spot_img
Tuesday, March 24, 2026
spot_img

ಬಿಜೆಪಿಯಲ್ಲಿ ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೇಟ್‌ ಕೊಡಿಸಿದ್ದಿದೆ : ಜಗದೀಶ್‌ ಶೆಟ್ಟರ್‌

ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿಯ ಮಾಜಿ ನಾಯಕ

ಹುಬ್ಬಳ್ಳಿ :  ಹಣ ತೆಗೆದುಕೊಂಡು ಟಿಕೇಟ್‌ ಕೊಟ್ಟಿರುವ ಬಗ್ಗೆ ಬಿಜೆಪಿ ಉತ್ತರಿಸಬೇಕು. ಟಿಕೇಟ್‌ ಗಾಗಿ ಹಣ ಪಡೆದ ಬಗ್ಗೆ ಕೆಲವು ಕಡೆಯಿಂದ ಸುದ್ದಿ ಹೊರಗೆ ಬರುತ್ತಿವೆ. ಎಂಎಲ್‌ಎ ಟಿಕೇಟ್‌ ಕೊಡುವುದಕ್ಕೆ ಹಣ ಪಡೆಯುತ್ತಿರುವುದರ ಬಗ್ಗೆ ಬಿಜೆಪಿ ಮೇಲೆ ಸಂಶಯವಿದೆ. ಹಣ ಪಡೆದು ಟಿಕೇಟ್‌ ಕೊಟ್ಟಿರುವ ಬಗ್ಗೆ ಊಹಾಪೋಹಗಳಿವೆ. ಇವೆಲ್ಲದಕ್ಕೂ ಬಿಜೆಪಿ ಉತ್ತರಿಸಲಿ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಚೈತ್ರಾ ಕುಂದಾಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಶೆಟ್ಟರ್‌, ಬಿಜೆಪಿಯಲ್ಲಿ ಹಣ ಪಡೆದು ಟಿಕೇಟ್‌ ಕೊಡಿಸುವುದಕ್ಕೆ ಇಂತದ್ದೊಂದು ಟೀಮ್ ತಯಾರಾಗಿದೆ ಎಂದರೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸದ್ಯಕ್ಕೆ ಮಾಹಿತಿ ಇರುವ ಪ್ರಕಾರ ಹಿಂದೂ ಕಾರ್ಯಕರ್ತರೇ ಇಂತಹ ಪ್ರಕರಣದಲ್ಲಿ ಇದ್ದಾರೆ. ಕನಕಗಿರಿಯಲ್ಲೂ ಟಿಕೇಟ್‌ ಡೀಲ್‌ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯೋರ್ವರಿಗೆ ಬಿಜೆಪಿ ಟಿಕೇಟ್‌ ಕೊಡಿಸುವುದಾಗಿ ಒಂದು ಟೀಮ್‌ ಡೀಲ್‌ ಮಾಡಿರುವುದು ಬೆಳಕಿಗೆ ಬಂದಿದೆ. ದೂರು ಕೊಡದೆ ಇರುವವರು ಇನ್ನೂ ಸಾಕಷ್ಟು ಮಂದಿ ಇರಬಹದು ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿ ಕೆಲವು ವ್ಯಕ್ತಿಗಳ ಕೈಯಲ್ಲಿ ನಡೆಯುತ್ತಿದೆ ಎಂದು ನಾನು ಈ ಮೊದಲೇ ಹೇಳಿದ್ದೆ. ಅದು ಈಗ ಸಾಬೀತಾಗುತ್ತಿದೆ. ವ್ಯಕ್ತಿಯನ್ನು ನೋಡಿ ಟಿಕೇಟ್‌ ನೋಡುವುದು ಬಿಜೆಪಿಯಲ್ಲಿ ಮೊದಲು ಇತ್ತು. ಬಿಜೆಪಿಯಲ್ಲಿ ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೇಟ್‌ ಕೊಡಿಸಿದ್ದಿದೆ. ರಾಮದುರ್ಗದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡ ಒಬ್ಬ ವ್ಯಕ್ತಿಗೆ ಟಿಕೇಟ್‌ ನೀಡಲಾಗಿದೆ. ಇವನ್ನೆಲ್ಲಾ ನೋಡುವಾಗ ಟಿಕೇಟ್‌ ಗಾಗಿ ಏನೋ ವ್ಯವಹಾರ ಬಿಜೆಪಿಯಲ್ಲಿ ನಡೆದಿದೆ ಎನ್ನುವುದಂತೂ ಸತ್ಯ ಎಂದು ಅವರು ಅನುಮಾನ ವ್ಯಕ್ತ ಪಡಿಸಿದರು.

ಟಿಕೇಟ್‌ ಗಾಗಿ ಪ್ರಾಥಮಿಕ ಹಂತದಲ್ಲಿ ವ್ಯವಹಾರ ನಡೆದಿರುವ ಬಗ್ಗೆ ಸಾಬೀತಾಗಿದೆ ಎಂದು ಹೇಳಿದ ಶೆಟ್ಟರ್‌, ಚೈತ್ರಾ ಕುಂದಾಪುರ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಚೈತ್ರಾ ಕುಂದಾಪುರ ಟಿಕೇಟ್‌ ವಂಚನೆ ಪ್ರಕರಣ ಹೊರಗೆ ಬರುತ್ತಿದ್ದಂತೆ ಕೆಲವರಿಗೆ ಧೈರ್ಯ ಬಂದಿದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!