spot_img
Friday, April 17, 2026
spot_img

ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ರಾಜಕೀಯ ಷಡ್ಯಂತ್ರ, ಬೈಂದೂರು ಕ್ಷೇತ್ರದಲ್ಲಿ ಸಾವಿರಾರು ಮತದಾರರು ಪಟ್ಟಿಯಿಂದ ಹೊರಗೆ-ಕೆ.ಗೋಪಾಲ ಪೂಜಾರಿ ಆರೋಪ

ಕುಂದಾಪುರ: ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ರಾಜಕೀಯ ಷಡ್ಯಂತ್ರ ನಡೆದಿರುವ ಬಗ್ಗೆ ಅನುಮಾನವಿದೆ. ಕೆಪಿಸಿಸಿಗೆ ಬಂದ ಮಾಹಿತಿ ಪ್ರಕಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 19 ಸಾವಿರ ಮತದಾರರನ್ನು ಮತದಾರರ ಪಟ್ಟಿಯಿಂದ ತಗೆದು ಹಾಕಲಾಗಿದೆ. ಮೃತಪಟ್ಟವರು, ಸ್ಥಳಾಂತರವಾದವರ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಒಂದೊಂದು ಬೂತ್‌ನಿಂದ 50-60ಮತದಾರರನ್ನು ತಗೆದುಹಾಕುವ ಮೂಲಕ ಮತದಾರರ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ.

ಅವರು ಕಟ್‌ಬೇಲ್ತೂರಿನ ತಮ್ಮ ನಿವಾಸದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಉದಾಹರಣೆಗೆ ಗುಲ್ವಾಡಿ ಗ್ರಾಮದ ಮುಸ್ಲಿಂ ಮತಗಳನ್ನು ದೇವಲ್ಕುಂದ ವಾರ್ಡ್‌ನಲ್ಲಿ ಸೇರಿಸಲಾಗಿದೆ. ದೇವಲ್ಕುಂದ ಬೂತ್ ನ ಬಿಲ್ಲವ ಮತಗಳನ್ನು ಗುಲ್ವಾಡಿ ಬೂತ್‌ನಲ್ಲಿ ಸೇರಿಸಲಾಗಿದೆ. ವಿಪರ್ಯಾಸವೆಂದರೆ ದೇವಲ್ಕುಂದ ಗ್ರಾಮದಲ್ಲಿ ಮುಸ್ಲಿಂ ಮತಗಳೆ ಇಲ್ಲ. ಈ ರೀತಿಯ ಗೊಂದಲಗಳಿಗೆ ಯಾರು ಕಾರಣರು ಈ ರೀತಿಯ ಗೊಂದಲಗಳಿಗೆ ಯಾರು ಕಾರಣರು? ಬಿ‌ಎಲ್‌ಓಗಳಾ, ಅಧಿಕಾರಿಗಳಾ ಅಥವಾ ಚುನಾವಣಾ ಆಯೋಗವಾ ಸ್ಪಷ್ಟಪಡಿಸಬೇಕಾಗಿದೆ. ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ, ಸೇರ್ಪಡೆ, ಸರಿಪಡಿಸಲು ಡಿ.8 ಒಂದು ದಿನವನ್ನು ನಿಗಧಿ ಪಡಿಸಿದ್ದು ಸರಿಯಲ್ಲ. ಮತದಾರರು ಪಟ್ಟಿ ಪರಿಶೀಲನೆ ಮಾಡಿ, ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಲು ಇನ್ನೂ ಕಾಲವಕಾಶ ನೀಡಬೇಕು. 19 ಸಾವಿರ ಮತದಾರರ ಪುನಃ ಸೇರ್ಪಡೆಯಾಗಲು ಸಮಯ ಬೇಕು ಎಂದರು.

ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸರಿಪಡಿಸಬೇಕು. ಈಗಿನ ನ್ಯೂನತೆಗಳು ಸರಿಯಾಗದೆ ಇದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಪೊಲೀಸ್ ಇಲಾಖೆ ದುರುಪಯೋಗ:
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸ್ ಠಾಣೆಗಳನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳಿಗೆ ರಾಜಕೀಯ ಪ್ರಭಾವ ಬಳಸಿ ಒತ್ತಡ ತರಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೋಪದೋಷಗಳ ಪ್ರಕಟಿಸಿದರೆ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದರು.

ಎಸ್.ಸಿ/ಎಸ್.ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಶಿಫಾರಸ್ಸು ಮಾಡಿದ್ದರು. ಅದು ಈಗ ಅನುಷ್ಟಾನಿಸಿದ್ದಾರೆ. ಇದರಲ್ಲಿ ಹೆಚ್ಚುಗಾರಿಕೆ ಇಲ್ಲ ಎಂದು ಹೇಳಿದ ಅವರು, ಜಿಲ್ಲಾಡಳಿತ ಕಾಲಕಾಲಕ್ಕೆ ಪ.ಜಾತಿ ಪ.ಪಂಗಡದ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕೆಲಸ ಮಾಡಬೇಕು ಎಂದರು.

ಮೀನುಗಾರಿಕೆಯನ್ನು ಕಡೆಗಣಿಸಿದ ಸರ್ಕಾರ:
ಕರಾವಳಿಯ ಮೀನುಗಾರರು ಕಳೆದ ೫ ತಿಂಗಳಿಂದ ಸೀಮೆ‌ಎಣ್ಣೆ ಸಿಗದೆ ನಾಡದೋಣಿ ಮೀನುಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಹಣ ಬಿಡುಗಡೆಯಾಗುತ್ತಿಲ್ಲ. ಈ ಸರಕಾರ ಮೀನುಗಾರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮೀನುಗಾರರ ಪ್ರತಿಭಟನೆಗೆ ಹೆದರಿ ಬೈಂದೂರು ಕ್ಷೇತ್ರಕ್ಕೆ ಸಿ.ಎಂ.ಭೇಟಿ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಸೀಮೆ‌ಎಣ್ಣೆ ಒದಗಿಸಿದರು. ಪೂರ್ಣಪ್ರಮಾಣದಲ್ಲಿ ಸೀಮೆ‌ಎಣ್ಣೆ ನೀಡುವ ಕೆಲಸವಾಗಿಲ್ಲ. ಈ ಬಗ್ಗೆ ಮೀನುಗಾರರರು ಡಿ.3ರಂದು ಉಡುಪಿಯಲ್ಲಿ ನಾಡದೋಣಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲಿದ್ದು ಈ ಆಂದೋಲನದಲ್ಲಿ ನಾನು ಭಾಗವಹಿಸಲಿದ್ದೇನೆ ಎಂದರು.

ಸುದ್ಧಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಬೈಂದೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!