Sunday, September 8, 2024

ಬಿರುಗಾಳಿಗೆ ಉಳ್ಳೂರು 74 ಗ್ರಾಮದಲ್ಲಿ ಏಳು ಮನೆ, ಅಪಾರ ಕೃಷಿಗೆ ಹಾನಿ

ಕುಂದಾಪುರ: ಮಂಗಳವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದಲ್ಲಿ ಏಳು ಮನೆಗಳಿಗೆ ಹಾನಿಯಾಗಿ ಒಂದೂವರೆ ಸಾವಿರಕ್ಕೂ ಅಧಿಕ ಅಡಿಕೆ ಹಾಗೂ ತೆಂಗಿನ ಮರಗಳು ಧರಾಶಾಹಿಯಾಗಿವೆ.

ಜಯಕರ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 2 ಲಕ್ಷ ನಷ್ಟವಾಗಿದೆ. ಪಾರ್ವತಿ ಶೆಡ್ತಿಯವರ ಮನೆಗೆ ಸುಮಾರು 25 ಸಾವಿರ ರೂಪಾಯಿಯಷ್ಟು ಹಾನಿಯಾಗಿದೆ. ಸುಮತಿ ಶೆಡ್ತಿಯವರ ಮನಗೆ ಹಾನಿಯಾಗಿದ್ದು, 50 ಸಾವಿರ ರೂಪಾಯಿ ನಷ್ಟವಾಗಿದೆ. ರತ್ನಾಕರ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 20 ಸಾವಿರ ನಷ್ಟ ಅಂದಾಜಿಸಲಾಗಿದೆ. ನೀಲು ಪೂಜಾರ್ತಿಯವರ ಮನೆಗೆ 25 ಸಾವಿರ ನಷ್ಟ, ಗಿರಿಜಾ ಪೂಜಾರ್ತಿಯವರ ಮನೆಗೆ 20 ಸಾವಿರ ನಷ್ಟ ಅಂದಾಜಿಸಲಾಗಿದೆ, ಅಣ್ಣಪ್ಪ ಪೂಜಾರಿಯವರ ಮನೆಗೆ ಸುಮಾರು 25 ಸಾವಿರದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಹಲವರ ತೋಟಕ್ಕೆ ನುಗ್ಗಿದ ಗಾಳಿ ಸುಮಾರು 1600ಕ್ಕೂ ಅಧಿಕ ಅಡಿಕೆ ಮರ ಹಾಗೂ ನಾಲ್ಕು ತೆಂಗಿನ ಮರಗಳು ಧರೆಗುರುಳಿವೆ. ಸುಧಾಕರ ಶೆಟ್ಟಿಯವರ 225 ಅಡಿಕೆ ಮರ, ಶಂಕರ ಶೆಟ್ಟಿಯವರ 150, ಮಹಾಬಲ ನಾಯ್ಕರ 40, ಉದಯ ಪೂಜಾರಿಯವರ ತೋಟದ 15 ಮರ, ವನಜ ಆಚಾರ್ತಿಯವರ 35 ಮರಗಳು, ರತ್ನ ಆಚಾರಿಯವರ 75, ಲಕ್ಷ್ಮೀನಾರಾಯಣ ಆಚಾರಿಯವರ 25, ಕೃಷ್ಣ ಆಚಾರಿಯವರ 20, ಪಾರ್ವತಿ ಶೆಟ್ಟಿಯವರ 25, ಸಂಪಿಗೇಡಿ ನಾರಾಯಣ ಶೆಟ್ಟಿಯವರ 125 ಅಡಿಕೆ ಹಾಗೂ 4 ತೆಂಗಿನ ಮರ, ಸುಮತಿ ಶೆಡ್ತಿಯವರ 200 ಅಡಿಕೆ ಮರ, ರತ್ನಾಕರ ಶೆಟ್ಟಿಯವರ 200 ಅಡಿಕೆ, ದಿವಾಕರ ಶೆಟ್ಟಿಯವರ 220 ಮರ ಹಾಗೂ ಕಲಾವತಿ ಶೆಟ್ಟಿಯವರ 250 ಅಡಿಕೆ ಮರಗಳು ಮುರಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮಿ, ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಉಳ್ಳೂರು ಗ್ರಾಮ ಕರಣಿಕ ಕಿರಣ್. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಹೆಬ್ಬಾರ್. ಪಿಡಿ‌ಒ ಶ್ರೀಧರ್ ಕಾಮತ್. ಪಂಚಾಯತ್ ಸದಸ್ಯರುಗಳು. ಮುಖಂಡರಾದ ಸಂಜೀವ ಶೆಟ್ಟಿ ಸಂಪಿಗೇಡಿ, ರೋಹಿತ್ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಗೋಳಗಾದ ಮನೆ ಹಾಗೂ ಅಡಿಕೆ ತೋಟಕ್ಕೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!