Sunday, September 8, 2024

ಅಧಿವೇಶನದಲ್ಲಿ ಪ್ರಶ್ನೆ ಕೇಳುವುದೇ ಸಾಧನೆಯಲ್ಲ-ವಿಕಾಸ್ ಹೆಗ್ಡೆ


ಕುಂದಾಪುರ: ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುವುದು, ಅದು ಚುಕ್ಕೆ ಗುರುತಿನ ಪ್ರಶ್ನೆಯಾಗಿ ಮಾರ್ಪಟ್ಟಾಗ ಅದಕ್ಕೆ ಸದನದಲ್ಲಿ ಸರ್ಕಾರ ಉತ್ತರಿಸುವುದು ಇದನ್ನೇ ಶಾಸಕರ ಸಾಧನೆ ಎನ್ನುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸುವುದು ಅಭಿವೃದ್ಧಿಯಲ್ಲ್ಲ ಇದು ಕೇವಲ ಪ್ರಚಾರ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಟೀಕಿಸಿದ್ದಾರೆ.

ಕುಂದಾಪುರದ ಹಾಸ್ಟೆಲ್ ಸಮಸ್ಯೆ, ಜಿಲ್ಲೆಯ ಮೆಡಿಕಲ್ ಕಾಲೇಜು ಬೇಡಿಕೆ, ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ, ವಾರಾಹಿ ನೀರಾವರಿ ಯೋಜನೆಗೆ ಕಾಯಕಲ್ಪ, ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣ, ಡೀಮ್ಡ್, ಅಕ್ರಮ ಸಕ್ರಮ ಸಮಸ್ಯೆ ಪರಿಹಾರ, ಕುಂದಾಪುರಕ್ಕೆ ಉಪ ಸಾರಿಗೆ ಆಯುಕ್ತರ ಕಚೇರಿ, ಶೂನ್ಯ ಶಿಕ್ಷಕರಿರುವ ಶಾಲೆಗೆ ಶಿಕ್ಷಕರ ನೇಮಕ, ಪ್ರವಾಸೋದ್ಯಮ ಅಭಿವೃದ್ಧಿ ಇತ್ಯಾದಿ ಇದೆಲ್ಲಾ ಹಲವು ವರ್ಷಗಳ ಬೇಡಿಕೆ. ಜಿಲ್ಲೆಯಲ್ಲಿ ಸುದೀರ್ಘ ಅವಧಿಯಿಂದ ಕುಂದಾಪುರ ಹಾಗೂ ಜಿಲ್ಲೆಯ ಹೆಚ್ಚಿನ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹಾಗೂ ಸಂಸದರು ಆಯ್ಕೆಯಾದದ್ದು. ಪ್ರಸ್ತುತ ದೇಶದಲ್ಲಿ ಹಾಗೂ ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇವರ ಪ್ರಶ್ನೆ, ಆಗ್ರಹಗಳನ್ನು ನೋಡುವಾಗ ಇವರು ಕೇವಲ ಪ್ರಚಾರಕ್ಕೆ ಮಾತ್ರ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ ಎನ್ನುವುದು ಜನಸಾಮಾನ್ಯರಿಗೆ ಅರ್ಥವಾಗಿದೆ. ಸಮಸ್ಯೆಗಳ ಪರಿಹಾರದ ಆಸಕ್ತಿ ಇದ್ದಿದ್ದರೆ ಇವರ ಸರ್ಕಾರ ಇರುವಾಗ ಇವರು ಇದನ್ನೆಲ್ಲಾ ಪರಿಹರಿಸಬೇಕಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!