Sunday, September 8, 2024

ಮುಸ್ಲಿಂ ಒಕ್ಕೂಟದ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನೆ

ಕುಂದಾಪುರ: “ಶಿಷ್ಯನ ಸಾಧನೆಯಲ್ಲಿ ಸಂತಸ ಕಾಣುವ ಗುರುಗಳ ಸೇವೆಸ್ಮರಣೆಯ. ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದೊಂದಿಗೆ ಭವ್ಯ ಭಾರತದ ಭವಿಷ್ಯ ರೂಪಿಸುವ ಸರ್ವ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ. ಉಳಿದೆಲ್ಲ ವೃತ್ತಿಗಳಿಗಿಂತ ಭಿನ್ನವಾಗಿ ವೃತ್ತಿಬದ್ಧತೆಯೊಂದಿಗೆ, ವಿದ್ಯಾ ಸಂಸ್ಥೆಯನ್ನು ಪ್ರೀತಿಸಿ, ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯುವವನೇ ಶ್ರೇಷ್ಠ ಶಿಕ್ಷಕನಾಗುತ್ತಾನೆ.”ಎಂದು ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ದಸ್ತಗೀರ್ ಸಾಹೇಬ್ ಹೇಳಿದರು.

ಅವರು ಈ ಸಾಲಿನ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಮ್‌ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿನ ಸಹ ಶಿಕ್ಷಕರಾದ ಅಜಯ್ ಕುಮಾರ್ ಶೆಟ್ಟಿ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಅಭಿನಂದಿಸಿ ಮಾತನಾಡಿದರು.

ರಾಮ್‌ಸನ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯರು ಹಾಗೂ ಸಮಾಜಸೇವಕರು ಆದ ಮುನೀರ್.ಎಸ್. ಸಾಹೇಬ್ ಕಂಡ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಂಘಟನೆಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಅಜಯ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಖಜಾಂಚಿ ಅಬು ಮಹಮ್ಮದ್ ಮುಜಾವರ್, ಉಡುಪಿ ಜಿಲ್ಲಾ ಮುಸ್ಲಿಂ ಸಂಘಟನೆಯ ಸದಸ್ಯರಾದ ರಫೀಕ್ ಬಿ. ಎಸ್. ಎಫ್, ಜಮೀರ್ ಅಹಮದ್ ರಷಾದ್, ಶಬಾನ್ ಹಂಗಳೂರು, ಮುನಾಫ್ ಕೋಡಿ, ಮುನೀರ್ .ಎಸ್. ಸಾಹೇಬ್ ಕಂಡ್ಲೂರು, ಮೊಹಮ್ಮದ್ ರಫೀಕ್, ನಾಹುದ ಜಹೀರ್, ಹಾಗೂ ಕೋಡಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್ ಅಲಿ ಭಾಗವಹಿಸಿದ್ದರು.

ಸಹ ಶಿಕ್ಷಕ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!