spot_img
Wednesday, January 22, 2025
spot_img

ಮಳೆಯ ಆರ್ಭಟಕ್ಕೆ ಧರಾಶಾಹಿಯಾಯಿತು ತಾರಪತಿ ಸ. ಹಿ. ಪ್ರಾ. ಶಾಲಾ ಕಟ್ಟಡದ ಮೇಲ್ಛಾವಣಿ

ಬೈಂದೂರು,ಜು.27: ಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಬೈಂದೂರು ತಾಲೂಕಿನ ಪಡುವರಿ ಗ್ರಾಮದ ತಾರಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ಬದಿಯ ಕಟ್ಟಡದ ಚಾವಣಿ ಕುಸಿದು ಬಿದ್ದಿದೆ.

ಜುಲೈ 27ರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಶಾಲೆಯ ಉತ್ತರ ಭಾಗದ ಕಟ್ಟಡದ ಮಾಡು ಸಂಪೂರ್ಣ ಧರಾಶಾಹಿಯಾಗಿದೆ.

ಈ ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಇದ್ದು 120 ಮಕ್ಕಳು ಹಾಗೂ ಕಿಂಡರ್ ಗಾರ್ಡನ್ ಮಾದರಿಯಲ್ಲಿ 30 ಮಕ್ಕಳು ಕಲಿಯುತ್ತಿದ್ದಾರೆ. ಕೊಠಡಿಯ ಕೊರತೆಯಿಂದಾಗಿ ಕುಸಿತಕೊಳಗಾದ ಕಟ್ಟಡದಲ್ಲಿ ಮಳೆಗಾಲ ಹೊರತುಪಡಿಸಿ ಇತರೆ ಸಮಯದಲ್ಲಿ ಎರಡು ತರಗತಿಗಳನ್ನು ನಡೆಸಲಾಗುತ್ತಿತ್ತು ಎನ್ನಲಾಗಿದೆ.

ಈಗ ಕುಸಿದಿರುವ ಶಾಲಾ ಕಟ್ಟಡ ಸುಮಾರು ೩೦ ವರ್ಷ ಹಳೆಯದಾಗಿದೆ. ಈ ಕಟ್ಟಡದ ತೆರವು ಮಾಡಲು ಒಂದು ವರ್ಷದ ಹಿಂದೆ ಶಾಲೆಯಿಂದ ಹಾಗೂ ಶಿಕ್ಷಣ ಇಲಾಖೆಯಿಂದ ವರದಿ ಸಲ್ಲಿಕೆಯಾಗಿದ್ದರೂ ಲೋಕಪಯೋಗಿ ಇಲಾಖೆಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಲ್ಲಿವರೆಗೆ ಪರಿಶೀಲನೆ ನಡೆಸಿದೆ ಇರುವುದರಿಂದ ಶಿಥಿಲಗೊಂಡ ಕಟ್ಟಡ ತೆರವಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!