, ಲೆಕ್ಕಪರಿಶೋಧನಾ ಕ್ಷೇತ್ರದಲ್ಲಿ ಹಿರಿಯ ಲೆಕ್ಕ ಪರಿಶೋಧಕ ಸುಧಾಕರ ಹೆಗ್ಡೆ ಕುಂದಾಪುರ, ನ್ಯಾಯಾಂಗ ಕ್ಷೇತ್ರದಲ್ಲಿ ಹಿರಿಯ ವಕೀಲ ಎ.ಬಿ ಶೆಟ್ಟಿ ಕುಂದಾಪುರ, ಉದ್ಯಮ ಕ್ಷೇತ್ರದಲ್ಲಿ ಹೋಟೆಲ್ ಹರಿಪ್ರಸಾದ್ ನ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಪರಿಸರ ಕ್ಷೇತ್ರದಲ್ಲಿ ಕೊರ್ಗಿ ವಿಟ್ಟಲ್ ಶೆಟ್ಟಿ ಕುಂಭಾಶಿ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರಣ್ಣ ಶೆಟ್ಟಿ ಮೇರ್ಡಿ, ಸಂಶೋಧನಾ ಕ್ಷೇತ್ರದಲ್ಲಿ ನಿವೃತ್ತ ಪ್ರಾಂಶುಪಾಲ ಬೇಳೂರು ಡಾ. ಜಗದೀಶ್ ಶೆಟ್ಟಿ, ಕೈಗಾರಿಕಾ ಕ್ಷೇತ್ರದಲ್ಲಿ ಗಿರಿಜಾ ಟೈಲ್ಸ್ ನೆಲ್ಲಿಕಟ್ಟೆಯ ಜಯಕರ ಶೆಟ್ಟಿ, ಹೈನುಗಾರಿಕಾ ಕ್ಷೇತ್ರದಲ್ಲಿ ನೆಲಗೊಂಡದ ಉದ್ಯಮಿ ಸುಧಾಕರ ಶೆಟ್ಟಿ ಜನ್ಸಾಲೆ ಅವರಿಗೆ ದಶಮ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಶೆಟ್ಟಿ ಕನ್ಸ್ಟ್ರಕ್ಷನ್ ಹುಬ್ಬಳ್ಳಿಯ ಎಂ.ಡಿ ಪ್ರಸನ್ನ ಶಂಕರ ಶೆಟ್ಟಿ, ಆಸ್ಟ್ರೇಲಿಯಾದ ಉದ್ಯಮಿ ದಯಾನಂದ ಶೆಟ್ಟಿ, ಹುಬ್ಬಳ್ಳಿಯ ವಿ.ಐ ಶೆಟ್ಟಿ ಅಂಡ್ ಕಂಪನಿ ಎಂ.ಡಿ ಸತೀಶ್ ವಿ ಶೆಟ್ಟಿ, ಡಿಯರ್ ಕನ್ಸ್ಟ್ರಕ್ಷನ್ ಹುಬ್ಬಳ್ಳಿಯ ಎನ್.ಡಿ ಶೆಟ್ಟಿ, ಮೈಸೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ನಂದ್ಯಪ್ಪ ಶೆಟ್ಟಿ, ಡಿಯರ್ ಕನ್ಸ್ಟ್ರಕ್ಷನ್ ಹುಬ್ಬಳ್ಳಿಯ ಕೆ. ರವೀಂದ್ರ ಶೆಟ್ಟಿ, ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಚಿತ್ತೂರು, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಶ್ರೀ ಚಂದ್ರ ಶೆಟ್ಟಿ, ಎಚ್. ಅಶೋಕ್ ಶೆಟ್ಟಿ, ಬಿ. ಶೇಖರ್ ಶೆಟ್ಟಿ, ಅಲ್ತರ್ ದೇಬೆಟ್ಟು ಜಯರಾಮ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಉಳ್ತೂರು, ಸುರೇಶ ಶೆಟ್ಟಿ ಯಾಳಹಕ್ಲು, ಮಲ್ಯಾಡಿ ಚಂದ್ರ ಶೆಟ್ಟಿ, ಹೈದರಾಬಾದ್ ಉದ್ಯಮಿ ಅಜಿತ್ ಶೆಟ್ಟಿ, ಹೆಬ್ಲಿ ಉದಯ್ ಕುಮಾರ್ ಶೆಟ್ಟಿ, ಕರೀಂನಗರದ ಸಂದೀಪ್ ಶೆಟ್ಟಿ ಹರಾಡಿ, ರವೀಂದ್ರ ಶೆಟ್ಟಿ, ನಿಜಾಮಾಬಾದ್ ನ ಎಚ್. ಮಾಲಿಂಗ ಶೆಟ್ಟಿ, ಎಸ್.ಆರ್ ಅಣ್ಣಪ್ಪ ಶೆಟ್ಟಿ, ತೆಲಂಗಾಣದ ಚಂದ್ರಶೇಖರ್ ಶೆಟ್ಟಿ, ಪ್ರವೀಣ್ ಶೆಟ್ಟಿ ಗುಡ್ರಿ, ಹಕ್ಲಾಡಿ ಉದಯ್ ಕುಮಾರ್ ಶೆಟ್ಟಿ, ಮೆಹಬೂಬ್ ನಗರದ ಸಲ್ವಾಡಿ ಚಂದ್ರಶೇಖರ್ ಶೆಟ್ಟಿ, ಸಂಗಾರೆಡ್ಡಿಯ ಎಚ್. ಸಂಜೀವ ಶೆಟ್ಟಿ, ಉದ್ಯಮಿ ಎನ್ ಕರುಣಾಕರ ಶೆಟ್ಟಿ, ಮೈತ್ರಿ ಅಸೋಸಿಯೇಟ್ ಸಿಕಂದರಾಬಾದ್ ನವೀನ್ ಪ್ರಕಾಶ್ ಶೆಟ್ಟಿ, ಸಿದ್ದಿ ಕ್ಯಾಶು ಇಂಡಸ್ಟ್ರೀಸ್ ಕೆದೂರುನ ಅರುಣ್ ಕುಮಾರ್ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ಪೋಷಕ ಅರುಣ್ ಕುಮಾರ್ ಹೆಗ್ಡೆ, ಉದ್ಯಮಿ ವಿಜಯ್ ಶೆಟ್ಟಿ ಸಟ್ವಾಡಿ, ಶಂಕರ್ ಶೆಟ್ಟಿ ಮುಂಬೈ, ರಕ್ಷಿತ್ ಎನ್ ಶೆಟ್ಟಿ ಪೂನಾ ಉಪಸ್ಥಿತರಿದ್ದರು.

ಸಂಚಾಲಕ ಸಂದೇಶ ಶೆಟ್ಟಿ ಸಲ್ವಾಡಿ ಸ್ವಾಗತಿಸಿ, ಪ್ರತಾಪ್ ಚಂದ್ರ ಶೆಟ್ಟಿ, ಹಳ್ನಾಡು ಪ್ರಸ್ತಾವಿಸಿ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!