
ಶಂಕರನಾರಾಯಣ: ಬೆಂಗಳೂರಿನ ನಾರಾಯಣ ನೇತ್ರಾಲಯದ ಹಿರಿಯ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮೃತರಾಗಿದ್ದು ಅವರ ಹುಟ್ಟೂರಿ (ಶಂಕರನಾರಾಯಣ) ಕ್ರೋಡ ಶಂಕರನಾರಾಯಣ ದೇಗುಲದಲ್ಲಿ ಸಂಸ್ಮರಣೆ ಕಾರ್ಯಕ್ರಮ ಜರಗಿತು.
ಡಾ.ಭುಜಂಗ ಶೆಟ್ಟಿಯವರು ಇದೇ ಊರಿನವರಾಗಿದ್ದು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಲ್ಲಿನ ಸ.ಕಿ.ಪ್ರಾ. ಶಾಲೆ ಕುಳಂಜೆಯಲ್ಲಿ ಓದಿದ್ದು ಊರಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು.
ಇವರು ವರನಟ ಡಾ.ರಾಜಕುಮಾರ ಹಾಗೂ ಅವರ ಪುತ್ರ ಪುನೀತ್ ರಾಜ್ ಸಹಿತ ಅನೇಕರ ನೇತ್ರಗಳನ್ನು ಮರಣ ನಂತರ ಹಲವರಿಗೆ ಅಳವಡಿಸಿ ಖ್ಯಾತಿ ಹೊಂದಿದ್ದರು. ತಾವು ತಮ್ಮ ನೇತ್ರಗಳನ್ನು ದಾನ ಮಾಡಿದ್ದರು.
ಶಂಕರನಾರಾಯಣ ಕ್ರೋಡ ಶಂಕರನಾರಾಯಣ ದೇವಳಕ್ಕೆ ಇವರ ಕುಟುಂಬ ವರ್ಗವು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಈ ಸಂದರ್ಭದಲ್ಲಿ ದೇಗುಲದ ಮೊಕ್ತೇಸರ ಲಕ್ಷ್ಮೀನಾರಾಯಣ ಉಡುಪರು ಸ್ಮರಿಸಿಕೊಂಡು ಇವರನ್ನು ಕಳೆದುಕೊಂಡ ನಾವು ಸಾಕಷ್ಟು ನಷ್ಟ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಕುಂಜೆ ರವೀಂದ್ರನಾಥ ಶೆಟ್ಟಿ, ಚಿಟ್ಟೆ ರಾಜಗೋಪಾಲ ಹೆಗ್ಡೆ, ಆವರ್ಸೆ ರತ್ನಾಕರ ಶೆಟ್ಟಿ, ಮಟಪಾಡಿ ಸದಾಶಿವ ಶೆಟ್ಟಿ, ಮೇಬೈಲ್ ಶೇಖರ ಶೆಟ್ಟಿ, ಕಳ್ಗಿ ಚಂದ್ರಶೇಖರ ಶೆಟ್ಟಿ, ಶ್ಯಾಮ ಶೆಟ್ಟಿ, ಬಿ.ಕೆ.ಶ್ರೀನಿವಾಸ, ಎ.ಪಿ.ಶೆಟ್ಟಿ, ರಾಮಚಂದ್ರ ದೇವಾಡಿಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.