spot_img
Saturday, April 18, 2026
spot_img

ಸುಗಮ ಸಂಗೀತ ಗಾಯಕ, ಗಮಕಿ ಚಂದ್ರಶೇಖರ ಕೆದ್ಲಾಯ ನಿಧನ

ಬ್ರಹ್ಮಾವರ: ನಿವೃತ್ತ ಶಿಕ್ಷಕ, ಸುಪ್ರಸಿದ್ಧ ಗಮಕಿ, ಸುಗಮ ಸಂಗೀತಗಾಯಕ, ಆಕಾಶವಾಣಿ ಕಲಾವಿದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ (73ವ) ಜ.24ರಂದು ಬ್ರಹ್ಮಾವರದ ಸ್ವಗೃಹದಲ್ಲಿ ನಿಧನರಾದರು.

ಹಾರ್‍ಯಾಡಿಯಲ್ಲಿ ಜನಿಸಿದ ಕೆದ್ಲಾಯರು ಹಾರ್‍ಯಾಡಿ, ಕೋಟೇಶ್ವರ, ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದರು. ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಕನ್ನಡ ಮೇಜರ್ ಬಿ.ಎ ಮುಗಿಸಿದ್ದರು. ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ 1 ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಉಡುಪಿ ಟಿ‌ಎಂಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್ ಮುಗಿಸಿ, 1976ರಿಂದ 2011ರ ತನಕ ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು.

ಕೆದ್ಲಾಯರು ಆಕಾಶವಾಣಿಯಲ್ಲಿ ಬಿ ಗ್ರೇಡ್ ಗಾಯಕರಾಗಿ ಸೇವೆ ಸಲ್ಲಿಸಿದ ಅವರು ದೂರದರ್ಶನದಲ್ಲಿ ಅವರ ಭಾವಗೀತೆಗಳು, ರಂಗಗೀತೆಗಳ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವಾರು ಧ್ವನಿಸುರುಳಿಗಳು, ಗಮಕ ವಾಚನ, ವ್ಯಾಖ್ಯಾನಗಳು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿವೆ.

ಮೃತರು ಪತ್ನಿ ಪೂರ್ಣಿಮಾ, ಪುತ್ರಿಯರಾದ ಅಕ್ಷತಾ ಉಪಾಧ್ಯಾಯ, ಪಲ್ಲವಿ ತುಂಗ ಅವರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!