Sunday, September 8, 2024

ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗುರುರಾಜ ಗಂಟಿಹೊಳೆ ಗೆಲುವು ಸಾಧಿಸಲಿದ್ದಾರೆ-ಸಂಸದ ಬಿ.ವೈ.ರಾಘವೇಂದ್ರ


ಬೈಂದೂರಿನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಬೈಂದೂರು: ರಾಷ್ಟ್ರೀಯತೆಗೆ ಜೀವ ಕೊಟ್ಟಂತಹ ವ್ಯಕ್ತಿಗಳಿಗೆ ಪಕ್ಷ ಇವತ್ತು ಅವಕಾಶ ನೀಡಿದೆ. ಈ ಚುನಾವಣೆಯಲ್ಲಿ ಗುರುರಾಜ ಗಂಟಿಹೊಳೆ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ನಾಮಪತ್ರ ಸಲ್ಲಿಕೆಯ ಅಂಗವಾಗಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

ಗುರುರಾಜ ಗಂಟಿಹೊಳೆಯ ಹಿಂದೆ ಯುವ ಶಕ್ತಿ ಇದೆ. ಕಾರ್ಯಕರ್ತರು ಪೂರ್ಣ ಶ್ರಮವಹಿಸಿ ಅವರನ್ನು ಗೆಲ್ಲಿಸಿಕೊಡಲಿದ್ದಾರೆ. ಡಬ್ಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ದಿ ವೇಗವಾಗುತ್ತದೆ ಎಂದು ಹೇಳಿದ ಅವರು ಬೈಂದೂರು ಕ್ಷೇತ್ರದಲ್ಲಿ ೭೮೦ ಕೋಟಿ ವೆಚ್ಚದ ಪ್ರತಿ ಮನೆಗೂ ಕುಡಿಯುವ ನೀರು ನೀಡುವ ಯೋಜನೆ ಪ್ರಗತಿಯಲ್ಲಿದೆ. ಮರವಂತೆ ಹೊರಬಂದರು ಅಭಿವೃದ್ದಿಗೆ ೮೦ ಕೋಟಿ ಟೆಂಡರ್ ಆಗಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜನಸಾಮಾನ್ಯರ ನಡುವೆ ಇರುವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಭಾರತೀಯ ಜನತಾ ಪಕ್ಷ ನೀಡಿದೆ. ಮೇ ೧೩ರಂದು ಅವರು ಪ್ರಜಾತಂತ್ರದ ದೇಗುಲವನ್ನು ಗುರುರಾಜ್ ಗಂಟಿಹೊಳೆಯವರು ಪ್ರವೇಶ ಮಾಡುತ್ತಾರೆ. ಬಡವರ ನಡುವೆ ಇರುವ ಯುವಜನರ ಉತ್ಸಾಹದ ಸಂಕೇತ ವಿಧಾನಸಭೆ ಪ್ರವೇಶವೇ ಪ್ರಜಾತಂತ್ರ ವ್ಯವಸ್ಥೆಯ ಸೊಬಗು ಎಂದು ಹೇಳಿದರು.

ಇದು ವ್ಯಕ್ತಿಗಳ ನಡುವೆ ನಡೆಯುವ ಚುನಾವಣೆಯಲ್ಲ, ಸೈದ್ದಾಂತಿಕವಾದಂತಹ ನಡುವೆ ನಡೆಯುವ ಚುನಾವಣೆ, ಇದು ಭಯೋತ್ಪಾದನೆ ವೈಭವೀಕರಿಸು ಮತ್ತು ವಿರೋಧಿಸುವವರ ನಡುವೆ ನಡೆಯುವ ಚುನಾವಣೆ ಎನ್ನುವ ರೀತಿಯಲ್ಲಿ ಹೇಳಿದ್ದೇನೆಯೇ ಹೊರತು ಗೋಪಾಲ ಪೂಜಾರಿಯವರನ್ನು ಭಯೋತ್ಪಾದಕ ಎಂದು ಹೇಳಿಲ್ಲ. ಸ್ವಾಭಾವಿಕವಾಗಿ ಹೇಳುವ ಮಾತನ್ನೇ ಅಂದು ಹೇಳಿದ್ದೇನೆ. ಆದರೆ ಗೋಪಾಲ ಪೂಜಾರಿಯವರು ಅದನ್ನು ರಾಜಕಾರಣದ ವಿಚಾರವಾಗಿ ಬಳಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ರಾಜಕೀಯ ತಂತ್ರಗಾರಿಕೆ ಎಂದು ಅಭಿಪ್ರಾಯ ಪಟ್ಟರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ೨೩ ಕಗ್ಗೊಲೆಯಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ೧೭೦೦ಕ್ಕೂ ಜನರ ಮೇಲಿನ ಪ್ರಕರಣ ವಾಪಸ್ಸು ಪಡೆಯಲಾಯಿತು. ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರನ್ನು ಮತ್ತೆ ಏನು ಹೇಳಬೇಕು. ರಾಜ್ಯದಲ್ಲಿ ಭಯೋತ್ಪಾದನೆ ನಿಗ್ರಹ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಲೇಬೇಕು. ಗುರುರಾಜ ಗಂಟಿಹೊಳೆಯಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಭಯೋತ್ಪಾದಕರು ಬೈಂದೂರು ಭಾಗಕ್ಕೆ ತಲೆ ಹಾಕುವುದಿಲ್ಲ. ಬೈಂದೂರಿನ ಚೌಕಿದಾರ ಗುರುರಾಜ ಗಂಟಿಹೊಳೆ ಆಗುತ್ತಾರೆ ಎಂದರು.

ಕುಚಲಕ್ಕಿ ಕೊಡಲಾಗಲಿಲ್ಲ ಎಂದು ಆರೋಪ ಮಾಡಿದರು. ಕುಚಲಕ್ಕಿ ಕಲ್ಪನೆಯೇ ನಮ್ಮದು. ಕರಾವಳಿ ಜಿಲ್ಲೆಗೆ ೧ ತಿಂಗಳಿಗೆ ೧ಲಕ್ಷ ಕ್ವಿಂಟಲ್ ಅಕ್ಕಿ ಬೇಕಾಗುತ್ತದೆ. ವರ್ಷಕ್ಕೆ ೧೨ ಲಕ್ಷ ಕ್ವಿಂಟಲ್ ಅಕ್ಕಿ ಬೇಕಾಗುತ್ತದೆ. ಇನ್ನೂ ನನಗೆ ಐದು ವರ್ಷದ ಅವಧಿ ಇದೆ. ಖಂಡಿತಾ ಕುಚಲಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.

ಸಚಿವ ಸುನಿಲ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ತುಷ್ಟೀಕರಣದ ರಾಜಕಾರಣ ಮಾಡಿತ್ತು. ಬಿಜೆಪಿ ಸರ್ವವ್ಯಾಪ್ತಿ ರಾಜಕಾರಣ ಮಾಡುತ್ತದೆ. ಜನ ಆಲೋಚನೆ ಮಾಡಿ ಮತ ಚಲಾಯಿಸಬೇಕು. ಉಡುಪಿ ಜಿಲ್ಲೆಯ ಐದು ಸ್ಥಾನಗಳನ್ನು ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೆಪಿಯ ಕಾರ್ಯಕರ್ತರಲ್ಲಿ ನಾಳೆಯ ನಿರೀಕ್ಷೆ ಇರುವುದಿಲ್ಲ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಅವಕಾಶ ನೀಡಿದೆ. ಜನ ಆಶೀರ್ವಾದ ಮಾಡಿದರೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನಾವು ಚುನಾವಣೆ ಬಂದಾಗ ವೇಷ ಕಟ್ಟುವವರಲ್ಲ. ನಾವು ನಿರಂತರವಾಗಿ ಜನರ ಜೊತೆಗೆ ಇರುತ್ತೇವೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಉದಯಕುಮಾರ್ ಶೆಟ್ಟಿ, ಪಕ್ಷದ ಉಸ್ತುವಾರಿ ಬ್ರಿಜೇಶ್ ಚೌಟ, ಪ್ರಣಯ ಕುಮಾರ ಶೆಟ್ಟಿ, ಸುರೇಶ ಬಟ್ವಾಡಿ, ಬಿ ಕಿಶೋರ್ ಕುಮಾರ್, ಸುರೇಶ ಶೆಟ್ಟಿ ಬಿ‌ಎಸ್. ರೋಹಿತ್ ಕುಮಾರ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ಕೃಷ್ಣಪ್ರಸಾದ್ ಅಡ್ಯಂತಾಯ, ಆನಂದ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!