spot_img
Sunday, June 14, 2026
spot_img

ವೃತ್ತಿ ಸೇವೆ: ವಂಡ್ಸೆ ಈಶ್ವರ ಭಂಡಾರಿಯವರಿಗೆ ಸನ್ಮಾನ


ಕುಂದಾಪುರ: ರೋಟರಿ ಕ್ಲಬ್ ಅಂಪಾರು ಹಾಗೂ ವಿಜಯ ಮಕ್ಕಳ ಕೂಟ ಇಂಟರ್‍ಯಾಕ್ಟ್ ಕ್ಲಬ್ ಆತ್ರಾಡಿ ವತಿಯಿಂದ ಕ್ಷೌರಿಕ ವೃತ್ತಿ ಸೇವೆಯಲ್ಲಿ ಸುದೀರ್ಘ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈಶ್ವರ ಭಂಡಾರಿ ವಂಡ್ಸೆ ಅವರನ್ನು ಸನ್ಮಾನಿಸಲಾಯಿತು.

ರೋಟರಿ ವಲಯ 2ರ ಎ.ಜಿ ಪ್ರಭಾಕರ ಕುಂಭಾಸಿ ಅವರು ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ರೋಟರಿ ಕ್ಲಬ್ ಅಧ್ಯಕ್ಷ ಸದಾಶಿವ ವೈದ್ಯ ವಹಿಸಿದ್ದರು.

ವಿಜಯ ಮಕ್ಕಳ ಕೂಟದ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿಯವರು ಈಶ್ವರ ಭಂಡಾರಿಯವರ ವೃತ್ತಿಸೇವೆಯನ್ನು ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ರೋಟರಿಯ ನಿಕಟಪೂರ್ವ ಎ.ಜಿ ಧನಂಜಯ ಪ್ರಭು, ವಲಯ ಸೇನಾನಿ ಸುರೇಂದ್ರ ಶೆಟ್ಟಿ ಮೂಡುಬಗೆ, ಇಂಟರ್‍ಯಾಕ್ಟ್ ಅಧ್ಯಕ್ಷ ಟಿ.ಕೆ ನಂದಾ, ಕಾರ್ಯದರ್ಶಿ ವೈಷ್ಣವಿ ಭಟ್ ಉಪಸ್ಥಿತರಿದ್ದರು.

ವಿ.ಎಂ.ಕೆ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಅಂಪಾರು ರೋಟರಿ ಕ್ಲಬ್ ಕಾರ್ಯದರ್ಶಿ ಭೋಜರಾಜ್ ವಂದಿಸಿದರು. ರಾಜೀವ ಶೆಟ್ಟಿ ಶಾನ್ಕಟ್ಟು ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!