spot_img
Tuesday, April 14, 2026
spot_img

ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಬೇಕಿದೆ-ತಪಸ್ ಸೇನ್

ಕುಂದಾಪುರ, ನ.17: ಕಾರ್ಮಿಕರ ಸೌಲಭ್ಯಗಳನ್ನು ಸರ್ಕಾರಗಳು ಕಸಿದುಕೊಳ್ಳುತ್ತಿದೆ. ಕಾರ್ಮಿಕರ ಸೌಲಭ್ಯ, ಸುರಕ್ಷತೆಗಳು ಇಲ್ಲದೆ ಕಾರ್ಮಿಕರು ಅಸಹಾಯಕರಾಗಿದ್ದಾರೆ. ಬೀಡಿ ಕೈಗಾರಿಕೆಗಳನ್ನು ಸರ್ಕಾರದ ನೀತಿಗಳಿಂದ ನಶಿಸಿದ ಪರಿಣಾಮ ಬೀಡಿ ಕಾರ್ಮಿಕರ ಬದುಕು ಅತಂತ್ರವಾಗಿದೆ. ಪರ್ಯಾಯ ಉದ್ಯೋಗವಕಾಶಗಳ ಸೃಷ್ಟಿಯಾಗಿಲ್ಲ ಪೆಟ್ರೋಲಿಂ ಸಹಿತ ಅನಿಯಂತ್ರಿತ ಬೆಲೆ ಏರಿಕೆಯಿಂದ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುಳಿತಕ್ಕೊಳಗಾದ ಕಾರ್ಮಿಕರ ಪರವಾಗಿ ಅವರ ಹಕ್ಕುಗಳಿಗೋಸ್ಕರ, ರಾಜ್ಯ, ಕೇಂದ್ರ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಿ‌ಐಟಿಯು ಹೋರಾಟ ಮುಂದುವರಿಸಲಿದೆ ಎಂದು ಮಾಜಿ ಸಂಸದ, ಸಿ‌ಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹೇಳಿದರು.

ಅವರು ಕುಂದಾಪುರದ ನೆಹರು ಮೈದಾನದಲ್ಲಿ ನಡೆದ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ ೧೫ನೇ ಸಿ‌ಐಟಿಯು ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿಂದು ಕಾರ್ಮಿಕರು, ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದಾಳಿ ದಬ್ಬಾಳಿಕೆಗಳನ್ನು ಖಂಡಿಸಬೇಕಾಗಿದೆ. ಖಾಸಗೀಕರಣದಿಂದ ಸಾರ್ವಜನಿಕ ಸ್ವತ್ತುಗಳು ಖಾಸಗಿಯವರ ಪಾಲಾಗುತ್ತಿದೆ. ಬಂಡವಾಳದಾರರ ಪರವಾದ ಹೊಸ ಆರ್ಥಿಕ ನೀತಿಗಳು ಕಾರ್ಮಿಕರಿಗೆ ಮಾರಕವಾಗಿದೆ. ಇದರ ವಿರುದ್ಧ ಸಿ‌ಐಟಿಯುವ ಹೋರಾಟ ಎನ್ನೂ ಎತ್ತರಕ್ಕೆರಬೇಕಾಗಿದೆ. ಸರ್ಕಾರದ ನಿರ್ಧಾರಗಳ ವಿರುದ್ಧ ಜನ ಐಕ್ಯತೆಯಿಂದ ಉತ್ತರಿಸಬೇಕಾಗಿದೆ ಆ ನಿಟ್ಟಿನಲ್ಲಿ ಜನವರಿ 18ರಿಂದ 20ರ ತನಕ ನಡೆಯುವ ಅಖಿಲ ಭಾರತ ಸಿ‌ಐಟಿಯುವ ಸಮ್ಮೇಳನ ಮಹತ್ವದ್ದಾಗಲಿದೆ ಎಂದರು.

ಕಾರ್ಮಿಕ ವಿನಾಯತಿ ಕಾಯ್ದೆಯಿಂದ ಹೊಸ ಸಂಕಷ್ಟ:
ಸಿ‌ಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಆಹಾರ ಪದಾರ್ಥ, ಶಾಲಾ ಶುಲ್ಕದ ಮೇಲೂ ಜಿ‌ಎಸ್‌ಟಿ, ಬ್ಯಾಂಕ್ ತೆರಿಗೆ ಹೀಗೆ ಬಡಜನರ ಮೇಲೆ ತೆರಿಗೆಯ ಹೊರೆ ಹೊರಿಸುತ್ತಿರುವ ಸರ್ಕಾರದ ಹತ್ತಿರ ದುಡ್ಡಿಲ್ಲ, ದುಡ್ಡಿಲ್ಲದ ಕಾರ್ಮಿಕ ಜನ ಸರ್ಕಾರಕ್ಕೆ ದುಡ್ಡು ಕೊಡಬೇಕು ಇದು ಇವತ್ತಿನ ವ್ಯವಸ್ಥೆಯಾಗಿದೆ ಎಂದರು.
ಸರ್ಕಾರಿ ಸ್ವಾಮ್ಯದ ಬ್ಯಾಂಕು, ವಿದ್ಯುತ್, ವಿಮಾನ ನಿಲ್ದಾಣ, ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಖಾಸಗಿಯವರ ಪಾಲಾಗುತ್ತಿದೆ. ಬಡಜನರಿಂದ ತೆರಿಗೆ ಕಟ್ಟಿಸಿಕೊಂಡ ಸರ್ಕಾರ ಶ್ರೀಮಂತ ಸಾಲ ಮನ್ನಾ ಮಾಡಲಾಗುತ್ತಿದೆ. ಜಾಗತಿಕ ಮಟ್ಟಕ್ಕೆ ಉತ್ಪಾದನಾ ಘಟಕ ಆರಂಭವಾಗಬೇಕು ಎಂಬ ಘೋಷಣೆಯೊಂದಿಗೆ ಕಾರ್ಮಿಕ ವಿನಾಯಿತಿ ಕಾನೂನುಗಳನ್ನು ತರಲು ಸರ್ಕಾರ ಮುಂದಾಗಿದೆ. ದೇಶ್ ಎನ್ನುವ ಕಾನೂನು ಜ್ಯಾರಿಯಾದರೆ ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನು ಚಲಾವಣೆಯಲ್ಲಿ ಇರುವುದಿಲ್ಲ. ಕಾರ್ಮಿಕರ ಭವಿಷ್ಯ, ಕಾರ್ಮಿಕ ನಂಬಿಕೊಂಡ ಕುಟುಂಬ ಅತಂತ್ರವಾಗುತ್ತದೆ ಎಂದರು.
ಶ್ರೀಮಂತರ ಮೇಲೆ ತೆರಿಗೆ ಹಾಕಿ, ಕಾರ್ಮಿಕರಿಗೆ ಕನಿಷ್ಠ ವೇತನ ೩೬ ಸಾವಿರ ಜ್ಯಾರಿ ಮಾಡಿ, ಈಗ ಇರುವ ಉದ್ಯೋಗ ಉಳಿಸಿ, ಖಾಸಗೀಕರಣ ನಿಲ್ಲಿಸಿ ಎಂದರು.

ಕುಂದಾಪುರದಲ್ಲಿ ನಡೆದ 15ನೇ ರಾಜ್ಯ ಸಮ್ಮೇಳನ ಮಾದರಿ ಸಮ್ಮೇಳನವಾಗಿದೆ. ಸಮ್ಮೇಳನದ ಯಶಸ್ವಿಗೆ ಕಾರಣರಾದವರಿಗೆ ಕ್ರಾಂತಿಕಾರಿ ವಂದನೆ ಸಲ್ಲಿಸುತ್ತೇವೆ ಎಂದರು.

ಸಿ‌ಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮುಖಂಡರಾದ ಕೆ.ಎನ್.ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ ವಿ.ಜೆ.ಕೆ ನಾಯರ್, ಸಿ‌ಐಟಿಯು ೧೫ನೇ ಸ್ವಾಗತ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ , ವೆಂಕಟೇಶ್ ಕೋಣಿ ಹಾಗು ಕಾರ್ಮಿಕರ ಮುಖಂಡರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಕಾರ್ಯಕ್ರಮ ನಿರ್ವಹಿಸಿದರು. ಮೂರು ದಿನಗಳ ಕಾಲ ನಡೆದ ಸಮ್ಮೇಳದಲ್ಲಿ ರಾಜ್ಯದ ೩೧ ಜಿಲ್ಲೆಗಳಿಂದ ಸುಮಾರು ೪೨೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಬಹಿರಂಗ ಸಭೆಗೂ ಮೊದಲು ಬೃಹತ್ ಜಾಥಾ ನಡೆಯಿತು. ಕೆಂಬಾವುಟ ಹಿಡಿದ ಸಾವಿರಾರು ಮಂದಿ ಕುಂದಾಪುರ ನಗರದಲ್ಲಿ ಸಾಗಿ ಬಂದರು. ಬಹಿರಂಗ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕ ಸಂಘಟನೆಗಳ ಸದಸ್ಯರು ನೆರೆದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!