spot_img
Sunday, March 29, 2026
spot_img

ನಾಯ್ಕನಕಟ್ಟೆ ವೆಂಕಟರಮಣ ದೇವಸ್ಥಾನದಲ್ಲಿ ಅನಂತವ್ರತ ಸಂಪನ್ನ      

ಜನಪ್ರತಿನಿಧಿ ವಾರ್ತೆ  :  ನಾಯ್ಕನಕಟ್ಟೆ ವೆಂಕಟರಮಣ ದೇವಸ್ಥಾನದಲ್ಲಿ ಅನಂತವ್ರತ  ಸಂಪನ್ನಗೊಂಡಿತು. ದೇವಸ್ಥಾನದ ಅರ್ಚಕರಾದ ಬಾಲಕೃಷ್ಣ ಭಟ್ ಅವರ ನೇತ್ರತ್ವದಲ್ಲಿ ವೈದಿಕರಾದ ವೇ.ಮೂ. ಉದಯ ಭಟ್ ನಾಯ್ಕನಕಟ್ಟೆ, ಗಣಪತಿ ಶರ್ಮ ಕೋಡಿ ಕುಂದಾಪುರ ಇವರು ಪೂಜಾ ವಿಧಿಗಳನ್ನು ನೆರವೇರಿಸಿದರು.

ಮಹಾಪೂಜೆ, ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ, ಸಂತರ್ಪಣೆ ಜರಗಿತು. ಸಂಜೆ ದಿ.ಶಂಕರನಾರಾಯಣ ಪ್ರಭು ಮತ್ತು ಕುಟುಂಬದ ಸದಸ್ಯರು ಪ್ರಾಯೋಜಿಸಿದ “ಇಂದ್ರಕೀಲಕ – ಊರ್ವಶೀ ಶಾಪ” ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಸೇವಾದಾರರೂ ಹಾಗೂ ದೇವಾಲಯದ ಅರ್ಚಕ ಕುಟುಂಬದ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಮತ್ತು ವೆಂಕಟರಮಣ ಸೇವಾ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!