spot_img
Monday, April 13, 2026
spot_img

ನರೇಂದ್ರ ಕುಮಾರ್ ಕೋಟ ಅವರಿಗೆ ಸ್ಪರ್ಶ ಹುಟ್ಟೂರ ಸನ್ಮಾನ

ಕೋಟ : ಬಾಳೆಬೆಟ್ಟು ಫ್ರೆಂಡ್ಸ್ (ರಿ) ಬಾಳೆಬೆಟ್ಟು, ಭಗತ್ ಸಿಂಗ್ ಯುವ ವೇದಿಕೆ, (ರಿ) ಕೋಟ ಇವರ ಆಶ್ರಯದಲ್ಲಿ ನಡೆಯುವ ಐದನೇ ವರ್ಷದ ಸ್ಪರ್ಶ ಕಾರ್ಯಕ್ರಮದಲ್ಲಿ ಸಾಹಿತಿ, ಸವ್ಯಸಾಚಿ, ಹೊಸತನದ ಅನ್ವೇಷಕ ನರೇಂದ್ರ ಕುಮಾರ್ ಕೋಟ ಅವರನ್ನು ಸ್ಪರ್ಶ ಹುಟ್ಟೂರ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.

ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ-ಶಿಕ್ಷಕ ಶ್ರೀನರೇಂದ್ರ ಕುಮಾರ್ ಕೋಟ ಅವರು ೨೦೨೦-೨೧ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಅಲ್ಲದೇ ಭಾರತ ಸರಕಾರದ ದ.ಕ ಜಿಲ್ಲಾ ಯುವ ಪುಸ್ಕಾರ-೧೯೯೩, ರಾಜ್ಯ ಮಟ್ಟದ ಕಾವ್ಯ ಶ್ರೀ ಪುರಸ್ಕಾರ(ಸಾಹಿತ್ಯ ಸಾಧನೆಗಳು)-೨೦೦೨, ದಿವಂಗತ ರಾಜೇಂದ್ರ ಶೆಟ್ಟಿ ಸ್ಮಾರಕ(ಹೊಸ ತರಬೇತಿಯ ಆವಿಷ್ಕಾರಕ್ಕೆ)-೨೦೦೩, ರಾಷ್ಟ್ರಮಟ್ಟದ ರವಿರೊಹೇಡ್‌ಕರ್ ಪುರಸ್ಕಾರ(ವಿವಿಧ ಕ್ಷೇತ್ರದಲ್ಲಿ ದಾಖಲೆ ೧೦೦೦ ತರಬೇತಿಗಳು)-೨೦೧೦,ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ-೨೦೧೦, ರಾಜ್ಯ ಮಟ್ಟದ ಕಾರಂತ ಸದ್ಭಾವನ ಪುರಸ್ಕಾರ-೨೦೧೦, ರಾಷ್ಟ್ರಮಟ್ಟದ ಆರ್ಯಭಟ ಪುರಸ್ಕಾರ-೨೦೧೧, ರಾಷ್ಟ್ರಮಟ್ಟದ ರವೀಂದ್ರ ನಾಥ್ ಟ್ಯಾಗೋರ್ ರಾಷ್ಟ್ರೀಯ ಪುಸ್ಕಾರ-೨೦೧೧, ಸಾಧಕ ಶಿಕ್ಷಕ ಪ್ರಶಸ್ತಿ-೨೦೧೪-೧೫ ಇವರಿಗೆ ಲಭಿಸಿದೆ. ಇದಲ್ಲದೆ ೧೯೯೯-೨೦೦೦ರಲ್ಲಿ ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಗಾಯನ ಸ್ಪರ್ಧೆಯಲ್ಲಿ ತೃತೀಯ, ೨೦೦೦ರಲ್ಲಿ ಉಡುಪಿ ಜಿಲ್ಲಾ ಮೊದಲನೇ ಶಿಕ್ಷಕ ಸಾಹಿತ್ಯ ಸಮ್ಮೇಳನ ಆಶುಕವಿತಾ ರಚನೆ ದ್ವಿತೀಯ ಆಶುಭಾಷಣದಲ್ಲೂ ದ್ವಿತೀಯ, ೨೦೦೦-೦೧ ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಜಿಲ್ಲಾ ಮಟ್ಟದ ಆಶುಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದರ ಜೊತೆ ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.

ಇವರ ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ೨೮ ಪುಸ್ತಕಗಳು ಹೊರಹೊಮ್ಮಿದ್ದು ಇನ್ನೂ ೧೪ ಪುಸ್ತಕಗಳು ಪ್ರಕಟಣೆಯ ಅಂತಿಮ ಹಂತದಲ್ಲಿದೆ. ೨೦೦ ಕ್ಕೂ ಮಿಕ್ಕಿದ ಕವನಗಳು, ೨೩ ಕಥೆಗಳು, ೧೫೦ ಲೇಖನಗಳು, ೧೬ ವಿಶೇಷ ಅಂಕಣ ಪ್ರಕಟಗೊಂಡಿದ್ದು, ದಿನ ಪತ್ರಿಕೆ, ವಾರ ಪತ್ರಿಕೆಯಲ್ಲಿ ಇವರ ಲೇಖನ ಕವನಗಳು ರಾರಾಜಿಸುತ್ತಿರುತ್ತದೆ ಅಲ್ಲದೇ ಕಾರಂತರ ವಿಷಯಾಧರಿತ ಸುಗಂಧಿ ಚಲನಚಿತ್ರ ನಿರ್ಮಾಣ ಮಾಡಿ ಅದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಕಿರುಚಿತ್ರಗಳು ಕೂಡಾ ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದು.

ಜನವರಿ 14 ರಂದು ಸ್ಪರ್ಶ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ನರೇಂದ್ರ ಕುಮಾರ್ ಅವರನ್ನು ಸ್ಪರ್ಶ ಹುಟ್ಟೂರ ಸನ್ಮಾನದ ನೆಲೆಯಲ್ಲಿ ಗೌರವಿಸಲಾಗುವುದು ಎಂದು ಬಾಳೆಬೆಟ್ಟು ಫ್ರೆಂಡ್ಸ್‌ನ ಅಧ್ಯಕ್ಷ ರತ್ನಾಕರ್ ಪೂಜಾರಿ, ಭಗತ್ ಸಿಂಗ್ ಯುವ ವೇದಿಕೆಯ ಅಧ್ಯಕ್ಷ ಪ್ರಸಾದ್ ಬಿಲ್ಲವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!