Sunday, September 8, 2024

ಬಡತನವೆಂಬ ಕಾರ್ಮೋಡದಿಂದ ಮುಕ್ತರಾದ ಸಂಭ್ರಮವೇ ಆಷಾಢೋತ್ಸವ-ಸೂರ್ಯ ಎಸ್. ಪೂಜಾರಿ

ಮುಂಬಯಿ: ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಹಿಳಾ ಉಪಸಮಿತಿಯ ಸಂಯೋಜನೆಯಲ್ಲಿ ಜುಲೈ 30 ರವಿವಾರದಂದು ಥಾಣೆ ಪಶ್ಚಿಮದ ನಾಮ್ದೇವ್ ವಾಡಿ ಸಭಾಗೃಹದಲ್ಲಿ ಆಷಾಢೋತ್ಸವ ಮತ್ತು ಮನೋರಂಜನಾ ಕಾರ್ಯಕ್ರಮ ಜರಗಿತು.

ಮಹಿಳಾ ಸದಸ್ಯೆಯರು ಕುಂದಾಪುರ ಶೈಲಿಯ ಸುಮಾರು 28 ಬಗೆಯ ವಿವಿಧ ಖಾದ್ಯ-ವೈವಿಧ್ಯಗಳನ್ನು ಹಾಗೂ ಆಷಾಢ ಮಾಸದಲ್ಲಿ ಊರುಗಳಲ್ಲಿ ತಯಾರಿಸುವ ತಿಂಡಿ-ತಿನಿಸುಗಳನ್ನು ಸಮುದಾಯದ ಜನತೆಗೆ ಆಷಾಢೋತ್ಸವದ ಮೂಲಕ ಪರಿಚಯಿಸಿದರು.

ಮನೋರಂಜನೆಯ ಅಂಗವಾಗಿ ಸಂಘದ ಸದಸ್ಯರು ಮತ್ತು ಮಕ್ಕಳು ಸಮೂಹ ಗೀತೆ, ನೃತ್ಯ ಮತ್ತು ಕನ್ನಡ ಭಕ್ತಿಗೀತೆ, ಚಿತ್ರಗೀತೆಗಳನ್ನು ಹಾಡುವುದರ ಮೂಲಕ ನೆರೆದ ಸಮುದಾಯ ಬಾಂಧವರ ಮನರಂಜಿಸಿದರು. ಸಮುದಾಯದ ಅತಿಥಿ ಗಣ್ಯರೊಂದಿಗೆ ಸಭಾಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಷಾಢೋತ್ಸವ ಎಂದರೆ ಇದು ನಮ್ಮ ಕುಂದಾಪ್ರ ಬಿಲ್ಲವರ ಹಬ್ಬ ಇಂತಹ ಆಚರಣೆಗಳು ಯುವ ಜನಾಂಗಕ್ಕೆ ದಾರಿದೀಪ ನಾವು ಹಿಂದೆ ಸಾಕಷ್ಟು ಬಡತನವನ್ನು ನೋಡಿದ್ದೇವೆ ಇಂದಿನ ಯುವ ಪೀಳಿಗೆಗೆ ಆ ಬಡತನದ ಅರಿವು ಇಲ್ಲ ಅಂದು ಅನುಭವಿಸಿದ ಬಡತನದ ಬೇಗೆಯಿಂದ ಬಳಲಿದ ನಾವುಗಳು ಈ ಮಹಾನಗರಕ್ಕೆ ಬರುವಂತಾಯಿತು ಆದರೆ ನಾಲ್ಕೈದು ದಶಕಗಳ ಹಿಂದೆ ಆಷಾಢ ಮಾಸದಲ್ಲಿ ಅನ್ನವನ್ನೆ ಕಾಣದ ಅದೆಷ್ಟೋ ಕುಟುಂಬಗಳು ಇರುತ್ತಿದ್ದವು. ಗೆಡ್ಡೆ ಗೆಣಸುಗಳೆ ಅವರ ಆಹಾರವಾಗಿರುತ್ತಿತ್ತು. ಆದರೆ ನಾವಿಲ್ಲಿ ಸಂಭ್ರಮದಿಂದ ಆಷಾಢೋತ್ಸವ ಆಚರಿಸುವ ಉದ್ದೇಶವೇನೆಂದರೆ ಅಂದಿನ ಕರಾಳ ದಿನಗಳದಿಂದ ಮುಕ್ತರಾದ ನಾವು ಇಂದಿನ ಯುವ ಪೀಳಿಗೆಗೆ ಅಂದು ನಮ್ಮ ಹಿರಿಯರು ಅನುಭವಿಸಿದ ಕಷ್ಟವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಮನವರಿಕೆ ಮಾಡಿ ಕೊಡುವುದಲ್ಲದೆ ಬಡತನವೆಂಬ ಕಾರ್ಮೋಡದಿಂದ ಮುಕ್ತರಾದ ಸಂಭ್ರಮದ ಉತ್ಸವವೇ ಆಷಾಢೋತ್ಸವ ಎಂದು ಹೇಳಿದರು

ಸಂಘದಲ್ಲಿ ನೆಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಸಂಘಟನೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸುವುದರೊಂದಿಗೆ ಬಹುತೇಕ ಸೆಪ್ಟಂಬರ್ 3 ರಂದು ಸಂಘದ ನೂತನ ಕಾರ್ಯಾಲಯದ ಶುಭಾರಂಭ ನಡೆಯಲಿದೆ. ಈ ನೂತನ ಕಾರ್ಯಾಲಯಕ್ಕೆ ಇನ್ನು ಸುಮಾರು ಹದಿನೈದು ಲಕ್ಷದ ಅಗತ್ಯವಿದೆ ಆ ನಿಟ್ಟಿನಲ್ಲಿ ತಾವೆಲ್ಲರೂ ಸಹಕರಿಸಬೇಕು. ಈಗಾಗಲೇ ಸಂಘದಿಂದ ಹಲವಾರು ಸೌಲಭ್ಯಗಳು ಸದಸ್ಯರಿಗೆ ದೊರಕುತ್ತಿದೆ ಅದರ ಸದುಪಯೋಗವನ್ನು ಸದಸ್ಯರು ಪಡೆದುಕೊಂಡು ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಬೇಕು ಎಂದರು.

ಮುಖ್ಯ ಅತಿಥಿ ನ್ಯಾಯವಾದಿ ಶಕುಂತಲಾ ಎ. ಪೂಜಾರಿ ಆಷಾಢೋತ್ಸವಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸಂಘದ ಜತೆ ಕಾರ್ಯದರ್ಶಿ ಹರೀಶ ಎನ್. ಪೂಜಾರಿ, ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರುಗಳಾದ ಮಂಜುನಾಥ ಬಿಲ್ಲವ ಶಿರೂರು, ಆನಂದ ಎಮ್. ಪೂಜಾರಿ, ಉಪಾಧ್ಯಕ್ಷರುಗಳಾದ ನರಸಿಂಹ ಎಮ್. ಬಿಲ್ಲವ, ಆನಂದ ಕೆ. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ರತ್ನಾಕರ ಎಸ್. ಪೂಜಾರಿ, ಆಂತರಿಕ ಲೆಕ್ಕ ಪರಿಶೋಧಕ ರಾಜೀವ್ ಎಮ್. ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರೆ ಜೊತೆ ಕಾರ್ಯದರ್ಶಿ ಶಾರದಾ ಬಿ. ಪೂಜಾರಿ ವಂದಿಸಿದರು.

ಮಹಿಳಾ ಸಮಿತಿಯ ಉಪಕಾರ್ಯಾಧ್ಯಕ್ಷೆಯರಾದ ಯಶೋದಾ ಎಸ್. ಪೂಜಾರಿ ಮತ್ತು ರೇಖಾ ಎನ್. ಬಿಲ್ಲವ, ಜೊತೆ ಕಾರ್ಯದರ್ಶಿ ಕುಸುಮ ಎ. ಪೂಜಾರಿ, ಸದಸ್ಯೆಯರಾದ ಬೇಬಿ ಆರ್ ಪೂಜಾರಿ, ಸುಮತಿ ಎಸ್. ಪೂಜಾರಿ, ಗಿರಿಜಾ ಕೆ. ಹೊಕ್ಕೋಳಿ, ಸುಶೀಲ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ, ವಿಜಯಾ ಎಮ್. ಚಂದನ್, ಪೂರ್ಣಿಮಾ ಎಸ್. ಪೂಜಾರಿ, ಕಮಲ ಎಮ್. ಪೂಜಾರಿ, ನಾಗರತ್ನ ಎನ್. ಪೂಜಾರಿ ಸಹಕರಿಸಿದರು. ಮಹಿಳಾ ಸಮಿತಿಯೊಂದಿಗೆ ಸಂಘದ ಸದಸ್ಯೆಯರಾದ ಸುಜಾತ ವಿ. ಪೂಜಾರಿ, ಸುಮತಿ ಎಮ್. ಪೂಜಾರಿ, ಸೀತಾ ಜಿ. ಪೂಜಾರಿ, ಯಶೋದಾ ಪಿ. ಪೂಜಾರಿ, ಪಾರ್ವತಿ ಎಸ್. ಬಿಲ್ಲವ ಮತ್ತು ರಾಧಾ ಎಸ್. ಪೂಜಾರಿ ಆಷಾಢೋತ್ಸವಕ್ಕಾಗಿ ವಿವಿಧ ಖಾದ್ಯಗಳನ್ನು ತಯಾರಿಸಿದ್ದರು.

ಮನೋರಂಜನಾ ಕಾರ್ಯಕ್ರಮವನ್ನು ಜತೆ ಕಾರ್ಯದರ್ಶಿ ಹರೀಶ್ ಎನ್. ಪೂಜಾರಿ ನಿರ್ವಹಿಸಿದರೆ ಯುವ ಅಭ್ಯುದಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!