Sunday, September 8, 2024

ಕುಂದಾಪುರದಲ್ಲಿ ಸೂಪರ್ ಮಮ್ಮಿ ಸೂಪರ್ ಕಿಡ್ ಕಾರ್ಯಕ್ರಮ

ಲೇಡಿಸ್ ಫಸ್ಟ್ ಸ್ಟೆಪ್ ಮತ್ತು ಡಾನ್ಸ್ ಸ್ಟುಡಿಯೋ ಕುಂದಾಪುರ ಇವರ ನೇತೃತ್ವದಲ್ಲಿ ಜ.8ರಂದು ಜ್ಯೂನಿಯರ್ ಕಾಲೇಜು ಆವರಣದಲ್ಲಿನ ರೋಟರಿ ನರಸಿಂಹ ಕಲಾಮಂದಿರದಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದದಲ್ಲಿ ವಿನೂತನ ಕಾರ್ಯಕ್ರಮ ‘ಸೂಪರ್ ಮಮ್ಮಿ ಸೂಪರ್ ಕಿಡ್’ ಆಯೋಜಿಸಲಾಗಿತ್ತು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಅವಕಾಶ ನೀಡಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸುರೇಶ ತಲ್ಲೂರು, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ, ಚಿತ್ರಕಲಾ ಶಿಕ್ಷಕಿ ವಿಜೇತಾ ಗಂಗೊಳ್ಳಿ, ಉಪಸ್ಥಿತರಿದ್ದರು.
ರವೀಂದ್ರ ಹೆಚ್ ಸ್ವಾಗತಿಸಿ, ಅಕ್ಷತಾ ರಾವ್ ವಂದಿಸಿದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಕೊಲ್ಲೂರು ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ದಿನೇಶ ಹೆಗ್ಡೆ ಮೊಳಹಳ್ಳಿ, ನಾಗರಾಜ ಕಾಮಧೇನು, ನ್ಯಾಯವಾದಿ ಕಾಳಾವರ ಉದಯಕುಮಾರ್ ಶೆಟ್ಟಿ, ಡಾ.ಕಾಂತಿ ಹರೀಶ ಉಪಸ್ಥಿತರಿದ್ದರು. ಅಕ್ಷತಾ ರಾವ್ ಸ್ವಾಗತಿಸಿ ವಂದಿಸಿದರು.

ಸೂಪರ್ ಮಮ್ಮಿ, ಸೂಪರ್ ಕಿಡ್ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಅನನ್ಯ ಎಸ್ ಮಹಾಲಸ ಪಡೆದರು.ದ್ವಿತೀಯ ಬಹುಮಾನವನ್ನು ಪೂರ್ಣಿಮಾ ಮತ್ತು ಆರುಷಿ ಪಡೆದರು.

ಫಸ್ಟ್ ಸ್ಟೆಪ್ ಡಾನ್ಸ್ ಸ್ಟುಡಿಯೋ ಇಲ್ಲಿನ ಪುಟಾಣಿಗಳಿಂದ ನೃತ್ಯ ವೈವಿದ್ಯ ಹಾಗೂ ವಾಗ್ಜೋತಿ ಶ್ರವಣದೋಷವುಳ್ಳ ಮಕ್ಕಳಿಂದ ನೃತ್ಯ ವೈಭವ ಮತ್ತು ತಲ್ಲೂರು ನಾರಾಯಣ ವಿಶೇಷ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿದ್ಯ ನಡೆಯಿತು. ವಿಶೇಷ ಮಕ್ಕಳಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ಲಕ್ಷ್ಮೀದೇವಿ ಕಾಮತ್ ಮತ್ತು ಪ್ರಥ್ವಿರಾಜ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!