spot_img
Saturday, April 18, 2026
spot_img

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರೆ ಆರಂಭ

ಕುಂದಾಪುರ, ಜ.14: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಕರ ಸಂಕ್ರಮಣ ಜಾತ್ರೆ ಇಂದು ವಿಜೃಂಭಣೆಯಿಂದ ಆರಂಭಗೊಂಡಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಮಾರಣಕಟ್ಟೆ ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಪ್ರಸಿದ್ಧಿಯನ್ನು ಹೊಂದಿದೆ. ಮಕರ ಸಂಕ್ರಮಣದಂದು ಬೆಳಿಗ್ಗೆಯಿಂದ ಸೇವಂತಿಗೆ ಪ್ರಿಯ ಬ್ರಹ್ಮಲಿಂಗೇಶ್ವರ ಸನ್ನಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಕಾರುಣ್ಯಸಿಂಧು ಪ್ರಾಣಲಿಂಗನಿಗೆ ಭಕ್ತಯಿಂದ ಭಕ್ತರು ಸೇವಂತಿಗೆ ಪುಷ್ಪ ಅರ್ಪಿಸಿ ಪುನೀತರಾಗುತ್ತಾರೆ. ಮಕರ ಸಂಕ್ರಮಣದ ಬೆಳಿಗ್ಗೆಯಿಂದಲೇ ತುಳುನಾಡಿನ ಭಕ್ತಾದಿಗಳು ಬುಟ್ಟಿಯಲ್ಲಿ ಸೇವಂತಿಗೆ ಹೊತ್ತು ಬ್ರಹ್ಮಲಿಂಗನ ಸನ್ನಿಧಿಗೆ ಅರ್ಪಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಮನೆಗೆ ತಗೆದುಕೊಂಡು ಹೋಗುವ ದೃಶ್ಯ ಮಕರ ಸಂಕ್ರಾಂತಿಯಂದು ಮಾರಣಕಟ್ಟೆಯಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಇದು ತಲೆತಲಾಂತರಗಳಿಂದ ಬಂದಿರುವ ವಾಡಿಕೆ ಮತ್ತು ನಂಬಿಕೆ. ಇಂದಿಗೂ ಅದು ಚಾಲ್ತಿಯಲ್ಲಿದೆ. ವರ್ಷದಿಂದ ವರ್ಷಕ್ಕೆ ತುಳುನಾಡಿಯಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಳ ಆಗುತ್ತಲೇ ಇರುತ್ತದೆ.

ಕಳೆದ ವರ್ಷ ಕೊರೋನಾ ಆತಂಕದಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಭಕ್ತ ಸಂಧೋಹವೇ ಹರಿದು ಬಂದಿದೆ. ಮಾರಣಕಟ್ಟೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದೆ.

ಜ.14ರ ರಾತ್ರಿ ಗೆಂಡಸೇವೆ ನಡೆಯಲಿದೆ. ಜ.15 ಮತ್ತು 16ರಂದು ಮಂಡಲ ಸೇವೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಫಲ ಪುಷ್ಪಗಳಿಂದ ದೇಗುಲ ಅಲಂಕಾರ:
ಈ ಬಾರಿ ಮಾರಣಕಟ್ಟೆಯಲ್ಲಿ ವಿಶೇಷವಾಗಿ ಫಲಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ವಿವಿಧ ಹಣ್ಣುಗಳನ್ನೇ ಪ್ರಧಾನವಾಗಿಸಿ ಅತ್ಯಂತ ಅಕರ್ಷಕವಾಗಿ ದೇವಾಲಯವನ್ನು ಶೃಂಗರಿಸಲಾಗಿದೆ. ಫಲ ಪುಷ್ಪಗಳ ವಿಶೇಷ ಅಲಂಕಾರದಿಂದ ಬ್ರಹ್ಮಲಿಂಗೇಶ್ವರನ ಸನ್ನಿಧಿ ಹೊಸ ಮೆರುಗು ಪಡೆದುಕೊಂಡು ಭಕ್ತಕೋಟಿಯನ್ನು ಪಾವನಗೊಳಿಸುತ್ತಿದೆ.

ಕ್ಷೇತ್ರಕ್ಕೆ ಆಗಮಿಸಿದ ಗಣ್ಯರು:
ಮಾರಣಕಟ್ಟೆಗೆ ಇಂದು ಗಣ್ಯರ ದಂಡೇ ಹರಿದು ಬಂದಿದೆ. ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ, ದೇವಸ್ಥಾನದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ‌ಉದ್ಯಮಿ ಕೃಷ್ಣಮೂರ್ತಿ ಮಂಜ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲಕುಮಾರ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ರಘುರಾಮ ಶೆಟ್ಟಿ , ದೇಗುಲದ ಪಾತ್ರಿಗಳು, ಉತ್ಸವದ ವಿವಿಧ ಪ್ರಾಯೋಜಕರು, ಉದ್ಯಮಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!