spot_img
Tuesday, April 28, 2026
spot_img

ಕುಂದಾಪುರ ಬಿಲ್ಲವ ಮಹಿಳಾ ಘಟಕದ ವತಿಯಿಂದ ‘ಆಷಾಡದ ಅಡುಗೆ’


ಕುಂದಾಪುರ, ಆ.5: ಕುಂದಾಪುರದ ಬಿಲ್ಲವ ಮಹಿಳಾ ಘಟಕದ ನೇತೃತ್ವದಲ್ಲಿ ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಆ.5ರಂದು ಶನಿವಾರ ಆಷಾಡದ ಅಡುಗೆ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಪ್ರತೀ ವರ್ಷವೂ ಬಿಲ್ಲವ ಮಹಿಳಾ ಘಟಕ ಆಷಾಡ ಮಾಸದಲ್ಲಿ ಹಿಂದೆ ಪ್ರಚಲಿ ತಿಂಡಿ-ತಿನಿಸುಗಳನ್ನು ನೆನಪಿಸುವ ಕಾರ್ಯಕ್ರಮ ಮಾಡುತ್ತಾ ಬರುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಅಪರೂಪದ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು.

ಸರಳವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲ್‌ಕಟ್ಟೆ ಮಾತನಾಡಿ, ಆಷಾಡದ ಅಡುಗೆಗೆ ವಿಶೇಷ ಮಹತ್ವವಿದೆ. ಆರೋಗ್ಯಕ್ಕೆ ಪೂರಕವಾಗಿ ಹಿಂದೆ ನೈಸರ್ಗಿಕವಾಗಿ ದೊರೆಯುವ ಅಮೂಲ್ಯವಾದ ವಸ್ತುಗಳನ್ನು ಬಳಸಿ ಅಡುಗೆ ತಯಾರಿಸುತ್ತಿದ್ದರು. ಪ್ರಸ್ತುತ ಅದನ್ನು ನೆನಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮಲ್ಲಿ ಬಿಲ್ಲವ ಸಂಘದ ಹಿರಿಯ ಸದಸ್ಯ ಶಂಕರ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಗಣೇಶ ವಿಠಲವಾಡಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ ಪೂಜಾರಿ ಕೋಡಿ ಉಪಸ್ಥಿತರಿದ್ದರು.

ಬಿಲ್ಲವ ಮಹಿಳಾ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿ ಶಾಂತಾ ವಾಸುದೇವ ಪೂಜಾರಿ ಅನಗಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಷಾಡ ಮಾಸ, ಕರ್ಕಟಕ ಅಮಾವಾಸ್ಯೆಯ ಕುರಿತು ಸ್ವರಚಿತ ಕುಂದಾಪ್ರ ಕನ್ನಡ ಕವನ ವಾಚಿಸಿದರು. ಬಿಲ್ಲವ ಮಹಿಳಾ ಘಟಕದ ಕಾರ್ಯದರ್ಶಿ ಗುಲಾಬಿ ಜಯಸೂರ್ಯ ವಂದಿಸಿದರು.

ಬಿಲ್ಲವ ಮಾತೃಸಂಘದ ಸದಸ್ಯರು, ನಾರಾಯಣ ಗುರು ಯುವಕ ಮಂಡಲದ ಸದಸ್ಯರು, ಮಹಿಳಾ ಘಟಕದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.

ಆಷಾಡದ ವಿಶೇಷ ತಿನಿಸುಗಳು:
ಆಷಾಡದ ಅಡುಗೆಯ ಅಂಗವಾಗಿ ಕೆಸುವಿನ ಚಟ್ನಿ, ಗಂಟುಸೊಪ್ಪು ಚಟ್ನಿ, ಸೊಪ್ಪಿನಿಂದ ತಯಾರಿಸಿದ ಅಕ್ಕಿರೊಟ್ಟಿ, ದಾಸವಾಳ ಸೊಪ್ಪಿನ ಇಡ್ಲಿ, ಸಬ್ಬಸಿಗೆ ಸೊಪ್ಪಿನ ಹಾಲುಬಾಯಿ, ಪ್ರತೋಡೆ, ಗಜಗಡ್ಡೆ ಸೊಪ್ಪಿನ ಪಲ್ಯ, ಕಳಲೆ ಪಲ್ಯ, ನುಗ್ಗೆ ಸೊಪ್ಪಿನ ಬೋಂಡ, ಬಾಳೆ ದಿಂಡಿನ ಬೋಂಡ, ಮಜ್ಜಿಗೆ ಹುಳಿಯ ತಂಬಳಿ, ಹಲಸಿನ ಬೀಜದ ವಡೆ, ಗೆಣಸತಿ, ಬಾಳೆ ದಿಂಡಿನ ಕೊಸುಂಬರಿ, ತೊಡೆದೆವು ಮೊದಲಾದ ಅಪರೂಪದ ಆಷಾಡದ ತಿಂಡಿ-ತಿನಿಸುಗಳು ಗಮನ ಸಳೆದವು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!