spot_img
Sunday, June 14, 2026
spot_img

ಕುಂದಾಪುರ ಡಾ.ಬಿ.ಬಿ. ಹೆಗ್ಡೆ ಕಾಲೇಜು ಕ್ರೀಡಾ ಸಾಧಕರಿಗೆ ಸನ್ಮಾನ

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ, ಅಂತರ್ ಕಾಲೇಜು ಮತ್ತು ಕಾಲೇಜು ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳಾದ ಸಾಫ್ಟ್‌ಬಾಲ್‌ನಲ್ಲಿ ತೃತೀಯ ಬಿ.ಕಾಂ. ಎ ವಿಭಾಗದ ನಿಸರ್ಗ ಖಾರ್ವಿ, ದ್ವಿತೀಯ ಬಿ.ಕಾಂ. ಸಿ ವಿಭಾಗದ ರೋಹನ್ ಪೂಜಾರಿ, ದ್ವಿತೀಯ ಬಿ.ಕಾಂ. ಎ ವಿಭಾಗದ ಲೋಕೇಶ್, ಪ್ರಥಮ ಬಿ.ಬಿ.ಎ.ನ ದಿನಕರ್, ಪ್ರಥಮ ಬಿ.ಎಸ್ಸಿ. ಡೇವಿಡ್, ಪ್ರಥಮ ಬಿ.ಕಾಂ. ಸಿ ವಿಭಾಗದ ಅಮಿತ್‌ರಾಜ್, ಪ್ರಥಮ ಬಿ.ಬಿ.ಎ. ನ ರಕ್ಷಕ್, ಚೆಸ್‌ನಲ್ಲಿ ತೃತೀಯ ಬಿ.ಎಸ್ಸಿ. ವಿಶಾಲ್, ದ್ವಿತೀಯ ಬಿ.ಸಿ.ಎ.ನ ದಿವ್ಯಾ, ಪ್ರಥಮ ಬಿ.ಬಿ.ಎ. ನ ಕಿರಣ್ ಮೊಗವೀರ, ಚರಣ್ ಶೆಟ್ಟಿ, ಕರಾಟೆಯಲ್ಲಿ ದ್ವಿತೀಯ ಬಿ.ಕಾಂ. ಎ ವಿಭಾಗದ ಪ್ರಜ್ವಲ್ ಶೆಟ್ಟಿ, ಸಚಿನ್ ದೇವಾಡಿಗ, ದ್ವಿತೀಯ ಬಿ.ಕಾಂ.ನ ನವ್ಯಾ, ಪವರ್ ಲಿಫ್ಟಿಂಗ್‌ನಲ್ಲಿ ದ್ವಿತೀಯ ಬಿ.ಕಾಂ. ಸಿ ವಿಭಾಗದ ವರುಣ್ ಇವರನ್ನು ವಾರ್ಷಿಕ ಕ್ರೀಡಾ ಹಬ್ಬ ಸಮಾರಂಭದಲ್ಲಿ ಪುರಸ್ಕರಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಕೆ. ಸೀತಾರಾಮ ನಕ್ಕತ್ತಾಯ, ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಡಾ. ರಮೇಶ್ ಹೆಚ್.ಎನ್., ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಮಧು ಜಿ. ಆರ್., ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಂಜಿತ್ ಟಿ. ಎನ್. ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!