Sunday, September 8, 2024

ಕುಂದಾಪುರದಲ್ಲಿ ಬ್ಯೂಟಿಷಿಯನ್ ತರಬೇತಿ: ಆಸಕ್ತರಿಗೆ ಅವಕಾಶ


ಕುಂದಾಪುರ, ಆ.17: ಕುಂದಾಪುರದಲ್ಲಿ ಇಂಟರ್ ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿ (ರಿ) ಬೆಂಗಳೂರು ವತಿಯಿಂದ ಅಡ್ವಾನ್ಸ್ ಹಾಗೂ ಬೇಸಿಕ್ ಬ್ಯೂಟಿಷಿಯನ್ ಹಾಗೂ ಪ್ರೊಫೆಷನಲ್ ಮೇಕಪ್ & ಹ್ಯಾಂಡ್ ಎಂಬ್ರೆಡಿಂಗ್ ವರ್ಕ್ ತರಬೇತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದೇ ತಿಂಗಳು ಆಗಸ್ಟ್ 21 ಸೋಮವಾರದಿಂದ ಕುಂದಾಪುರ ಮೊಟ್ಟಮೊದಲ ಬಾರಿಗೆ ಅಡ್ವಾನ್ಸ್ ಹಾಗೂ ಬೇಸಿಕ್ ಬ್ಯೂಟಿಷಿಯನ್ ಹಾಗೂ ಪ್ರೊಫೆಷನಲ್ ಮೇಕಪ್ & ಹ್ಯಾಂಡ್ ಎಂಬೈಡಿಂಗ್ ವರ್ಕ್ ಫೋಟೋಗ್ರಾಫಿ ವರ್ಕ್ ತರಭೇತಿಯನ್ನು ಅತಿ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಕೆಚ್ಚೆದೆ ಕನ್ನಡಿಗರ ಮಹಿಳಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ಇಂಟರ್ ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿ ಮಾಲಕಿ ಮಮತಾ ಶೆಟ್ಟಿ ಹೇಳಿದರು.

ಅವರು ಗುರುವಾರ ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸಕ್ತ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಲು ಸಹಕಾರಿಯಾಗುವಂತೆ ಕೌಶಲ್ಯ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಲು ವಿಷಯ ತಜ್ಞರು ಆಗಮಿಸಲಿದ್ದಾರೆ ಎಂದರು.

ಗ್ರಾಮೀಣ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಇಂಟರ್ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿ ಕಳೆದ 7 ವರ್ಷಗಳಿಂದ ಬೆಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಕಾರ್ಕಳ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ತರಬೇತಿ ಆಯೋಜನೆ ಮಾಡಿ ಯಶಸ್ವಿಯಾಗಿದ್ದೇವೆ. ಇಲ್ಲಿಯ ತನಕ ೫೦೦ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದು ಸ್ವತಂತ್ರವಾಗಿ ಬ್ಯೂಟಿಪಾರ್ಲರ್ ಗಳನ್ನು ತೆರದು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಒಂದೊಂದು ವಿಷಯಕ್ಕೆ ಸಂಬಂಧಿಸಿದ ತರಬೇತಿಗೆ ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ತರಬೇತಿಯ ಬಳಿಕ ಸ್ವ ಉದ್ಯೋಗ ಸ್ಥಾಪನೆಗೆ ಕಂಪೆನಿಯ ವತಿಯಿಂದ ಸಾಲಸೌಲಭ್ಯದ ವ್ಯವಸ್ಥೆ ಮಾಡಲಾಗುವುದು ಎಂದರು.

ಆಸಕ್ತರು ತರಬೇತಿ ಪಡೆಯಲು ದೂರವಾಣಿ ಸಂಖ್ಯೆ 7338658739 6361843315 ಯನ್ನು ಸಂಪರ್ಕಿಸಬಹುದಾಗಿ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಭಾರ್ಗವಿ, ಆಡಳಿತ ನಿರ್ದೇಶಕ ಶ್ರೇಯಸ್, ರಕ್ಷಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!