Sunday, September 8, 2024

ಕುಂದಾಪುರ: ಮೊಗವೀರ ಸಮಾಜದ ಉಚಿತ ಸಾಮೂಹಿಕ ವಿವಾಹ

ಕುಂದಾಪುರ: ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಮತ್ತು ಉಡುಪಿ ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಮೇ.೩ರಂದು ಕುಂದಾಪುರ ಮೊಗವೀರ ಭವನದಲ್ಲಿ ನಡೆದ 14ನೇ ವರ್ಷದ ಸಾಮೂಹಿಕ ವಿವಾಹ ನಡೆಯಿತು. ಗೋಧೋಳಿ ಲಗ್ನದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ೨೦ ಜೋಡಿಗಳು ಸಪ್ತಪದಿ ತುಳಿದರು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ನೂತನ ವಧು-ವರರಿಗೆ ಮಾಂಗಲ್ಯ ವಿತರಿಸಿದರು. ಈ ಸಂದರ್ಭದಲ್ಲಿ ನೂತನ ದಂಪತಿಗಳನ್ನು ಆಶೀರ್ವದಿಸಿದ ಅವರು, ನಮಗೆ ವಧುವಿನ ಮುಂದಿನ ಭವಿಷ್ಯದ ಬಗ್ಗೆ ಕಾಳಜಿಯಿದ್ದು, ಅವರೊಂದಿಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಗೀತಾನಂದ ಟ್ರಸ್ಟ್ ಹಾಗೂ ಹಾಗು ಮೊಗವೀರ ಯುವ ಸಂಘಟನೆ ಜತೆಗಿರುತ್ತದೆ ಎಂದರು.

ಕೋಟದ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ ಕುಂದರ್ ಮಾತನಾಡಿ, ಸಾಮೂಹಿಕ ಮದುವೆ ಬಗ್ಗೆ ಸಂಕುಚಿತ ಮನಸ್ಥಿತಿ ಬೇಡ, ಹೆಚ್ಚೆಚ್ಚು ಇಂತಹ ವಿವಾಹಗಳು ನಡೆಯಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಧೂ-ವರರು ಹಸೆಮಣೆಯೇರುವಂತಾಗಲಿ ಎಂದರು.

ಸಂಘದ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕುಟುಂಬದ ಹಿರಿಯರ ಜತೆ ನವಜೋಡಿಗಳು ಕಲ್ಯಾಣ ಮಂಟಪಕ್ಕೆ ಆಗಮಿಸಿದಾಗ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಕುಂದಾಪುರದ ಪ್ರಸನ್ನ ಕುಮಾರ್ ಐತಾಳ್ ನೇತೃತ್ವದಲ್ಲಿ ಮದುವೆಯ ವಿಧಿವಿಧಾನಗಳು ನೆರೆವೇರಿದವು.

ಜಿ.ಶಂಕರ್ ಪತ್ನಿ ಶಾಲಿನಿ ಜಿ.ಶಂಕರ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ, ಪ್ರಮುಖರಾದ ವಿನಯ ಕರ್ಕೇರ ರಾಜು ಮೆಂಡನ್, ಕೆ.ಕೆ ಕಾಂಚನ್, ಸದಾನಂದ ಬಳ್ಕೂರು, ಪುಂಡಲೀಕ ಬಂಗೇರ, ಸುಮಿತ್ರಾ ಆನಂದ್, ರಾಮ ನಾಯ್ಕ್ ಬೀಜಾಡಿ, ರಾಜೀವ ಮರಕಾಲ ಬೀಜಾಡಿ, ಶಿವರಾಮ್ ಕೆ.ಎಂ., ಯುವ ಸಂಘಟನೆಯ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

ಶಿಕ್ಷಕ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!