Sunday, September 8, 2024

ಕುಳಂಜೆ ಶಾಲೆ ಹತ್ತಿರ ಮುಖ್ಯರಸ್ತೆಯ ಮೋರಿ ಕುಸಿತ

ಶಂಕರನಾರಾಯಣ: ಶಂಕರನಾರಾಯಣ ರಾಜ್ಯ ರಸ್ತೆಯ ಮಧ್ಯದಲ್ಲಿರುವ ಸ.ಹಿ.ಪ್ರಾ ಶಾಲೆ ಕುಳಂಜೆ ಶಾಲೆಯ ಎದುರುಗಡೆ ಇರುವ ಮೋರಿಯು ಕುಸಿದು, ಅದರ ತಡೆಗೋಡೆ ಜಾರಿ ಹೋಗಿದೆ.

ರಸ್ತೆಯು ಇಲ್ಲಿ ಬಾರಿ ಇಕ್ಕಟ್ಟಾಗಿದ್ದು ಎರಡು ವಾಹನಗಳು ಎದುರು ಭಾಗದಿಂದ ಬಂದರೆ ಒಂದು ವಾಹನ ಮೋರಿ ಕೆಳಗಡೆ ಜಾರುತ್ತದೆ. ಶಾಲಾ ಮಕ್ಕಳು ಸ್ವಲ್ಪ ಎಚ್ಚರ ತಪ್ಪಿದರೂ ನಡೆಯುವಾಗ ಮೋರಿಗೆ ಬೀಳಬಹುದು. ಮೋರಿಯಲ್ಲಿ ಗುಡ್ಡ ಬೆಟ್ಟದ ನೀರು ಹಾಗೂ ವಾರಾಹಿ ಕಾಲುವೆ ಹೆಚ್ಚುವರಿ ನೀರು ರಭಸದಿಂದ ಹರಿಯುತ್ತಿದೆ. ಸಂಬಂದಪಟ್ಟ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಚಿಟ್ಟೆ ರಾಜಗೋಪಾಲ ಹೆಗ್ಡೆ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!