spot_img
Monday, April 27, 2026
spot_img

ಬಾರಕೂರಿನ ಸ್ವೀಝಲ್ ಫುರ್ಟಾಡೊ ಮಿಸ್ ಟೀನ್ ಯೂನಿವರ್ಸಲ್ ಇಂಟರ್ ನ್ಯಾಷನಲ್ ಪ್ರಿನ್ಸ್‌ಸ್-2023


ಬ್ರಹ್ಮಾವರ : ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ಸೋಮವಾರ ಸೌತ ಅಮೇರಿಕಾ ಪೆರುವಿನಲ್ಲಿ ನಡೆದ ಮಿಸ್ ಟೀನ್ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಮಿಸ್ ಟೀನ್ ಯೂನಿವರ್ಸಲ್ ಇಂಟರ್ ನ್ಯಾಷನಲ್ ಪ್ರಿನ್ಸ್‌ಸ್ 2023, ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಸ್ವೀಜಲ್ ಅವರಿಗೆ ಮಿಸ್ ಟೀನ್ ಯೂನಿವರ್ಸಲ್ ಏಷ್ಯಾ’ ಮತ್ತು ಅತ್ಯುತ್ತಮ ರಾಷ್ಟ್ರೀಯ ಕಾಸ್ಟೂಮ್ಸ ಪ್ರಶಸ್ತಿ’ಯನ್ನೂ ಮುಡಿಗೇರಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಸೂಪರ್ ಮಾಡೆಲ್ ಎಂದು ಗುರುತಿಸಿಕೊಂಡಿರುವ ೧೮ ವರ್ಷದ ಸ್ವೀಝಲ್ ಫುರ್ಟಾಡೋ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ಬಂದಿದ್ದಾರೆ.

2004 ರಲ್ಲಿ ಜನಿಸಿದ ಸ್ವೀಝಲ್, ಚಿಕ್ಕ ವಯಸ್ಸಿನಿಂದಲೂ ತನ್ನ ಪ್ರತಿಭೆ ಮತ್ತು ಸೌಂದರ್ಯ ಪ್ರದರ್ಶಿಸಿ ಬೆಂಗಳೂರು, ತಮಿಳುನಾಡು , ದೆಹಲಿಯಲ್ಲಿ ನಡೆದ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಯನ್ನು ಪಡೆದಿದ್ದಳು.

ಬೆಂಗಳೂರು ಸೈಂಟ್ ಜೋಸೆಪ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ. ಬಿ.ಏ ಶಿಕ್ಷಣ ಪಡೆದ ಸ್ವೀಝಲ್ ಫುರ್ಟಾಡೋ ಬಾರ್ಕೂರಿನ ಬೆಣ್ಣೆಕುದ್ರು ಮೂಲದ ಸವಿತಾ ಫುರ್ಟಾಡೊ ಅವರ ಪುತ್ರಿ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!