Sunday, September 8, 2024

ಐರೋಡಿ ಬುಡುಕುಬೆಟ್ಟು ಕುಲಾಲ ಕುಟುಂಬಸ್ಥರಿಂದ ಶ್ರೀ ಕ್ಷೇತ್ರ ಗೋಳಿಗರಡಿಗೆ ಬೆಳ್ಳಿಯ ಮುಖವಾಡ, ಪ್ರಭಾವಳಿ ಸಮರ್ಪಣೆ

ಸಾಸ್ತಾನ: ಐರೋಡಿ ಬುಡುಕುಬೆಟ್ಟು ಕುಲಾಲ ಕುಟುಂಬಸ್ಥರು ಹಾಗೂ ಸರ್ವ ಕುಲಾಲ ಕುಟುಂಬಸ್ಥರು ನಂಬಿಕೊಂಡು ಬಂದಿರುವ ಸಾಸ್ತಾನ ಶ್ರೀಕ್ಷೇತ್ರ ಗೋಳಿಗರಡಿಯ (ಹಾಗುಳಿ ಬಾಳ ಭಂಡಾರ ಇರುವ ಮನೆಯಲ್ಲಿ) ಶ್ರೀ ಹೈಗುಳಿ ಪಂಜುರ್ಲಿ ದೈವಕ್ಕೆ ಬೆಳ್ಳಿಯ ಮುಖವಾಡ, ಘಂಟೆಮಣಿ, ಗಿಂಡಿಗೆ, ಪ್ರಭಾವಳಿ ಸಮರ್ಪಣೆ ಫೆ.20 ಸೋಮವಾರ ಸಂಜೆ ನಡೆಯಿತು.

ಐರೋಡಿ ಬುಡುಕುಬೆಟ್ಟುವಿನಿಂದ ವೈಭವದ ಮೆರವಣಿಗೆಯ ಮೂಲಕ ಶ್ರೀ ದೇವರಿಗೆ ಅರ್ಪಿಸುವ ಪರಕರಗಳನ್ನು ಶ್ರೀ ಕ್ಷೇತ್ರ ಗೋಳಿಗರಡಿಗೆ ತರಲಾಯಿತು. ಶೋಭಾಯಾತ್ರೆಯಲ್ಲಿ ಪೂರ್ಣ ಕುಂಭ, ಸಾಂಪ್ರಾದಾಯಕ ವಾದ್ಯಘೋಷ, ಕೇರಳ ಶೈಲಿಯ ಚಂಡೆಯ ಅಬ್ಬರ, ಶ್ರೀ ಬ್ರಹ್ಮಬೈದರ್ಕಳ ಬಾಲ ಭಜನಾ ಮಂಡಳಿಯ ಸದಸ್ಯೆಯರಿಂದ ಕುಣಿತ ಭಜನೆ ಮೆರವಣಿಗೆಯಲ್ಲಿ ಗಮನ ಸಳೆಯಿತು. ನೂರಾರು ಕುಲಾಲ ಕುಟುಂಬಸ್ಥರು, ಭಕ್ತಾಭಿಮಾನಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಶಂಕರ ಕುಲಾಲ ಐರೋಡಿ ಅವರು ವಿಧಿವತ್ತಾಗಿ ಸಮಸ್ತ ಕುಟುಂಬಸ್ಥರ ಪರವಾಗಿ ಸೇವೆಯನ್ನು ಶ್ರೀ ದೇವರುಗಳಿಗೆ ಸಮರ್ಪಿಸಿದರು. ಗೋಳಿಗರಡಿಯ ಪ್ರಧಾನ ಪಾತ್ರಿಗಳಾದ ಜಿ.ಶಂಕರ ಪೂಜಾರಿ, ಜಿ.ವಿಠಲ ಪೂಜಾರಿ ಗರಡಿಮನೆ, ಹಾಗೂ ಡಾ. ಅಣ್ಣಯ್ಯ ಕುಲಾಲ್, ಲಕ್ಷ್ಮಣ ಕುಲಾಲ್, ಬುಡುಕುಬೆಟ್ಟು ಕುಟುಂಬಸ್ಥರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಐರೋಡಿ ಬುಡುಕುಬೆಟ್ಟುವಿನಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು ಸಂಪನ್ನಗೊಂಡವು. ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಬಳಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪನವರ ನಿರ್ದೇಶನದಲ್ಲಿ ಯಕ್ಷಗಾನ-ಸುಧೆ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!