spot_img
Monday, April 13, 2026
spot_img

ಕುಂದಾಪುರದ ಪ್ರಸಿದ್ಧ ಮಕ್ಕಳ ತಜ್ಞ ಡಾ.ಕೆ. ವೆಂಕಟರಾಜ್ ಇನ್ನಿಲ್ಲ

ಕುಂದಾಪುರ: ಪ್ರಸಿದ್ಧ ಮಕ್ಕಳ ತಜ್ಞ, ಕುಂದಾಪುರ ಸ್ವಾತಿ ಕ್ಲಿನಿಕ್‌ನ ಡಾ.ಕೆ.ವೆಂಕಟ್ ರಾಜ್ (67ವ) ಇನ್ನಿಲ್ಲ. ಹೃದಯ ಸಮಸ್ಯೆಯಿಂದ ಅವರು ನ.7ರಂದು ನಿಧನರಾದರು. ಅಸಂಖ್ಯ ಮಕ್ಕಳ ಪಾಲಿನ ದೇವರಾಗಿದ್ದ ಡಾ.ಕೆ.ವೆಂಕಟ ರಾಜ್ ಅವರು ಎಂಬಿಬಿ‌ಎಸ್, ಡಿಸಿ‌ಎಸ್ ಮುಗಿಸಿ ಮಕ್ಕಳ ತಜ್ಞರಾಗಿ ಕುಂದಾಪುರದಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಬೈಂದೂರು ತಾಲೂಕಿನ ಉಪ್ಪುಂದವರಾದ ಇವರು ಪ್ರಸ್ತುತ ಅಂಕದಕಟ್ಟೆಯಲ್ಲಿ ನೆಲೆಸಿದ್ದರು. ಕುಂದಾಪುರ ಭಂಡಾರ್ಕಾಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದು ಬಳಿಕ ಮಣಿಪಾಲ ಕೆ‌ಎಂಸಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದರು.

ಇತ್ತೀಚೆಗೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಾತಿ ಕ್ಲಿನಿಕ್ ಅವಿಭಜಿತ ಕುಂದಾಪುರ ತಾಲೂಕು ಮಾತ್ರವಲ್ಲ ಬೇರೆ ಬೇರೆ ಕಡೆಯಿಂದಲೂ ಮಕ್ಕಳನ್ನು ಚಿಕಿತ್ಸೆಗಾಗಿ ಕರೆತರಲಾಗುತ್ತಿತ್ತು. ಮಕ್ಕಳ ಬಗ್ಗೆ ಅತೀವ ಕಾಳಜಿ, ಚಿಕಿತ್ಸೆಗೆ ಬರುವ ಮಕ್ಕಳ ಬಗ್ಗೆ ಸಮಗ್ರವಾಗಿ ವಿಚಾರಿಸಿಕೊಂಡು ಔಷಧ ಕೊಡುತ್ತಿದ್ದರು. ಮನೆಗೆ ದೂರವಾಣಿ ಮಾಡಿದರೂ ಕೂಡಾ ಪೋನ್‌ನಲ್ಲಿ ಸಲಹೆ ಸೂಚನೆ ನೀಡುತ್ತಿದ್ದರು.

ಮೃತರು ತಂದೆ, ಪತ್ನಿ, ಪುತ್ರ ಯುರಾಲಾಜಿಸ್ಟ್ ಡಾ.ಕಿಶನ್ ರಾಜ್, ಪುತ್ರಿ, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!