spot_img
Tuesday, April 28, 2026
spot_img

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಪ್ರಾಂಶುಪಾಲರಾಗಿ ಡಾ.ಶುಭಕರ ಆಚಾರಿ ನೇಮಕ


ಕುಂದಾಪುರ: ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೇಜು ಆಡಳಿತ ಮಂಡಳಿಯು ಡಾ.ಶುಭಕರ ಆಚಾರಿ ಅವರನ್ನು 1 ಆಗಸ್ಟ್ 2023ರಿಂದ ಪ್ರಾಂಶುಪಾಲರಾಗಿ ನೇಮಕ ಮಾಡಿದೆ.

ಕಾಲೇಜಿನ ಜನಪ್ರಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಆಗಿರುವ ಡಾ.ಶುಭಕರಾಚಾರಿ ಅವರು ಮೂಲತಃ ತೀರ್ಥಹಳ್ಳಿಯ ಗಬಡಿ ಗ್ರಾಮದ ಸೀತಾರಾಮ ಆಚಾರ್ಯ ಮತ್ತು ಇಂದಿರಾ ಅವರ ಪುತ್ರ. ತೀರ್ಥಹಳ್ಳಿಯ ತುಂಗಭದ್ರಾ ಮಹಾವಿದ್ಯಾಲಯಲ್ಲಿ ಪದವಿ ಶಿಕ್ಷಣದ ನಂತರ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದು ಡಾಕ್ಟರೇಟ್‌ನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು.

ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಕಾರ್ಕಳದ ಭುವನೇಂದ್ರ ಮತ್ತು ಮೂಡುಬಿದಿರೆ ಮಹಾವೀರ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿದ್ದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಾದ 2004ರ ಮಾದರಿ ಸಂಸತ್ತು, 2015ರ ಬುಡಕಟ್ಟು ಸಂಸ್ಕೃತಿ ಅನಾವರಣ, 2016ರ ವಿಕಲ ಚೇತನ ಸಮಾವೇಶ, 2017ರ ರಾಷ್ಟ್ರಮಟ್ಟದ ಬುಡಕಟ್ಟು ಸಮ್ಮೇಳನ, 2019ರಲ್ಲಿ ನಮ್ಮ ಕುಂದಾಪ್ರ ಸ್ವಚ್ಛ ಕುಂದಾಪ್ರ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಿದರು.
ಈ ಹಿಂದಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರು31 ಜುಲೈ 2023ರಂದು ನಿವೃತ್ತಿ ಹೊಂದಿದ್ದಾರೆ. 1 ಆಗಸ್ಟ್ 2013ರಿಂದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಶುಭಕರಾಚಾರಿ ನೇಮಕಗೊಂಡು ಕಾಲೇಜನ್ನು ಮುನ್ನಡೆಸಲಿರುವರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!