Sunday, September 8, 2024

ಶ್ರೀ ಬ್ರಹ್ಮಬೈದರ್ಕಳ ಗೋಳಿಗರಡಿ ಕ್ಷೇತ್ರದಲ್ಲಿ ಗೆಂಡಸೇವೆ, ತುಲಾಭಾರ ಸೇವೆ ಸಂಪನ್ನ

ಸಾಸ್ತಾನ: ಸಾಸ್ತಾನ ಗೋಳಿಗರಡಿಯ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ವಾರ್ಷಿಕ ಗೆಂಡಸೇವೆ, ತುಲಾಭಾರ, ಸಾಂಸ್ಕೃತಿಕ ಕಾರ್ಯಗಳು ಫೆ.22 ಮತು 23ರಂದು ವಿಜೃಂಭಣೆಯಿಂದ ಸಂಪನ್ನಗೊಂಡವು.

ವಾರ್ಷಿಕ ಜಾತ್ರೆಯ ಪ್ರಯುಕ್ತ ಫೆ.20ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬುಧವಾರ ಸಂಜೆ ಶಿವರಾಯ ದೇವರು, ಅಮ್ಮನವರಿಗೆ ಹೂವಿನ ಪೂಜೆ ನಡೆಯಿತು. ರಾತ್ರಿ ಗೆಂಡಸೇವೆ ನಡೆಯಿತು. ಬೇರೆ ಬೇರೆ ಭಾಗಗಳಿಂದ ಭಾಗವಹಿಸಿದ ಭಕ್ತಾಧಿಗಳು ಗೆಂಡಸೇವೆ ಸಲ್ಲಿಸಿ ಕೃತಾರ್ಥರಾದರು. ನಂತರ ಅನ್ನಸಂತರ್ಪಣೆ ನಡೆಯಿತು. ಬಳಿಕ ಪಂಜುರ್ಲಿ ಕೋಲ ನಡೆಯಿತು. ಶ್ರೀ ಕ್ಷೇತ್ರದ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವೆಯಾಟ ಜರುಗಿತು.

ಫೆ.23ರಂದು ಬೆಳಿಗ್ಗೆ 10 ಗಂಟೆಯಿಂದ ತುಲಾಭಾರ ಆರಂಭಗೊಂಡಿತು. ಮಧ್ಯಾಹ್ನ 2 ಗಂಟೆಯ ತನಕವೂ ತುಲಾಭಾರ ಸೇವೆ ನಡೆಯಿತು. ಸಾಕಷ್ಟು ಸಂಖ್ಯೆಯ ಭಕ್ತಾಧಿಗಳು ತುಲಾಭಾರ ಸೇವೆಯ ಹರಕೆಯನ್ನು ಸಲ್ಲಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಗೋಳಿಗರಡಿ ಸಾಂಸ್ಕೃತಿಕ ವೇದಿಕೆ ಸಾಸ್ತಾನ ವತಿಯಿಂದ ಡಾ.ಸತೀಶ್ ಪೂಜಾರಿ ಹಾಗೂ ಡಾ.ಜಿ ಭಾರತಿ (ವಕೀಲರು) ನೇತೃತ್ವದಲ್ಲಿ ಜಿಲ್ಲೆಯ ಹೆಸರಾಂತ ಗಾಯಕ ಹಾಗೂ ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು.

ಈ ಸಂದರ್ಭದಲ್ಲಿ ಗರಡಿಯ ಮೊಕ್ತೇಸರರು ಬಿ.ಸುಧಾಕರ ಶೆಟ್ಟಿ ಬಾಳ್ಕುದ್ರು ಹೆಗ್ಡೆಯವರ ಮನೆ, ಡಾ.ಕೃಷ್ಣಪ್ರಸಾದ್ ಶೆಟ್ಟಿ ಬಾಳ್ಕುದ್ರು ಹೆಗ್ಡೆಯವರಮನೆ, ಪಾತ್ರಿಗಳಾದ ಜಿ.ಶಂಕರ ಪೂಜಾರಿ ಗರಡಿಮನೆ, ಜಿ.ವಿಠಲ ಪೂಜಾರಿ ಗರಡಿಮನೆ, ಆಡಳಿತ ಮಂಡಳಿಯವರು, ಪಾತ್ರಿಗಳು, ಅರ್ಚಕರು ಹಾಗೂ ಗುರಿಕಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!