Thursday, November 21, 2024

ವಿಜ್ಞಾನ ಶಿಕ್ಷಕ ಗಂಗಾಧರ ಐತಾಳ್ ನಿಧನ

ಕುಂದಾಪುರ: ಅನುಭವಿ ವಿಜ್ಞಾನ ಶಿಕ್ಷಕ, ಲೇಖಕ, ಕುಂದಾಪುರದ ಬಸ್ರೂರು ಮೂರುಕೈ ‘ಸುರಗಂಗಾ’ದ ಗಂಗಾಧರ ಐತಾಳ್ (76ವ) ಫೆ.3ರಂದು ನಿಧನರಾದರು. ಇವರು ಖ್ಯಾತ ಲೇಖಕಿ, ಪ್ರಾಧ್ಯಾಪಕಿ ಡಾ.ಪಾರ್ವತಿ ಜಿ.ಐತಾಳ್, ಪುತ್ರಿಯರಾದ ಡಾ.ರಮ್ಯತಾ, ಎಂಜಿನಿಯರ್ ಸುಶ್ಮಿತಾ ಅವರನ್ನು ಅಗಲಿದ್ದಾರೆ.

ಕೋಡಿ ಕನ್ಯಾನದಲ್ಲಿ ಜನಿಸಿದ ಗಂಗಾಧರ್ ಐತಾಳ್ ಕುಂದಾಪುರದ ಸೈಂಟ್ ಮೇರೀಸ್ ಹೈಸ್ಕೂಲಿನಲ್ಲಿ ಗಣಿತ ಮತ್ತು ವಿಜ್ಞಾನ ಬೋಧನೆಯ ಮೂಲಕ ವಿದ್ಯಾರ್ಥಿಗಳ ಅಪಾರ ಮೆಚ್ಚುಗೆಗೆ ಪಾತ್ರರಾದವರು. 2005ರಲ್ಲಿ ಸೇವೆಯಿಂದ ನಿವೃತ್ತರಾದರು. ವಿಜ್ಞಾನ ಮಾದರಿಗಳ ತಯಾರಿ ಮೂಲಕ ಪರಿಣಾಮಕಾರಿಯಾಗಿ ವಿಜ್ಞಾನ ಬೋಧನೆ ಮಾಡುತ್ತಿದ್ದ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿಯೂ ಬಹುಮಾನ ಪಡೆದಿವೆ. ಇವರ ಶಿಕ್ಷಣ ಕ್ಷೇತ್ರದ ಸಾಧನೆಗೆ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ಕರ್ನಾಟಕ ಸರಕಾರವು ಕೂಡಾ ರಾಜೀವ ಗಾಂಧಿ ವಿಜ್ಞಾನ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇವರು ಮಕ್ಕಳಿಗಾಗಿ ಖಗೋಳವಿಜ್ಞಾನ ಎನ್ನುವ ಕೃತಿಯನ್ನು ಕೃತಿಯನ್ನು ರಚಿಸಿದ್ದಾರೆ. ಜನಪ್ರತಿನಿಧಿ ಪ್ರಕಾಶನ 2018ರಲ್ಲಿ ಈ ಕೃತಿಯನ್ನು ಪ್ರಕಟಿಸಿತ್ತು. ಈ ಪುಸ್ತಕ ಮಕ್ಕಳಿಗೆ ಪರಿಣಾಮಕಾರಿಯಾಗಿ ಖಗೋಳವಿಜ್ಞಾನದ ಅರಿವು ಮೂಡಿಸುವ ಮೂಲಕ ಜನಪ್ರಿಯತೆ ಪಡೆದಿತ್ತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!