Sunday, September 8, 2024

ಕೊಲ್ಲೂರು ಅರಶಿನಗುಂಡಿ ಜಲಪಾತಕ್ಕೆ ಬಿದ್ದ ಯುವಕನ ಸುಳಿವು ಇನ್ನೂ ಅಲಭ್ಯ: ಮುಂದುವರಿದ ಶೋಧ ಕಾರ್ಯ


ಕುಂದಾಪುರ: ಜು.27: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ನೋಡುತ್ತಿದ್ದ ಸಂದರ್ಭ ಆಯಾತಪ್ಪಿ ಜಲಪಾತಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಯುವಕನ ಸುಳಿವು ಐದು ದಿನ ಕಳೆದರೂ ಪತ್ತೆಯಾಗಿಲ್ಲ. ಜುಲೈ 23ರ ಮಧ್ಯಾಹ್ನ ಈ ಘಟನೆ ಸಂಭವಿಸಿತ್ತು. ಕಳೆದ ರವಿವಾರದಿಂದಲೇ ಜಲಪಾತ, ಸೌಪರ್ಣಿಕ ನದಿಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿತ್ತಾದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.

ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿರುವುದರಿಂದ ಆ ಹಿನ್ನೆಲೆಯಲ್ಲಿಯೂ ಕೂಡಾ ಶೋಧ ನಡೆಸಲಾಗುತ್ತಿದೆ. ಪ್ರಸಿದ್ಧ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಕೂಡಾ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿತ್ತು. ಯಾವುದೇ ಪ್ರಯೋಜನವಾಗಿಲ್ಲ. ಮಂಗಳವಾರ ಚಿತ್ರದುರ್ಗದ ಕೋತಿರಾಜ್ ತಂಡ, ಎನ್.ಡಿ.ಆರ್.ಎಫ್ ತಂಡವೂ ಕೂಡಾ ಶೋಧ ಕಾರ್ಯ ನಡೆಸಿದೆ. ಅಗ್ನಿಶಾಮಕ ದಳ, ಪೊಲಿಸ್ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯರು ವ್ಯಾಪಕ ಹುಡುಕಾಟ ಮಾಡುತ್ತಿದ್ದಾರೆ.

ಅರಸಿನಗುಂಡಿ ಜಲಪಾತ ಅತ್ಯಂತ ದುರ್ಗಮವಾಗಿದ್ದು ಕಲ್ಲಿನ ಪೊದರುಗಳನ್ನು ಒಳಗೊಂಡಿದೆ. ಮೇಲಿನಿಂದ ನೀರು ಕೂಡಾ ರಭಸವಾಗಿ ಬೀಳುತ್ತದೆ. ನೀರಿನ ರಭಸಕ್ಕೆ ಸಿಕ್ಕು ಕಲ್ಲಿನ ಪೊಟರೆಗಳ ನಡುವೆ ಸಿಲುಕಿಕೊಂಡಿರಬಹುದು ಎನ್ನುವ ಶಂಕೆ ಕೂಡಾ ಇದೆ. ಅಲ್ಲದೇ ಸೌಪರ್ಣಿಕ ನದಿ ಕಾಡು ದಾರಿಯಲ್ಲಿ ಹರಿಯುವುದರಿಂದ ಕಳೆಬರಹ ಬಿಳಲುಬಲ್ಲೆ, ಪೊದೆಗಳಿಗೂ ಸಿಲುಕಿಕೊಂಡಿರಬಹುದು ಎನ್ನುವ ಊಹೆ ಕೂಡಾ ವ್ಯಕ್ತವಾಗುತ್ತಿದೆ. ಐದು ದಿನಗಳು ಆದರೂ ಕೂಡಾ ಮೃತದೇಹವೂ ಕೂಡಾ ಪತ್ತೆಯಾಗದಿರುವುದು ಕುಟುಂಬದ ರೋಧನ ಇನ್ನಷ್ಟು ಹೆಚ್ಚಿಸಿದೆ.

ಜುಲೈ 23ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯ ಶರತ್ ಮತ್ತು ಗುರುರಾಜ ನೊಂದಿಗೆ ಕಾರಿನಲ್ಲಿ ಕೊಲ್ಲೂರಿಗೆ ಬಂದಿದ್ದರು. ಮಧ್ಯಾಹ್ನ ಅರಸಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದರು. ದುರ್ಗಮವಾದ ಕಾಡಿನಲ್ಲಿ ಜಲಪಾತದ ಸನಿಹಕ್ಕೆ ಹೋಗಿದ್ದರು. ಶರತ್ ನೀರು ಧುಮ್ಮಿಕ್ಕುವ ಹತ್ತಿರದ ನೋಟ ನೋಡುವ ಸಲುವಾಗಿ ತೀರಾ ಹತ್ತಿರಕ್ಕೆ ಹೋಗಿದ್ದಾನೆ. ಬಂಡೆಯ ಮೇಲೆ ನಿಂತು ಜಲಪಾತ ವೀಕ್ಷಿಸಿ ತಿರುಗುವಾಗ ಕಾಲುಜಾರಿ ನೇರ ಜಲಪಾತಕ್ಕೇ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!