spot_img
Tuesday, April 28, 2026
spot_img

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ


ಕಾಸರಗೋಡು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಚಟುವಟಿಕೆಯ ಮೂಲಕ ಜನಪ್ರಿಯವಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆಗಸ್ಟ್ 11 ನೇ ತಾರೀಕಿನಿಂದ 17 ತನಕ ರಾಮಾಯಣ ಮಾಸಾಚರಣೆ ಪ್ರಯುಕ್ತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನವೂ ಮಧ್ಯಾಹ್ನ 2-30ಕ್ಕೆ ರಾಮಾಯಣ ಕೃತಿಯ ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ ಭಜನೆ, 7 ರಿಂದ ಪ್ರವಚನ- ರಾಮನಾಮ ಜಪಯಜ್ನ ನಡೆಯಲಿದೆ. ಪ್ರತಿದಿನ ಪುಂಡರೀಕಾಕ್ಷ ಬೆಳ್ಳೂರು, ಯೋಗಾಚಾರ್ಯ ಇವರಿಂದ ಪ್ರವಚನ ನಡೆಯಲಿದೆ. 11 ರಂದು ಹಾಗು 17 ರಂದು ಪ್ರಸಿದ್ದ ಕಲಾವಿದರಿಂದ, ಹಾಗು ಉಳಿದ ದಿನಗಳಲ್ಲಿ ಸಂಘ ಸಂಸ್ಥೆಗಳ ತಾಳಮದ್ದಳೆ ನಡೆಯಲಿರುವುದು.

ಕಾರ್ಯಕ್ರಮವನ್ನು ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು ಇಲ್ಲಿನ ಡಾ.ಹಾದಿಗಲ್ಲು ಲಕ್ಷ್ಮೀನಾರಾಯಣ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರಾದ ಡಾ.ಶಿವರಾಮ ಶೆಟ್ಟಿ ತಲ್ಲೂರು ವಹಿಸಲಿದ್ದಾರೆ. ಅತಿಥಿಗಳಾಗಿ ಅನನ್ಯ ಫೀಡ್ಸ್, ತಾರಿಹಳ್ಳ, ಹುಬ್ಬಳ್ಳಿ ಇದರ ನಿರ್ದೇಶಕ ದಿವಾಣ ಗೋವಿಂದ ಭಟ್, ಕಲಾಪೋಷಕ ಅವಿನಾಶ್ ರಾವ್ ಬರಂಗಾಯಿ, ಧರ್ಮಸ್ಥಳ ಭಾಗವಹಿಸಲಿದ್ದಾರೆ.

ತದನಂತರ ಪ್ರಸಿದ್ದ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ‘ಪಟ್ಟಾಭಿಷೇಕ’ ತಾಳಮದ್ದಳೆ ನಡೆಯಲಿದೆ.
ಭಾಗವತರು: ರಮೇಶ್ ಭಟ್ ಪುತ್ತೂರು, ಚೆಂಡೆ: ಮದ್ದಲೆ; ಮುರಾರಿ ಕಡಂಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ. ಪಾತ್ರವರ್ಗದಲ್ಲಿ ದಶರಥ: ರಾಧಾಕೃಷ್ಣ ಕಲ್ಚಾರ್, ಕೈಕೇಯಿ: ಹರೀಶ್ ಬಳಂತಿಮೊಗರು, ಮಂಥರೆ: ವೈಕುಂಠ ಹೇರ್ಳೆ ಸಾಸ್ತಾನ, ಶ್ರೀರಾಮ: ಡಾ.ಶ್ರುತಕೀರ್ತಿರಾಜ್ ಉಜಿರೆ, ಲಕ್ಷ್ಮಣ ; ಲಕ್ಷ್ಮಣ ಕುಮಾರ್ ಮರಕಡ ಭಾಗವಹಿಸಲಿದ್ದಾರೆ.

ಪ್ರತಿ ದಿನವೂ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಿರಿಬಾಗಿಲು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!