spot_img
Wednesday, January 22, 2025
spot_img

ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ “ಶಕ್ತಿ ಯೋಜನೆ” : ಕುಂದಾಪುರದಲ್ಲಿ ಚಾಲನೆ

ಕುಂದಾಪುರ: ರಾಜ್ಯದೆಲ್ಲೆಡೆ “ಶಕ್ತಿ” ಯೋಜನೆ ಲೋಕಾರ್ಪಣೆಗೊಂಡಿದ್ದು ಮುಂದಿನ ಮೂರು ತಿಂಗಳುಗಳ ಒಳಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಶಕ್ತಿ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಹೇಳಿದರು.

ಅವರು ಜೂನ್ 11ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ ಕರ್ನಾಟಕದಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ “ಶಕ್ತಿ ಯೋಜನೆ” ಯನ್ನು ಕುಂದಾಪುರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಇಂದಿನಿಂದ ಯೋಜನೆ ಆರಂಭವಾಗಿದ್ದು, ಪ್ರಯಾಣಿಸುವ ಮಹಿಳೆಯರು ತಾತ್ಕಾಲಿಕವಾಗಿ ಕರ್ನಾಟಕದಲ್ಲಿ ವಾಸ್ತವ್ಯವಿರುವ ದಾಖಲೆಗಳನ್ನು ಬಸ್ ಕಂಡಕ್ಟರ್ ಗೆ ತೋರಿಸಬೇಕು. ಕಂಡಕ್ಟರ್ ಉಚಿತ ಪ್ರಯಾಣದ ಟಕೆಟ್ ನೀಡುತ್ತಾರೆ. ಪ್ರಯಾಣಿಕರು ಪ್ರಯಾಣ ಮುಗಿಯುವ ವರೆಗೂ ಉಚಿತ ಟಕೆಟನ್ನು ಜೊತೆಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಬೈಂದೂರು ತಹಸೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎನ್., ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ರಾಜೇಶ್ ಎಂ., ಮಂಗಳೂರು ವಿಭಾಗದ ಸಹಾಯಕ ಆಡಳಿತ ಅಧಿಕಾರಿ ರಾಜು ಉಪಸ್ಥಿತರಿದ್ದರು.

ಎಡಬ್ಲ್ಯೂ‌ಎಸ್ ಕುಂದಾಪುರ ಬಿ.ಟಿ.ನಾಯಕ್ ಸ್ವಾಗತಿಸಿದರು. ರಾಜೇಶ್ ಮೊಗವೀರ ಪ್ರಾಸ್ತಾವಿಸಿ, ಯೋಗೀಶ್ ಬಂಗೇರಾ ವಂದಿಸಿದರು.

ಬಳಿಕ “ಶಕ್ತಿ” ಯೋಜನೆಯ ಅಂಗವಾಗಿ ಶೃಂಗರಿಸಿದ್ದ ಬಸ್ಸಿಗೆ ಕಟ್ಟಲಾಗಿದ್ದ ರಿಬ್ಬನ್ ಕಟ್ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ತಹಸೀಲ್ದಾರ್ ಶೋಭಾಲಕ್ಷ್ಮೀ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಹಿಳೆಯರು ಎರಡು ಬಸ್ಸುಗಳಲ್ಲಿ ಕುಂದಾಪುರದ ಬಸ್ ನಿಲ್ದಾಣದಿಂದ ತ್ರಾಸಿ ವರೆಗೆ ಪ್ರಯಾಣಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!