spot_img
Friday, April 17, 2026
spot_img

ಅಮಾಸೆಬೈಲು ವಲಯ ಶೆಟ್ಟಿಗಾರ, ಪದ್ಮಶಾಲಿ ಸಮಾಜ ಸೇವಾ ಸಂಘ: ವಾಷಿ೯ಕ ಮಹಾಸಭೆ

ಕುಂದಾಪುರ: ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯಿಂದ ತಾನು-ತನಗಾಗಿ ತನ್ನವರಿಗಾಗಿ ಚಿಂತಿಸುವಂತೆ, ತಾನು ಹುಟ್ಟಿ ಬೆಳೆದ ಸಮಾಜದ ಬಗೆಗೆ ಚಿಂತಿಸಬೇಕಾದುದೂ ಅನಿವಾರ್ಯ ಎಂದು ಬಸ್ರೂರು ವಲಯ ಕ್ರಿಯಾ ವೇದಿಕೆಯ ಸ್ಥಾಪಕ ಅಧ್ಯಕ್ಷ ರಾಜೇಂದ್ರ ಶೆಟ್ಟಿಗಾರ ಹೇಳಿದರು.

ಅವರು ಅಮಾಸೆಬೈಲು ತೊಂಬಟ್ಟು ಮಹಾಗಣಪತಿ ಸಭಾಭವನದಲ್ಲಿ ನಡೆದ ಅಮಾಸೆಬೈಲು ವಲಯ ಶೆಟ್ಟಿಗಾರ /ಪದ್ಮಶಾಲಿ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ವೆಂಕಟರಮಣ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿದ್ದರು.

ದ. ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಜಯರಾಂ ಮಣಿಪಾಲ, ದ. ಕ. ಜಿಲ್ಲಾ ಪದ್ಮಶಾಲಿ ಸಂಘದ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿಗಾರ, ನಿವೃತ್ತ ದೂರವಾಣಿ ಇಲಾಖೆಯ ಶ್ರೀನಿವಾಸ ಶೆಟ್ಟಿಗಾರ ದೊಣ್ಣಣಗುಡ್ಡೆ, ಮೂಡುಬಿದಿರೆ ಎಕ್ಸಲ್ ಪ. ಪೂ ಕಾಲೇಜಿನ ಉಪನ್ಯಾಸ ಕ ಪುರುಷೋತ್ತಮ ಶೆಟ್ಟಿಗಾರ, ವ್ಯ. ಸೇ. ಸ. ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ಮಂಜುನಾಥ ಶೆಟ್ಟಿಗಾರ ಹಂಚಿಕಟ್ಟೆ ಉಪಸ್ಥಿತರಿದ್ದರು.

ಬಳ್ಮನೆ ಚತುರ್ಮುಖ ದೇವಳದ ಆಡಳಿತ ಮೊಕ್ತೇಸರ ಕರುಣಾಕರ ಶೆಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ವ್ಯವಸ್ಥೆ ಮಾಡಿದ ನಾಗೇಶ್ ಶೆಟ್ಟಿಗಾರ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಶ್ರೀಧರ ಶೆಟ್ಟಿಗಾರ ಬೇಕಿ೯ ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಶೆಟ್ಟಿಗಾರ, ವಿಶ್ವನಾಥ ಶೆಟ್ಟಿಗಾರ ತೊಂಬಟ್ಟು, ವಿಶ್ವನಾಥ ಶೆಟ್ಟಿಗಾರ ಶಂಕರನಾರಾಯಣ ವಿವಿಧ ಪಟ್ಟಿಗಳನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ವಿನ್ ಶೆಟ್ಟಿಗಾರ ಅತಿಥಿಗಳನ್ನು ಗೌರವಿಸಿದರು. ಪ್ರವೀಣ ಶೆಟ್ಟಿಗಾರ ಕಾಯ೯ಕ್ರಮ ನಿವ೯ಹಿಸಿದರು. ಶೇಖರ ಶೆಟ್ಟಿಗಾರ ಬೇರ್ಕಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!