spot_img
Tuesday, April 28, 2026
spot_img

ಬೀಜಾಡಿ ರೋಟರಿ ಸಮುದಾಯ ದಳ ಪದಪ್ರದಾನ


ಕುಂದಾಪುರ: ರೋಟರಿ ಸಮುದಾಯದಳ ಮೂಲಕ ಗ್ರಾಮೀಣ ಭಾಗದಲ್ಲಿ ಸಮಾಜಸೇವಾ ಚಟುವಟಿಕೆ ಮಾಡಬಹುದಾಗಿದ್ದು, ಇದರಿಂದ ಸಮಾಜದ ಅಶಕ್ತರಿಗೆ ಸಹಾಯವಾಗಲಿದೆ ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಹೇಳಿದರು.

ಅವರು ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಶುಭ ಹಾರೈಸಿದರು.

ರೋಟರಿ ಸಮುದಾಯ ದಳದ ಹಿಂದಿನ ಅಧ್ಯಕ್ಷ ಬಿ.ಜಿ.ನಾಗರಾಜ್ ಅನಿಸಿಕೆ ಹಂಚಿಕೊಂಡರು. ನೂತನ ಅಧ್ಯಕ್ಷ ಪ್ರದೀಪ್ ದೇವಾಡಿಗ,ಕಾರ್ಯದರ್ಶಿ ಪಾಂಡುರಂಗ, ಕೋಶಾಧಿಕಾರಿ ಗಜೇಂದ್ರ ಮೊಗವೀರ, ಕ್ಲಬ್ ಸರ್ವಿಸ್ ಗಿರೀಶ್ ಕೆ.ಎಸ್.,ವೃತ್ತಿಪರ ಸೇವೆ ಸುಭಾಷ್ ಪುತ್ರನ್,ಅಂತರಾಷ್ಟ್ರೀಯ ಸೇವೆ ವಿವೇಕ್ ಹೆಬ್ಬಾರ್, ಸೋಶಿಯಲ್ ಸರ್ವಿಸ್ ಗಿರೀಶ್ ಆಚಾರ್ಯ, ದಂಡಪಾಣಿ ನಿಚ್ಚಿತ್ ಭಂಡಾರಿ ಇವರಿಗೆ ಪದಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಹಿಂದಿನ ಕಾರ್ಯದರ್ಶಿ ರೋನಿ ಡಿ ಸೋಜಾ ಉಪಸ್ಥಿತರಿದ್ದರು.

ಉಪನ್ಯಾಸಕ ಪಾಂಡುರಂಗ ಸ್ವಾಗತಿಸಿದರು.ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!