Sunday, September 8, 2024

ಯುವಕ-ಯುವತಿಯನ್ನು ತಡೆದು ನೈತಿಕ ಪೊಲೀಸ್‌ಗಿರಿ : 10 ಮಂದಿಯ ಮೇಲೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಜನಪ್ರತಿನಿಧಿ ವಾರ್ತೆ : ಕಳೆದ ಆಗಸ್ಟ್‌ 22ರಂದು ಶೃಂಗೇರಿಯ ಸಿರಿಮನೆ ಫಾಲ್ಸ್‌‌ಗೆ  ತೆರಳಿದ್ದ ಯುವಕ-ಯುವತಿಯನ್ನ ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು, ಗದರಿಸಿ ವಿಚಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದ ಮೇಲೆ 10 ಮಂದಿ ವಿರುದ್ದ ಕಾಪು ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಈ ಪ್ರಕರಣದ ಬಳಿಕ ಪೊಲೀಸರ ಸಮ್ಮುಖದಲ್ಲಿ ಯುವಕ ಮತ್ತು ಯುವತಿಯ ಕುಟುಂಬದರ ಮಾತುಕತೆಯಾಗಿತ್ತಿ ಎಂದು ಹೇಳಲಾಗಿದೆ. ಯುವತಿಯ ಮನೆಯವರು ಯುವಕನೆ ಮೇಲೆಯಾವುದೇ ರೀತಿಯ ಸಂದೇಃ ಇಲ್ಲ ಎಂದು ಕೇಸ್‌ ದಾಖಲಿಸಿರಲಿಲ್ಲ ಎಂಬ ಮಾಹಿತಿ ದೊರಕಿದೆ. ಆದರೇ, ಈ ನಡುವೆ ಈ ಯುವಕ-ಯುವತಿಯನ್ನು ಗದರಿಸಿ ತಡೆದು ವಿಚಾರಣೆ ಮಾಡಿದ ವಿಡಿಯೋ ತುಣುಕನ್ನು ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಸಾಮಾಜಿಕ ಜಾಲತಾಣದಲ್ಲಿ ಹಳೆಯ ವಿಡಿಯೋ ವೈರಲ್‌ ಆಗಿದೆ. ಹಿಂದೂ ಧರ್ಮ 006 FB ಪೇಜ್‌ನಲ್ಲಿ ವಿಡಿಯೋ ಅಪ್ಲೋಡ್ ಆಗಿದ್ದು, ಇನ್‌‌ಸ್ಟಾಗ್ರಾಂ, ವಾಟ್ಸಾಪ್‌ನಲ್ಲೂ ಫೋಟೋ, ವಿಡಿಯೋ ವನ್ನು ಹರಿಬಿಡಲಾಗಿದೆ. ಈ ಸಂಬಂಧಪಟ್ಟಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಾಲಿಗೆ ಬಿದ್ದು ಮನವಿ ಮಾಡಿಕೊಂಡ ಯುವತಿ :

ಯುವಕ-ಯುವತಿಯನ್ನು ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಇಬ್ಬರನ್ನು ತಡೆದು ನಿಲ್ಲಿಸಿ, ಗದರಿಸಿ ವಿಚಾರಿಸಿದ್ದಾರೆ. ಇಬ್ಬರು ಕಾಯಕರ್ತರಿಗೆ ವಿನಂತಿ ಮಾಡಿಕೊಂಡು ಬಿಟ್ಟು ಬಿಡುವಂತೆ ಕೇಳಿಕೊಳ್ಳುವುದನ್ನು ಜಾಲತಾಣಗಳಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಕಾಣಬಹುದಾಗಿದೆ. ಮಾತ್ರವಲ್ಲದೆ, ಒಂದು ದೃಶ್ಯದಲ್ಲಿ ಯುವತಿ, ಕಾರ್ಯಕರ್ತರ ಕಾಲಿಗೆ ಬಿದ್ದು ಬಿಟ್ಟು ಬಿಡಿ ಅಂತ ಕೇಳಿಕೊಳ್ಳುವುದನ್ನು ನೋಡಬಹುದಾಗಿದೆ. ಘಟನೆ ಬಳಿಕ ಇಬ್ಬರ ವಿನಂತಿ ನಂತರ ಪೊಲೀಸ್ ಸಮ್ಮುಖದಲ್ಲಿ ಎರಡು ಕುಟುಂಬಸ್ಥರ ಮಾತುಕತೆಯಾಗಿ ಪ್ರಕರಣ ಅಂತ್ಯವಾಗಿತ್ತು. ಆದರೆ ಸದ್ಯ ವಿಡಿಯೋ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಅಕ್ರಮಕೂಟ, ಗಲಭೆಗೆ ಯತ್ನ, ಅನಪೇಕ್ಷಿತ ನಿರ್ಬಂಧದಡಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!