spot_img
Tuesday, April 28, 2026
spot_img

ಯೋಗ ಬಂಧು ಕುಂದಾಪುರ ಆಯೋಜನೆಯಲ್ಲಿ ಯೋಗ ಮತ್ತು ಆರೋಗ್ಯ ಮಾಹಿತಿ ಶಿಬಿರ


ಕುಂದಾಪುರ: ಯೋಗ ಬಂಧು ಕುಂದಾಪುರ ನೇತೃತ್ವದಲ್ಲಿ ಕುಂದಾಪುರದ ಹೋಟೇಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಮತ್ತು ಆರೋಗ್ಯ ಮಾಹಿತಿ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಡಾ.ಮಹಮ್ಮದ್ ರಫಿಕ್ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, ಕೋರೋನ ನಂತರದಲ್ಲಿ ಮನುಷ್ಯನನ್ನು ಅತಿಯಾಗಿ ಕಾಡುತ್ತಿರುತ್ತಿರುವುದು ಕ್ಯಾನ್ಸರ್, ಹೃದಯಾಘಾತ, ಮತ್ತು ಕಿಡ್ನಿ ವೈಫಲ್ಯ ಸಮಸ್ಯೆಗಳು. ಇದಕ್ಕೆಲ್ಲ ಕಾರಣ ನಮ್ಮ ಅಭ್ಯಾಸ ಮತ್ತು ಆಹಾರ. ತಡವಾಗಿ ಮಲಗಿ, ತಡವಾಗಿ ಏಳುವುದು. ಪ್ಲಾಸ್ಟಿಕ್ ಬಳಕೆ, ಗುಟ್ಕಾ ತಿನ್ನುವುದು ಇತ್ಯಾದಿ. ಈ ಅಭ್ಯಾಸಗಳನ್ನು ಬಿಡಬೇಕಾಗಿದೆ. ಇನ್ನು ಆಹಾರ ಫಾಸ್ಟ್‌ಫುಡ್, ಐಸ್‌ಕ್ರೀಂ, ತಂಪು ಪಾನೀಯ ಇತ್ಯಾದಿ ಆಹಾರಗಳನ್ನು ತ್ಯಜಿಸಬೇಕು. ಗುಟ್ಕಾದಲ್ಲಿ ಸೀಸದ ಪುಡಿ ಸೇರಿಸಿರುತ್ತಾರೆ. ಸಕ್ಕರೆ ಸ್ವಚ್ಛ ಮಾಡಲು ಎಲುಬಿನ ಪುಡಿ ಸೇರಿಸುತ್ತಾರೆ. ಆದ್ದರಿಂದ ಇಂತಹ ಪದಾರ್ಥಗಳಿಂದ ದೂರವಿರಬೇಕು ಎಂದರು.

ಯೋಗ ಬಂಧು ಸಂಸ್ಥೆ ಪ್ರಾರಂಭಗೊಂಡು ಇಂದಿಗೆ 30 ವರ್ಷಗಳಾದ ಪ್ರಯುಕ್ತ, 30 ಗಳಿಂದಲೂ ಸಹಕರಿಸುತ್ತಿರುವ ಡಾ.ರಫಿಕ್ ಅವರನ್ನು ಸನ್ಮಾನಿಸಿ ಭಾರತದ ಅಮೃತ ಮಹೋತ್ಸವದ ಮೆಡಲ್ ಧಾರಣೆ ಮಾಡಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಯೋಗ ಬಂಧುಗಳಾದ ಗೋವಿಂದರಾಯ, ಆದರ್ಶ ಹೆಬ್ಬಾರ್, ಗಜಾನಂದ ಆಚಾರ್ಯ, ನಾಗೇಶ್ ಉಪಸ್ಥಿತರಿದ್ದರು.

ಯೋಗಬಂಧು ಸಂಜೀವಣ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯೋಗಬಂಧು ಅನಿಲ್ ಛಾತ್ರ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!