Sunday, September 8, 2024

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯುವ ಮಧುಮೇಹಿಗಳಿಗೆ ಶೈಕ್ಷಣಿಕ ಕಾರ್ಯಕ್ರಮ

ಮಣಿಪಾಲ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಭಾರತ ಸರ್ಕಾರದ ಅನುದಾನಿತ ಯಂಗ್ ಡಯಾಬಿಟಿಸ್ ರಿಜಿಸ್ಟ್ರಿ (YDR) ಹಂತ III ಮತ್ತು ವೈದ್ಯಕೀಯ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲವು ಮಕ್ಕಳ  ವಿಭಾಗ ಮತ್ತು ಮಕ್ಕಳ ಎಂಡೋಕ್ರೈನಾಲಜಿ ಕ್ಲಿನಿಕ್, ಮಣಿಪಾಲ ಇದರ ಸಹಯೋಗದೊಂದಿಗೆ ಯುವ ಮಧುಮೇಹಿಗಳಿಗಾಗಿ ಒಂದು ದಿನದ ಶೈಕ್ಷಣಿಕ  ಕಾರ್ಯಕ್ರಮವನ್ನು ಆಯೋಜಿಸಿತ್ತು.

ಅನೇಕ ಯುವ ಮಧುಮೇಹಿಗಳು (2-25 ವರ್ಷ ವಯಸ್ಸಿನವರು) ತಮ್ಮ ಆರೈಕೆದಾರರೊಂದಿಗೆ ಭಾಗವಹಿಸಿದ್ದರು.  ಖಾಲಿ ಹೊಟ್ಟೆಯ  ರಕ್ತದ ಸಕ್ಕರೆ (FBS) ಮತ್ತು ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1c), ಆಂಥ್ರೊಪೊಮೆಟ್ರಿಕ್ ಮತ್ತು ಪ್ರಮುಖ ನಿಯತಾಂಕಗಳ ಪರೀಕ್ಷೆಗಳನ್ನು  ಉಚಿತವಾಗಿ ಮಾಡಲಾಯಿತು. ಮಣಿಪಾಲದ ಕೆಎಂಸಿಯ ವೈದ್ಯಕೀಯ ವಿಭಾಗದ  ಪ್ರಾಧ್ಯಾಪಕ ಮತ್ತು ವೈಡಿಆರ್ III ರ ಪ್ರಭಾರಿ  ಡಾ.ಶಿವಶಂಕರ ಕೆ.ಎನ್ ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ  ಡಾ. ಲೆಸ್ಲಿ ಎಡ್ವರ್ಡ್ ಲೂಯಿಸ್ ಅವರ ಆರಂಭಿಕ ಮಾತುಗಳೊಂದಿಗೆ  ಕಾರ್ಯಕ್ರಮವನ್ನು ಆರಂಭಿಸಲಾಯಿತು.   ಡಾ. ಕೌಶಿಕ್ ಉರಾಳ ಹೆಚ್, ಸಹಾಯಕ ಪ್ರಾಧ್ಯಾಪಕರು ಮತ್ತು ಮಕ್ಕಳ ಹಾರ್ಮೋನ್ ತಜ್ಞ, ಕೆಎಂಸಿ, ಮಣಿಪಾಲ ಅವರು  ಕಾರ್ಯಕ್ರಮದ ಕುರಿತು ಕಿರು ಪರಿಚಯ ನೀಡಿದರು. ಮಣಿಪಾಲದ ಕಸ್ತೂರ್ಬಾ  ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು ಸಮಾರೂಪ  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗೌರವಾನ್ವಿತ ಅತಿಥಿಯಾಗಿ  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಪಾಲ್ಗೊಂಡಿದ್ದರು.

ಯೋಗ ಕೇಂದ್ರದ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್, ಮಾಹೆ , ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗ, ಫಿಸಿಯೋಥೆರಪಿ ವಿಭಾಗ ಮತ್ತು ನೇತ್ರಶಾಸ್ತ್ರ ವಿಭಾಗಗಳ ಸಹಾಯದಿಂದ ಶೈಕ್ಷಣಿಕ ಕಾರ್ಯಕ್ರಮ ನಡೆಸಲಾಯಿತು ಮತ್ತು ನಂತರ ಉಚಿತ ಯೋಗ ಸಮಾಲೋಚನೆ ಹಾಗೂ  ಪ್ರದರ್ಶನ,  ಸಂಪೂರ್ಣ ವೈಜ್ಞಾನಿಕ ಪೌಷ್ಟಿಕಾಂಶದ  ಆಹಾರಕ್ರಮದ ಸಮಾಲೋಚನೆ ಹಾಗೂ ಪ್ರದರ್ಶನ, ಮಧುಮೇಹ ಪಾದದ ಆರೈಕೆಯ ಅರಿವು ಮತ್ತು ಮಧುಮೇಹ ಸಂಬಂಧಿತ   ಕಣ್ಣಿನ ತೊಂದರೆಗಳ  ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.

ಯುವ ಮಧುಮೇಹಿಗಳ ಅನುಭವ ಹಾಗೂ ಸ್ಪೂರ್ತಿದಾಯಕ ಮಾತುಗಳು, ಆಯೋಜಿಸಿದ್ದ ಆಟಗಳಲ್ಲಿ ಭಾಗವಹಿಸುವಿಕೆ, ರಸಪ್ರಶ್ನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು  ಈ  ಕಾರ್ಯಕ್ರಮದ ಭಾಗವಾಗಿತ್ತು, ಇದು ಯುವ ರೋಗಿಗಳನ್ನು ಹುರಿದುಂಬಿಸಲು ನಮಗೆ ಸಹಾಯ ಮಾಡಿತು. ಯುವ ಮಧುಮೇಹ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಪೌಷ್ಠಿಕಾಂಶವುಳ್ಳ   ಪಥ್ಯ  ಆಹಾರವನ್ನು ನೀಡಲಾಯಿತು. ಮಣಿಪಾಲದ ಕೆಎಂಸಿಯ ವೈದ್ಯಕೀಯ  ವಿಭಾಗದ ಐಸಿಎಂಆರ್ ವೈಡಿಆರ್ III ರ ಸಂಶೋಧನಾ ಅಧಿಕಾರಿ ಡಾ. ಅಜಿತ್ ಸಿಂಗ್ ಮತ್ತು  ಸಂಶೋಧನಾ ಸಹಾಯಕಿ ಶ್ರೀಮತಿ ಜ್ಯೋತಿ ನಾಯ್ಕ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!