spot_img
Saturday, June 13, 2026
spot_img

ವಂಡ್ಸೆ ಶಾರದಾಂಬಾ ದೇವಸ್ಥಾನ: ತ್ರಿಶೂಲದ ಹಿಡಿಕೆಗೆ ಬೆಳ್ಳಿಯ ಹೊದಿಕೆ ಸಮರ್ಪಣೆ

ಕುಂದಾಪುರ: ವಂಡ್ಸೆಯ ಸಪರಿವಾರ ಶ್ರೀ ಶಾರದಾಂಬಾ-ಹಾಗುಳಿ ಹಾಗೂ ಸ್ವಾಮಿ ಪರಿವಾರ ದೈವಗಳ ಗೆಂಡಸೇವೆ, ಢಕ್ಕೆಬಲಿ (ಡಮರು ಸೇವೆ), ಮಧ್ಯಾಹ್ನ ಅನ್ನಸಂತರ್ಪಣೆ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಪೂರ್ಣಿಮಾ ಭಾಸ್ಕರ ಸಾಲ್ಯಾನ್ ಅವರ ಪುತ್ರ ಶಿವರಾಜ ವಂಡ್ಸೆ ಮೇಸ್ತ್ರಿಮನೆ ಇವರು ದೇವರ ತ್ರಿಶೂಲದ ಹಿಡಿಕೆಗೆ ಬೆಳ್ಳಿಯ ಹೊದಿಕೆ ಸಮರ್ಪಿಸಿದರು. ಶ್ರೀಮತಿ ಜಯಶ್ರೀ ರಾಜೇಶ್ ಮತ್ತು ಮನೆಯವರು ಕುಂದಾಪುರ ಇವರ ಸೇವೆಯಾಗಿ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಎಮ್ ಭಾಸ್ಕರ, ಪಾತ್ರಿಗಳಾದ ಪೂರ್ಣಿಮಾ, ಪೂಜಾ ಅರ್ಚಕರಾದ ರಾಜಶೇಖರ ಉಪಾಧ್ಯಾಯ, ಗೋಪಾಲಕೃಷ್ಣ ಉಪಾಧ್ಯಾಯ, ಮೇಲ್ಮನೆ ವಂಡ್ಸೆ ಹಾಗೂ ಮೇಸ್ತ್ರಿ ಮನೆ ವಂಡ್ಸೆ ಕುಟುಂಬಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!