ಕುಂದಾಪುರ : ಶೀತಲ್ ಕೆ. ಯು ಅವರು ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಡಾ.ಎಂ. ಟಿ ಲಕ್ಷೀಪತಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಟ್ರೈಟಾನಿಯಂ ಡೈ ಆಕ್ಸೈಡ್ Sio2), ಸಿಲಿಕಾನ್ ಡೈ ಆಕ್ಸೈಡ್( Tio2 ) ನ್ಯಾನೊಪರ್ಟಿಕಲ್ಸ್ ನಿಂದ ಪರ್ಲ್ಸ್ಟಾಟ್) (ಎಟ್ರೋಪ್ಲಸ್ ಸುರಟೆನ್ಸಿಸ್) ನ ವಿಷ ವೈಜ್ಞಾನಿಕ ಪರಿಣಾಮಗಳು ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ, ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಶೀತಲ್ ಕೆ.ಯು. ಅವರು ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮ್ಯಾನೇಜರ್ ರೇಖಾ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಉಮೇಶ ಕೆ. ಇವರ ಪುತ್ರಿ.