spot_img
Friday, April 17, 2026
spot_img

ಬೈಲೂರು: ಕೀರ್ತಿಶೇಷ ಹದ್ದೂರು ರಾಜೀವ ಶೆಟ್ಟಿ ಶತಮಾನ ಭವನ ಉದ್ಘಾಟನೆ: ಹದ್ದೂರರ ದ್ವಿತೀಯ ಪುಣ್ಯಸ್ಮರಣೆ

ಶಂಕರನಾರಾಯಣ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ಡಿ.9ರಂದು ಕೀರ್ತಿಶೇಷ ಹದ್ದೂರು ರಾಜೀವ ಶೆಟ್ಟಿ ಶತಮಾನ ಭವನ ಉದ್ಘಾಟನೆ ಮತ್ತು ಹದ್ದೂರರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಜರಗಿತು.

ರೋಟರಿ ಮಾಜಿ ಗೌವರ್ನರ್ ಜ್ಞಾನ ವಸಂತ ಶೆಟ್ಟಿ ಹದ್ದೂರು ರಾಜೀವ ಶೆಟ್ಟಿ ಶತಮಾನ ಸಭಾಭವನವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಕೆ.ಎಮ್.ಎಪ್ ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರು ಆದ ರವಿರಾಜ್ ಹೆಗ್ಡೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಡಿ ಎಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪ್ರೌಢ ಶಾಲಾ ಕನ್ನಡ ಶಿಕ್ಷಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ಹದ್ದೂರು ರಾಜೀವ ಶೆಟ್ಟರ ದ್ವಿತೀಯ ಪುಣ್ಯ ಸಂಸ್ಮರಣೆಯ ಅಂಗವಾಗಿ ಹದ್ದೂರರಿಗೆ ನುಡಿನಮನ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಭಾಕರ ಕುಂಭಾಶಿ, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಚ್ಚಿದಾನಂದ ವೈದ್ಯ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ, ಶಾಲಾ ಎಸ್‌ಡಿ‌ಎಮ್‌ಸಿ ಅಧ್ಯಕ್ಷ ಸಂತೋಷ ಕುಮಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ರವಿರಾಜ್ ಹೆಗ್ಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಕಿ ಹಂದೆ ಮತ್ತು ಹಿರಿಯರಾದ ದೋಣಿ ನಾವಿಕರಾದ ಅಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗೆ ರೂ. ಆರು ಲಕ್ಷ ವೆಚ್ಚದಲ್ಲಿ ಕೀರ್ತಿಶೇಷ ಹದ್ದೂರು ರಾಜೀವ ಶೆಟ್ಟಿ ಶತಮಾನ ಭವನವನ್ನು ನಿರ್ಮಿಸಿ ಕೊಟ್ಟ ಹದ್ದೂರು ರಾಜೀವ ಶೆಟ್ಟರ ಪತ್ನಿ ಮಮತಾ ಆರ್ ಶೆಟ್ಟಿಯವರನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಮೂಡುಬೈಲೂರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಹದ್ದೂರು ಕುಟುಂಬದವರು. ವಿಕಲಚೇತನ ಮಗುವಿಗೆ ಗಾಲಿ ಕುರ್ಚಿ, ಪ್ರತಿಭಾವಂತ ವಿದ್ಯಾರ್ಥಿ ದೇವಿಪ್ರಸಾದನಿಗೆ ವಿದ್ಯಾರ್ಥಿವೇತನ ಮತ್ತು ಶಾಲಾ ಮಕ್ಕಳಿಗೆ ನೋಟ್ ಪುಸ್ತಕವನ್ನು ವಿತರಿಸಿದರು.

ಶಂಕರನಾರಾಯಣ ರೋಟರಿ ಮಾಜಿ ಅಧ್ಯಕ್ಷ ದಯಾನಂದ ರಾವ್, ಸಹಶಿಕ್ಷಕಿ ಸಂಧ್ಯಾ ಕೆ., ವಿಜ್ಞಾನ ಪದವೀಧರ ಶಿಕ್ಷಕ ನಾರಾಯಣ ಅಡಿಗ, ಶಿಕ್ಷಕರು ಸನ್ಮಾನ ಪತ್ರ ವಾಚಿಸಿದರು. ಜಿ.ಪಂ.ಮಾಜಿ ಸದಸ್ಯೆ ಮಮತಾ ಆರ್ ಶೆಟ್ಟಿ ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕ ಸಂತೋಷ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!