spot_img
Wednesday, January 22, 2025
spot_img

ಕರ್ನಾಟಕ ಹಿರಿಯರ ವಾಲಿಬಾಲ್ ತಂಡದ ನಾಯಕನಾಗಿ ಕುಂದಾಪುರದ ಅನೂಪ್ ಡಿಕೋಸ್ಟಾ ಆಯ್ಕೆ


ಕುಂದಾಪುರ: ಕರ್ನಾಟಕ ಹಿರಿಯರ ವಾಲಿಬಾಲ್ ತಂಡದ ನಾಯಕನಾಗಿ ಕುಂದಾಪುರದ ಅನೂಪ್ ಡಿಕೋಸ್ಟಾ ಆಯ್ಕೆಯಾಗಿದ್ದಾರೆ.

ಗುವಾಹಟಿಯಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರ ಮಟ್ಟದ ಹಿರಿಯರ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕದ ೧೨ ಜನರ ತಂಡ ಆಯ್ಕೆಯಾಗಿದ್ದು, ಕುಂದಾಪುರದ ಅನೂಪ್ ಡಿಕೋಸ್ಟಾ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ಈಗಾಗಲೇ ಪಂದ್ಯಾಟಕ್ಕೆ ಚಾಲನೆ ದೊರಕಿದೆ. ನೂರಾರು ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಅನೂಪ್ ಡಿಕೋಸ್ಟಾ ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಹಿರಿಯ ರಾಷ್ಟ್ರೀಯ ವಾಲಿಬಾಲ್ ತಂಡದ ನೇತೃತ್ವ ವಹಿಸಿದ್ದಾರೆ.

ಕಳೆದ 10 ವರ್ಷಗಳಿಂದ ಹೈದರಬಾದ್ ನಲ್ಲಿ ಇನ್-ಕಂ-ಟ್ಯಾಕ್ಸ್ ಇನ್ಸ್ಪೆಕ್ಟರ್ ಆಗಿರುವ ಅನೂಪ್ ಡಿಕೋಸ್ಟಾ ಕುಂದಾಪುರದ ಹಂಗಳೂರಿನ ಅಂಟೋನಿ ಡಿಕೋಸ್ಟಾ ಹಾಗೂ ಗೀತಾ ದಂಪತಿಗಳ ಪುತ್ರ.

ಅನೂಪ್ ಡಿಕೋಸ್ಟಾ ನಾಯಕತ್ವ ವಹಿಸಿರುವ ತಂಡದಲ್ಲಿ ಕಾರ್ತಿಕ್ ಎಸ್.ಎ., ಮಧು ಭರತ್, ಮನೋಜ್ ಕೆ.ಎಲ್., ಪವನ್ ಕೆ., ಸೂರಜ್ ಜಿ. ನಾಯ್ಕ್, ನವೀದ್ ಖಾನ್, ಕುಮಾರ್ ಗೌಡ, ಓಂಕಾರ್ ಎ ಪವಾರ್, ಅಮನ್ ಎಸ್. ಕುಸುಗಲ್, ಚಂದನ್ ಹಾಗೂ ರೋಹನ್ ಅಂಟೋನಿ ತಂಡದಲ್ಲಿದ್ದಾರೆ. ಭುಜೇಂದ್ರ ತಂಡದ ಮ್ಯಾನೇಜರ್ ಆಗಿದ್ದಾರೆ. ಅಮೀರ್ ಆಲಿ ಖಾನ್ ಚೀಫ್ ಕೋಚ್ ಆಗಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!