spot_img
Wednesday, April 29, 2026
spot_img

ಸುಜಯೀಂದ್ರ ಹಂದೆಯವರ ‘ಯಕ್ಷ ದೀವಟಿಗೆ’ ಕೃತಿ ಅನಾವರಣ

ಕೋಟ : ಯಕ್ಷಗಾನವು ರೂಪ ಪ್ರಧಾನವಾದ ಕಲೆ. ಯಾವುದೇ ಕಲೆಯ ಸ್ವರೂಪ ಪ್ರಜ್ಞೆಯ ಅರಿವಿಲ್ಲದೆ ಮಾಡುವ ವಿಮರ್ಶೆ ಸಾಧುವಾದುದಲ್ಲ. ಕಲಾ ವಿಮರ್ಶೆಗೆ ಅನೇಕ ಮುಖಗಳಿವೆ. ಯಕ್ಷಗಾನದ ವಿಮರ್ಶೆಗೆ ಕಾರಂತರು, ಸೇಡಿಯಾಪು, ರಾಘವನ್ ಮೊದಲಾದ ಹಿರಿಯರ ಪರಂಪರೆಯಿದೆ. ವಿಮರ್ಶೆಯು ಯಾವುದೇ ಕಲೆಯಲ್ಲಿ ಪ್ರೀತಿಯನ್ನು, ತಿಳುವಳಿಕೆಯನ್ನು ಬೆಳೆಸಬೇಕು. ಆಳಕ್ಕಿಳಿಯದೆ ತಳಮಟ್ಟದ ಅಧ್ಯಯನ ಇಲ್ಲದೆ ಸರಿ ತಪ್ಪುಗಳ ವಿವೇಚನೆ ಕೂಡದು. ಕನ್ನಡ ಸಾಹಿತ್ಯದ ಸಮಗ್ರ ಅಧ್ಯಯನವೆಂದರೆ ಅದು ಯಕ್ಷಗಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ಮುಖ್ಯವಾಗಿ ಇತ್ತೀಚೆಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳಲ್ಲಿ ಅಸಮತೋಲನದ ಸಮಸ್ಯೆಯಿದೆ. ಯಕ್ಷಗಾನ ಎಂಬುದು ಒಂದು ಸಮಷ್ಠಿ ಕಲೆ. ಗಾನ, ಆಹಾರ್ಯ, ಆಂಗಿಕಾಭಿನಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡದೆ ಅದನ್ನು ಸಮಗ್ರವಾಗಿ ಸ್ವೀಕರಿಸುವುದೇ ಅದರ ಸೌಂದಂii. ಸ್ವತಃ ಕಲಾವಿದ, ನಿರ್ದೇಶಕರಾಗಿ ರಂಗಾನುಭವವನ್ನು ಹೊಂದಿರುವ ಹಂದೆಯವರ ಯಕ್ಷ ದೀವಟಿಗೆಯಲ್ಲಿ ಯಕ್ಷಗಾನ ರಂಗದ ಉನ್ನತಿಯ ಕಾಳಜಿ ಮತ್ತು ವ್ಯವಸ್ಥಿತವಾಗಿ ಕಲೆ ಉಳಿಯಬೇಕೆಂಬ ತುಡಿತವಿದೆ ಎಂದು ಲೇಖಕರು, ಅರ್ಥಧಾರಿಗಳು, ಯಕ್ಷಗಾನ ವಿದ್ವಾಂಸರೂ ಆದ, ಡಾ. ಪ್ರಭಾಕರ ಜೋಷಿ ಹೇಳಿದರು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ಪ್ರಕಟಿಸಿದ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನ ಯಕ್ಷ ದೀವಟಿಗೆ ಆಗಸ್ಟ್ 14 ರ ಸೋಮವಾರ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಛೇರಿಯಲ್ಲಿ ಅನಾವರಣ ಮಾಡಿ ಜೋಶಿಯವರು ಮಾತನಾಡಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆವಹಿಸಿ, ಕಲೆ ಸಾಹಿತ್ಯ ನಮ್ಮ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಬಲ್ಲುದು. ಎಳವೆಯಲ್ಲೆ ಕೊಟ್ಟ ಸಂಸ್ಕಾರವು ಮುಂದೆ ಬಾಳಿನ ಬೆಳಕಾಗಿ ಮೂಡಿಬರುತ್ತವೆ. ಯಕ್ಷಗಾನ ನಮ್ಮನ್ನು ಮೌಲ್ಯವಂತರನ್ನಾಗಿ ಮಾಡಿವೆ ಎಂದು ಶುಭಹಾರೈಸಿದರು.

ಕೃತಿಯ ಲೇಖಕರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಲಾ ಸಾಹಿತಿ ಜನಾರ್ದನ ಹಂದೆ ವಂದಿಸಿದರು. ಕುಮಾರಿ ಕಾವ್ಯ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!