spot_img
Saturday, April 18, 2026
spot_img

ಬೈಲೂರು ಸರಕಾರಿ ಶಾಲೆಯ ‘ಬಣ್ಣದ ಗರಿ’ ಶತ ಸಂಭ್ರಮ-2023 ಸಂಪನ್ನ

ಕುಂದಾಪುರ: ಬೈಲೂರು ಸರಕಾರಿ ಶಾಲೆ ಅಭಿವೃದ್ದಿಯಲ್ಲಿ ಮಾದರಿ ಶಾಲೆಯಾಗಿದೆ. ಸರಕಾರಿ ಶಾಲೆ ಬೆಳವಣಿಗೆ ಹಾಗೂ ಅಭಿವೃದ್ದಿಗೆ ಊರವರ, ವಿದ್ಯಾಭಿಮಾನಿಗಳ ಸಹಕಾರ ಅಗತ್ಯವಿದೆ” ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮತ್ತು ಹಳೆ ವಿದ್ಯಾಥಿ ಸಂಘ ಬೈಲೂರು ಇವರ ಸಹಯೋಗದೊಂದಿಗೆ ನಡೆದ ಬಣ್ಣದ ಗರಿ ಶತ ಸಂಭ್ರಮ 2023ರ ಹಿರಿಮೆ ಸಭಾ ಸಂಭ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಶಾಲಾ ಶತಮಾನೋತ್ಸವ ಸ್ಮರಣ ಸಂಚಿಕೆ “ಬಣ್ಣದ ಗರಿ”ಯನ್ನು ಅನಾವರಣ ಮಾಡಿದರು.

ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಶ್ರೀಮತಿ ಮಮತಾ ಆರ್.ಶೆಟ್ಟಿ, ಶಂಕರನಾರಾಯಣ ಗ್ರಾಪಂ ಅಧ್ಯಕ್ಷೆ ಲತಾ ಡಿ.ಎಸ್, ಉಪಾಧ್ಯಕ್ಷ ರವಿ ಕುಲಾಲ್, ಸದಸ್ಯರಾದ ಉಮೇಶ್ ಶೆಟ್ಟಿ ಕಲ್ಗದ್ದೆ, ಉಡುಪಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಅಂಪಾರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಉದ್ಯಮಿಗಳಾದ ಶ್ರೀನಿವಾಸ್ ಶೆಟ್ಟಿ, ಶಶಿಧರ್ ಶೆಟ್ಟಿ, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಚ್ಚಿದಾನಂದ ವೈದ್ಯ, ಶತಮಾನೋತ್ಸವ ಸಮಿತಿ ಖಜಾಂಚಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಲೆಗೆ ವಿವಿಧ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಜಯಕರ್ ಶೆಟ್ಟಿ ಮೂಡುಬೈಲೂರು ಅಧ್ಯಕ್ಷರು ಶಾಲಾ ಶತಮಾನೋತ್ಸವ ಸಮಿತಿ ಸ್ವಾಗತಿಸಿದರು, ಸಹ ಶಿಕ್ಷಕ ಸಂತೋಷ ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕಿ ಗಿರಿಜಾ ಡಿ ಶಾಲಾ ವರದಿ ವಾಚಿಸಿದರು. ಶಿಕ್ಷಕರಾದ ನಾರಾಯಣ್ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಆನಂದ್ ಕುಲಾಲ್ ವಂದಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಲುಮೆ, ಸುಬ್ರಹ್ಮಣ್ಯ ಐತಾಳ ಬೈಲೂರು ಮತ್ತು ಕಿಶೋರ ಕುಮಾರ ಆರೂರು ಸಂಚಾಲಕರು ಯಕ್ಷಸಿರಿ ಶಂಕರನಾರಾಯಣ ಇವರ ನಿರ್ದೇಶನದಲ್ಲಿ ತಕಧಿಮಿ ತಕೀಟ ಯಕ್ಷ ಸಂಭ್ರಮದಲ್ಲಿ ಪುಣ್ಯ ಕೋಟಿ ನೃತ್ಯ ರೂಪಕ ಮತ್ತು ಕುಶ ಲವ ಕಾಳಗ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!