spot_img
Monday, April 27, 2026
spot_img

ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ  ಭೌತಶಾಸ್ತ್ರ ಕಾರ್ಯಾಗಾರ

 ಕುಂದಾಪುರ :  ಉಡುಪಿ ಜಿಲ್ಲಾ ಭೌತಶಾಸ್ತ್ರ  ಉಪನ್ಯಾಸಕರ ವೇದಿಕೆಯ  ಸಹಭಾಗಿತ್ವದಲ್ಲಿ ಶ್ರೀ ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ ದಿನಾಂಕ 28.06.2023 ರಂದು  ಭೌತಶಾಸ್ತ್ರದ  ಉಪನ್ಯಾಸಕರಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. 

ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ  ಇಲಾಖೆಯ  ಉಪನಿರ್ದೇಶಕರಾದ  ಮಾರುತಿ  ಕಾರ್ಯಾಗಾರವನ್ನು ಉದ್ಘಾಟಿಸಿ, ಉಪನ್ಯಾಸಕರು ಅತ್ಯುತ್ತಮ ಬೋಧನಾ ಶೈಲಿಯನ್ನು  ಅಳವಡಿಸಿಕೊಳ್ಳುವುದರ  ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ  ಕಾರ್ಯ ಪ್ರವೃತ್ತ ರಾಗಬೇಕು ಎಂದು ತಿಳಿಸಿದರು.

ಬಿದ್ಕಲ್ ಕಟ್ಟೆ ಸರಕಾರಿ  ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಡುಪಿ ಜಿಲ್ಲಾ ಭೌತ ಶಾಸ್ತ್ರ ಉಪನ್ಯಾಸಕರ ವೇದಿಕೆಯ  ಅಧ್ಯಕ್ಷ ವಿಘ್ನೇಶ್ವರ ಭಟ್ ಪ್ರಾಸ್ತಾವಿಕ   ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ  ಗೌರವಾಧ್ಯಕ್ಷರಾದ  ಯು. ಲಕ್ಷ್ಮೀನಾರಾಯಣ ಛಾತ್ರ   ಶುಭ ಶಂಸನೆಗೈದರು. ಮುಖ್ಯ ಅತಿಥಿಯಾಗಿ ಗೋವಾ ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರ ಹಾಗೂ ಅನ್ವಯಿಕ  ವಿಜ್ಞಾನದ  ಸಹಾಯಕ  ಪ್ರಾಧ್ಯಾಪಕರಾದ ಡಾ. ವೆಂಕಟೇಶ್. ಆರ್.ಹತ್ವಾರ್ ಉಪಸ್ಥಿತರಿದ್ದರು.

ಶ್ರೀ ವೆಂಕಟರಮಣ ಪದವಿ  ಪೂರ್ವ ಕಾಲೇಜಿನ ಪ್ರಾಂಶುಪಾಲರಾದ   ಶ್ರೀಮತಿ ರಾಗಿಣಿ   ಅಧ್ಯಕ್ಷತೆ ವಹಿಸಿದ್ದರು.

  ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿಗಳಾದ  ಸಿ. ಎಸ್. ಉಮಾಪತಿ  ಸ್ವಾಗತಿಸಿದರು.ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಖಜಾಂಚಿ  ಸದಾನಂದ  ಅವರು   ವಂದಿಸಿದರು. ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ  ಭರತ್  ಚಂದ್ರ.ಕೆ  ಕಾರ್ಯಕ್ರಮ ನಿರೂಪಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!