spot_img
Wednesday, April 29, 2026
spot_img

ಬೆಂಗಳೂರಿಗೆ ಮತ್ತೊಂದು ನಿತ್ಯ ರೈಲು: ಸಂಸದ ಪ್ರತಾಪ್ ಸಿಂಹ ಮತ್ತು ಕುಂದಾಪುರ ರೈಲ್ವೇ ಸಮಿತಿಯ ಅವಿರತ ಶ್ರಮಕ್ಕೆ ಯಶಸ್ಸು


ಕುಂದಾಪುರ: ಬೆಂಗಳೂರು ಮೈಸೂರು ಮಂಗಳೂರಿಗೆ ಬರುತಿದ್ದ ಗಾಡಿ ಸಂಖ್ಯೆ 16585 ಎಕ್ಸ್ಪ್ರೆಸ್ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ.

ಇದರೊಂದಿಗೆ ಕುಂದಾಪುರ ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜದಾನಿ ಬೆಂಗಳೂರು ಹಾಗು ಮೈಸೂರಿಗೆ ನಿತ್ಯ ರೈಲೊಂದು ಸಿಕ್ಕಂತಾಗಿದೆ.

ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದ ಕುಂದಾಪುರ ರೈಲ್ವೇ ಸಮಿತಿ ಹಾಗು ದೆಹಲಿ ಮಟ್ಟದಲ್ಲಿ ನಿರಂತರ ಕೆಲಸ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ .

ಈಗಿರುವ ಕರಾವಳಿಯ ಜೀವನಾಡಿ ಪಂಚಗಂಗಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಬೇಗನೆ ಹೊರಡುತ್ತದೆ ಹಾಗು ಅದರಲ್ಲಿ ಟಿಕೇಟು ಸಿಗುವುದಿಲ್ಲ ಎಂಬ ದೂರುಗಳಿಗೆ ಈಗ ಪರಿಹಾರ ಸಿಕ್ಕಂತಾಗಿದ್ದು, ಬೈಯಪ್ಪನ ಹಳ್ಳಿಯಿಂದ ಹೊರಟು ರಾತ್ರಿ ಒಂಬತ್ತು ಘಂಟೆಗೆ ಮೆಜೆಸ್ಟಿಕ್ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು ಉಡುಪಿ ಕುಂದಾಪುರ ಮೂಲಕ ಸಂಚರಿಸಲಿದೆ.

ಮದ್ಯಾಹ್ನ ಮೂರುವರೆ ಸುಮಾರಿಗೆ ಕರಾವಳಿಯಿಂದ ಹೊರಡುವ ರೈಲು ಬೆಳಿಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ.

ವಾರಕ್ಕೆ ಮೂರು ದಿನ ಮಂಗಳೂರಿನವರೆಗೆ ಮಾತ್ರ ಓಡುತಿದ್ದ ಈ ರೈಲನ್ನು ಆರೂದಿನ ಓಡುವಂತೆ ಮಾಡಿ ಕುಂದಾಪುರ ಕಾರವಾರಕ್ಕೆ ವಿಸ್ತರಣೆ ಮಾಡ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಸತತವಾಗಿ ಪ್ರಯತ್ನಿಸಿದ್ದು , ಅವರ ಬೇಡಿಕೆಯಂತೆ ವಾರಕ್ಕೆ ಮೂರು ದಿನದ ಬದಲು ಆರು ದಿನ ಓಡುವಂತೆ ಭಾರತೀಯ ರೈಲ್ವೇ ಕಳೆದ ವರ್ಷವೇ ಆದೇಶ ಮಾಡಿತ್ತು.

ಆದರೆ ರೈಲಿನ ಉಡುಪಿ ಕುಂದಾಪುರ ಕಾರವಾರ ವಿಸ್ತರಣೆ ಮಾತ್ರ ವಿಳಂಭವಾಗುತ್ತಲೇ ಇದ್ದ ಕಾರಣ ,ಕುಂದಾಪುರ ರೈಲ್ವೇ ಸಮಿತಿ ನಿರಂತರವಾಗಿ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೇ ಹಾಗು ನೈರುತ್ಯ ರೈಲ್ವೇ ಜತೆ ಬೆಂಗಳೂರಿಗೆ ಹೆಚ್ಚುವರಿ ರೈಲು ಸೇವೆಯ ಹೋರಾಟ ನಡೆಸಿತ್ತು.

ಈ ವಿಷಯಕ್ಕಾಗಿ ಒಂದು ಕಡೆ ಸತತವಾಗಿ ರೈಲ್ವೇ ಸಚಿವಾಲಯವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿಯಾಗುತಿದ್ದರೆ,
ಕಳೆದ ಜನವರಿಯಲ್ಲಿ ರೈಲು ಮಂಡಳಿಯನ್ನು ಬೇಟಿಯಾಗಿದ್ದ ಕುಂದಾಪುರ ರೈಲ್ವೇ ಸಮಿತಿಯ ಶ್ರೀ ಗಣೇಶ್ ಪುತ್ರನ್ , ಗೌತಮ್ ಶೆಟ್ಟಿ ಹಾಗು ಉತ್ತರ ಕನ್ನಡ ರೈಲ್ವೇ ಸಮಿತಿಯ ಶ್ರೀ ರಾಜೀವ್ ಗಾಂವಕರ್ ಬೆಂಗಳೂರಿಗೆ ವಾರದ ಆರು ದಿನದ ಬದಲು ಏಳು ದಿನವೂ ಓಡುವ ಹೆಚ್ಚುವರಿ ರೈಲಿನ ಪ್ರಸ್ತಾಪಕ್ಕೆ ಒಪ್ಪಿಗೆ ಪಡೇದು ರೈಲ್ವೇ ಸಚಿವರಿಗೆ ಅದನ್ನು ಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈ ಪ್ರಸ್ತಾಪದ ಮೇಲೆ ನಿರಂತರ ಕಾರ್ಯಶೀಲರಾದ ಮೈಸೂರು ಸಂಸದ ಪ್ರತಾಪ್ ಸಿಂಹ ಎಲ್ಲಾ ಸಮಸ್ಯೆಗಳನ್ನೂ ಮೀರಿ ರೈಲ್ವೇ ಸಚಿವರ ಒಪ್ಪಿಗೆ ಪಡೆದುದಲ್ಲದೇ ರೈಲ್ವೇ ಅದಿಕಾರಿಗಳ ಸಭೆ ಕರೆದು ದಸರಾ ಒಳಗೆ ರೈಲು ಓಡಲೇ ಬೇಕೆಂದು ಕಟ್ಟು ನಿಟ್ಟಿನ ಸೂಚನೆ ರವಾನಿಸಿದ ಪರಿಣಾಮ ಇಲಾಖೆ ಈ ರೈಲಿನ ವಿಸ್ತರಣೆಗೆ ಆದೇಶ ನೀಡಿದೆ.

ಮೂರು ವರ್ಷಗಳ ಹಿಂದೆ ಓಡುತಿದ್ದ ಮೈಸೂರು ಮಾರ್ಗದ ಬೆಂಗಳೂರು ರೈಲು ಕೊಂಕಣ ರೈಲ್ವೆಯ ಒತ್ತಡದಿಂದ ರದ್ದಾದ ಕಾರಣದಿಂದ ಉಂಟಾಗಿದ್ದ ಮೈಸೂರು ಸಂಪರ್ಕದ ಕೊರತೆ ಕೂಡಾ ಇದೀಗ ಮರು ಸ್ಥಾಪನೆಯಾಗಿದೆ.ಈ ಬಗ್ಗೆ ಕಳೆದ ವರ್ಷ ಕೊಂಕಣ ರೈಲ್ವೆ ಕಾರ್ಯಾಚರಣೆ ನಿರ್ದೇಶಕ ಸಂತೋಷ್ ಕುಮಾರ್ ಝಾ ಜತೆ ಕುಂದಾಪುರ ರೈಲ್ವೇ ಸಮಿತಿ ಸಭೆ ನಡೆಸಿ ಅವರಿಗೆ ಸಮಸ್ಯೆಯ ಅರಿವು ಮೂಡಿಸಿತ್ತು .

ಮೈಸೂರು ಮಾರ್ಗದ ರೈಲಿನ ವಿಸ್ತರಣೆ ಸಮಸ್ಯೆಗಳಿದ್ದರೆ ಈ ಶನಿವಾರ ಓಡುತ್ತಿರುವ ಯಶವಂತಪುರ ಮುರುಡೇಶ್ವರ ವಿಶೇಷ ರೈಲನ್ನೇ ಏಳೂ ದಿನ ಓಡಿಸುವಂತೆ ಕುಂದಾಪುರ ರೈಲ್ವೇ ಸಮಿತಿ ಸಂಸದೆ ಶೋಭಾ ಕರಂದ್ಲಾಜೆಯವರ ಮೂಲಕ ಇಲಾಖೆಗೆ ಸಂದೇಶ ನೀಡಿತ್ತು .
ರೈಲು ವಿಸ್ತರಣೆಯಿಂದ ಪಂಚಗಂಗಾ ರೈಲಿನ ಮೇಲಿದ್ದ ಬಾರೀ ಒತ್ತಡ ನಿವಾರಣೆಯಾಗಲಿದ್ದು ಮೈಸೂರು ಸಂಸದ ಪ್ರತಾಪ್ ಸಿಂಹ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ .

ಕರಾವಳಿ ಮತ್ತು ಮೈಸೂರು ಸಂಪರ್ಕದ ಕುರಿತು ಬೆಂಬಲಿಸಿದ್ದ ಕರಾವಳಿಯ ಸಂಸದರಿಗೂ , ಸಂಸದ ಪ್ರತಾಪ್ ಸಿಂಹರನ್ನು ಉಡುಪಿಯಲ್ಲಿ ಕುಂದಾಪುರ ರೈಲ್ವೇ ಸಮಿತಿ ಜತೆ ಬೇಟಿಯಾಗಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯರಾದ ಪ್ರತಾಪ್ ಶೆಟ್ಟಿ ಚೇರ್ಕಾಡಿ ಹಾಗು ಜಿಲ್ಲಾ ಬಿಜೆಪಿಯ ನಾಗರಾಜ್ ಆಚಾರ್ ರವರಿಗೂ ಹಾಗು ಮೈಸೂರು ಗ್ರಾಹಕ ಪರಿಷತ್ ನಾಯಕ ಶ್ರೀ ಯೋಗೇಂದ್ರ ಸ್ವಾಮಿಯವರಿಗೂ ಕುಂದಾಪುರ ರೈಲ್ವೇ ಸಮಿತಿ ಕೃತಜ್ಞತೆ ಅರ್ಪಿಸಿದೆ .

ಕುಂದಾಪುರ ರೈಲ್ವೇ ಸಮಿತಿಯ ನಿರಂತರ ಪ್ರಯತ್ನ ಹಾಗು ಮೈಸೂರು ಸಂಸದರ ಅಧ್ಭುತ ಕೆಲಸದಿಂದಾಗಿ ಕರಾವಳಿ ಕರ್ನಾಟಕಕ್ಕೆ ಹೊಸ ರೈಲು ಸೇವೆ ಲಭಿಸಿದ್ದು ಇದು ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಬಾರೀ ಅನುಕೂಲವಾಗಿದೆ.
-ಗಣೇಶ್ ಪುತ್ರನ್
ಕುಂದಾಪುರ ರೈಲ್ವೇ ಸಮಿತಿ

ಮೈಸೂರನ್ನು ಕರಾವಳಿಯ ಜತೆ ಬೆಸೆಯಲು ಸಂಪರ್ಕ ಕ್ರಾಂತಿಯ ಸಂಸದ ಎಂದೇ ಖ್ಯಾತಿಯಾದ ಪ್ರತಾಪ್ ಸಿಂಹರ ಶ್ರಮ ಹಾಗು ಭಾರತೀಯ ರೈಲ್ವೇಯ ಹಿರೀಯ ಅದಿಕಾರಿಗಳ ಸಹಕಾರದಿಂದ ಕರಾವಳಿಗೆ ಈ ಸೇವೆ ಲಭ್ಯವಾಗಿದ್ದು, ಬೆಂಗಳೂರಿನಿಂದ ತಡವಾಗಿ ಹೊರಡುವವರಿಗೆ ಹಾಗು ಬೆಂಗಳೂರು ಬೇಗನೆ ತಲುಪ ಬೇಕು ಎನ್ನುವವರಿಗೆ ಈ ವಿಸ್ತರಣೆಯಿಂದ ಅನುಕೂಲವಾಗಲಿದೆ. -ಗೌತಮ್ ಶೆಟ್ಟಿ
ಕುಂದಾಪುರ ರೈಲ್ವೇ ಸಮಿತಿ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!