Sunday, September 8, 2024

ವಂಡ್ಸೆ ಈಶ್ವರ ಭಂಡಾರಿ ನಿಧನ

ಕುಂದಾಪುರ: ವಂಡ್ಸೆ ಗ್ರಾಮದ ಸಂಬಾರ್ತಿಯ ನಿವಾಸಿ ಈಶ್ವರ ಭಂಡಾರಿ (74 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜೂನ್ 15ರ ಬೆಳಿಗ್ಗೆ ನಿಧನರಾದರು.

ಸೌಕೂರು ರಾಮ ಭಂಡಾರಿ ಮತ್ತು ಸಂಭಾರ್ತಿ ರುಕ್ಕು ಭಂಡಾರಿ ಅವರ ಮಗನಾಗಿ ಜನಿಸಿದ ಈಶ್ವರ ಭಂಡಾರಿ ಅವರು, ಕಳೆದ 52 ವರ್ಷಗಳಿಂದ ವಂಡ್ಸೆಯಲ್ಲಿ ಸೆಲೂನ್ ಶಾಪ್ ನಡೆಸುತ್ತಿದ್ದರು. ಸೌಮ್ಯ ಸ್ವಭಾವದ ಸ್ನೇಹಹೃದಯಿಯಾಗಿದ್ದ ಅವರು ಜನಾನುರಾಗಿಯಾಗಿದ್ದರು. ಅವರ ವೃತ್ತಿಸೇವೆಗೆ ಸಾಕಷ್ಟು ಜನಮನ್ನಣೆ ದೊರಕಿತ್ತು. ಅವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಅಂಪಾರು ರೋಟರಿ ಕ್ಲಬ್, ಇಂಟರ್‍ಯಾಕ್ಟ್ ಕ್ಲಬ್, ವಿಜಯ ಮಕ್ಕಳ ಕೂಟದ ವತಿಯಿಂದ ಸನ್ಮಾನಿಸಲಾಗಿತ್ತು. ಶ್ರಮ ಜೀವನ, ವೃತ್ತಿ ಬದ್ಧತೆಗೆ ಹೆಸರಾಗಿದ್ದ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು.

ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!