spot_img
Sunday, April 26, 2026
spot_img

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ನಲಿಕಲಿ ಯಕ್ಷ ಶಿಬಿರದ ಉದ್ಘಾಟನೆ

ಬ್ರಹ್ಮಾವರ: ಮನಸ್ಸು ನಿರ್ಮಲವಾಗಿರಲು ಕಲೆ, ಸಾಹಿತ್ಯ, ಸಂಸ್ಕೃತಿಯ ಸ್ಪರ್ಶ ಬೇಕು. ಯಕ್ಷಗಾನ ಕಲಾಕೇಂದ್ರಗಳಂತಹ ಸಂಸ್ಥೆಗಳಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಾಣಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ಆಯೋಜಿಸಲಾದ 15 ದಿನಗಳ ಯಕ್ಷಗಾನ ಕಲಿಕಾ ಶಿಬಿರ ನಲಿ ಕುಣಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಬ್ಯಾಂಕ ಅಧಿಕಾರಿ ವಿಷ್ಣುಮೂರ್ತಿ ಹೊಳ್ಳ ಶಿಬಿರವನ್ನು ಉದ್ಘಾಟಿಸಿ ಕಲಾಕೇಂದ್ರದ ಕಲಾ ಬೆಳವಣಿಗೆಯ ಕಾರ್ಯವನ್ನು ಶ್ಲಾಘಿಸಿ, ಶಿಬಿರಕ್ಕೆ ಶುಭ ಹಾರೈಸಿದರು. ಕಲಾಸಕ್ತ ಉದ್ಯಮಿ ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ ಶಿಬಿರದಿಂದ ಸಮಾಜದ ಒಳಿತುಗಳನ್ನು ವಿವರಿಸಿದರು.

ಯಕ್ಷ ಗುರು ಸದಾನಂದ ಐತಾಳ ಮಾತನಾಡಿ ಲಲಿತಕಲೆಗಳು ಮನುಷ್ಯನಲ್ಲಿ ಸಂಸ್ಕಾರ ಬೆಳೆಸುತ್ತವೆ. ನೈತಿಕ ಶಿಕ್ಷಣ ಮತ್ತು ಮನೆ ಶಾಲೆಯಲ್ಲಿ ಸಿಗದ ಸಂಸ್ಕಾರ ಮಕ್ಕಳಿಗೆ ಇಂತಹ ಶಿಬಿರಗಳಿಂದ ಸಿಗುತ್ತದೆ ಎಂದರು. ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹತ್ತು ವರ್ಷಗಳ ಶಿಬಿರದ ಅನುಭವವನ್ನು ವಿವರಿಸಿದರು.

ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ರಾಮಚಂದ್ರ ಐತಾಳ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!