spot_img
Wednesday, January 22, 2025
spot_img

ಕನ್ನಡ ಸಾರಸ್ವತ ಕ್ಷೇತ್ರದ ದಿಗ್ಗಜ ಅಂಬಾತನಯ ಮುದ್ರಾಡಿ ಇನ್ನಿಲ್ಲ

ಕುಂದಾಪುರ: ಕನ್ನಡ ಸಾರಸ್ವತ ಕ್ಷೇತ್ರ ಮೇರು ತಾರೆ, ಕವಿ, ಪ್ರಸಂಗಕರ್ತ, ತಾಳಮದ್ದಲೆ ಅರ್ಥಧಾರಿ, ಕಲಾವಿದ, ಹರಿಕಥೆ ಕೀರ್ತಕಕಾರ ಅಂಬಾತನಯ ಮುದ್ರಾಡಿ (88) ಇನ್ನಿಲ್ಲ. ಅವರು ಫೆ.21ರ ಮುಂಜಾನೆ ನಿಧನರಾಗಿದ್ದಾರೆ.

ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆಯನ್ನು ಮಾಡಿದ್ದರು. ಕಳೆದ ವಾರ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡದ್ದು ಇವರು ಇಳಿ ವಯಸ್ಸಿನಲ್ಲೂ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಯಕ್ಷಗಾನ ಕ್ಷೇತ್ರ ಅನೇಕ ಮೌಲಿಕ ಪ್ರಸಂಗಗಳನ್ನು ಅವರು ನೀಡಿದ್ದರು.

ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅರ್ಹವಾಗಿ ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!