spot_img
Monday, April 13, 2026
spot_img

ಆರ್ಡಿಯಲ್ಲಿ ಕಲಿತ ಶಾಲೆಯ ಕಟ್ಟಡ ದುರಸ್ಥಿಯ ಸೇವಾ ಕಾರ್ಯಕ್ಕೆ ಮಾದರಿಯಾದ ಹಳೆ ವಿದ್ಯಾರ್ಥಿಗಳು

ಆರ್ಡಿ-ಅಲ್ಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಾಗ್ರಿಗಳು ಹಾನಿಯಾಗಿ ಕಟ್ಟಡ ಶೀಥಿಲಗೊಂಡು ಕುಸಿಯುವ ಹಂತವನ್ನು ತಲುಪಿದ ಹಿನ್ನಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತ್ರತ್ವದಲ್ಲಿ ಶಾಲಾಭೀವೃದ್ಧಿ ಸಮಿತಿ, ದಾನಿಗಳು, ಮಕ್ಕಳ ಪೋಷಕರು, ಶಿಕ್ಷಣಾಭಿಮಾನಿಗಳ ಸಹಕಾರೊಂದಿಗೆ ಅಂದಾಜು ರೂ.2 ಲಕ್ಷ ವೆಚ್ಚದಲ್ಲಿ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದು, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣದ ಹಿತದೃಷ್ಟಿಯಿಂದ ಹಿಂದೆ ತಾವು ಕಲಿತ ಶಾಲೆಯ ದುರಸ್ಥಿಯಲ್ಲಿ ಹಳೆ ವಿದ್ಯಾರ್ಥಿಗಳ ಸೇವಾ ಕಾರ್ಯವು ಮಾದರಿಯೊಂದಿಗೆ ಪ್ರಶಂಸೆಗೆ ಪಾತ್ರವಾಗಿದೆ

ಇಲ್ಲಿನ ಶಾಲೆಯು ೧೯೨೫ ರಲ್ಲಿ ಸ್ಥಾಪನೆ ಗೊಂಡಿದೆ.ಹಳೆಸೋಮೇಶ್ವರ,ಕಾಸನ್‌ಮಕ್ಕಿ, ಮಡಾಮಕ್ಕಿ, ಓದೂರು, ಹಂಜ, ಮಾರ್ಮಣ್ಣು, ಶಿರಂಗೂರು, ಬೆಪ್ಡೆ,ಅರಸಮ್ಮಕಾನು, ಶೇಡಿಮನೆ, ಕೊಂಜಾಡಿ, ಬರೆಗದ್ದೆ, ಕಲ್ಮಕ್ಕಿ, ಕೆರ್ಜಾಡಿ, ನೂಜಟ್ಟು,ಮಾಬ್ಳಿ, ತಿಮಕೋಡು, ಕಲ್ಮರ್ಗಿ, ತೊನ್ನಾಸೆ,ಅಲ್ಬಾಡಿ ಸೇರಿದಂತೆ ಸುತ್ತ ಮುತ್ತಲಿನ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಿ,ಸಾವಿರಾರೂ ಮಂದಿಗೆ ಶಿಕ್ಷಣ ನೀಡಿ ಭವಿಷ್ಯ ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿತು.ಶಾಲೆಯ ಹೆಂಚಿನ ಕಟ್ಟಡವು ಕಾಲಕ್ರಮೇಣ ಶೀಥಿಲಗೊಂಡಿತು. ೧೯೯೭ ರಲ್ಲಿ ಪುನಃ ಶಾಲಾ ಹೆಂಚಿನ ಕಟ್ಟಡ ಬೇರೆ ಸ್ಥಳದಲ್ಲಿ ಹೊಸದಾಗಿ ನಿರ್ಮಾಣಗೊಂಡಿದೆ. ೧ ರಿಂದ ೭ ನೇ ತರಗತಿಯಯನ್ನು ಹೊಂದಿದ ತನಕದ ಶಾಲೆಯಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣದೊಂದಿಗೆ ಹೆಸರುವಾಸಿಯಾಗಿದ್ದು ನೂರಾರೂ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು.ಶಾಲಾ ಕಟ್ಟಡದಲ್ಲಿ ೬ ತರಗತಿ ಕೊಠಡಿಗಳು, ಸಭಾಂಗಣ, ರಂಗ ಮಂದಿರವನ್ನು ಹೊಂದಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತಿದೆ. ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಕೊಠಡಿ, ಕಂಪ್ಯೂಟರ್ ತರಗತಿ,ನಲಿ-ಕಲಿ ತರಗತಿ,ಅಕ್ಷರ ದಾಸೋಹ ಮತ್ತು ಆಹಾರ ಸಾಮಾನುಗಳ ದಾಸ್ತಾನು ಕೊಠಡಿಗಳ ಪ್ರತ್ಯೇಕ ಕಟ್ಟಡವನ್ನು ಹೊಂದಿದೆ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಾಲಾತಿ ಪ್ರತಿ ವರ್ಷ ಹೆಚ್ಚುತ್ತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಪ್ರಸ್ತುತ ೧೫೭ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಶಾಲೆಯ ಹಂಚಿನ ಕಟ್ಟಡ ನಿರ್ಮಾಣಕ್ಕೆ ಬಹಳ ವರ್ಷಗಳ ಹಿಂದೆ ಹಾಕಲಾದ ರೀಪು,ಅಡ್ಡೆಗಳು, ಪಕಾಸ್ಸಿಗಳು ಕಳೆದ ಕೆಲವು ವರ್ಷಗಳಿಂದ ಹಾನಿಯಾಗಿ ಕಟ್ಟಡದ ಮೇಲ್ಛಾವಣಿ ಕುಸಿಯುವ ಹಂತವನ್ನು ತಲುಪಿದೆ. ಶಾಲಾ ಕಟ್ಟದ ದುರಸ್ಥಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಅನುಧಾನ ಮಂಜೂರಾತಿಯಾಗದೇ ವಿಳಂಭವಾಗಿರುವುದರಿಂದ ಶಾಲಾ ಮಕ್ಕಳ ಶಿಕ್ಷಣದ ಹಿತದೃಷ್ಠಿಯಿಂದ ಶಾಲಾ ಕಟ್ಟಡದ ದುರಸ್ಥಿ ಶೀಘ್ರವಾಗಿ ನಡೆಸ ಬೇಕಾಗಿದ್ದ ಪರಿಸ್ಥಿತಿಯಿಂದ ಇಲ್ಲಿನ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತ್ರತ್ವದಲ್ಲಿ ಶಾಲಾಭೀವೃದ್ಧಿ ಸಮಿತಿ, ದಾನಿಗಳು,ಮಕ್ಕಳ ಪೋಷಕರು,ಶಿಕ್ಷಣಾಭಿಮಾನಿಗಳ ಸಹಕಾರೊಂದಿಗೆ ಅಂದಾಜು ರೂ. ೨ ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡದ ಮೇಲ್ಛಾವಣಿಗೆ ಹೊಸದಾಗಿ ಮರದ ರೀಪು,ಅಡ್ಡೆಗಳು, ಪಕಾಸ್ಸಿಗಳನ್ನು ಬದಲಾಯಿಸಿ ಹೊಸದಾಗಿ ಹಾಕುವ ದುರಸ್ಥಿ ಕಾರ್ಯವು ಕಳೆದ ಬುಧವಾರದಿಂದ ಆರಂಭಗೊಂಡಿದೆ. ಶಾಲಾ ಮಕ್ಕಳ ದಸರಾ ರಜೆ ಮುಗಿದು ಪುನಃ ಶಾಲೆ ಆರಂಭವಾಗುವ ಸಮಯಕ್ಕೆ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ದುರಸ್ಥಿ ಕಾರ್ಯ ಭರದಿಂದ ನಡೆಯುತ್ತಿದೆ. ಶಿಷ್ಯ ವೃಂದವರು ಸೇರಿದಂತೆ ಹಲವಾರು ಮಂದಿ ಶ್ರಮದಾನದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಳೆ ವಿದ್ಯಾರ್ಥಿ ಸಂಘದ ನೇತ್ರತ್ವದಲ್ಲಿ ಶಾಲಾಭೀವೃದ್ಧಿ ಸಮಿತಿ,ದಾನಿಗಳು,ಮಕ್ಕಳ ಪೋಷಕರು,ಶಿಕ್ಷಣಾಭಿಮಾನಿಗಳ ಸಹಕಾರೊಂದಿಗೆ ಇಲ್ಲಿ ನಡೆಯುತ್ತಿರುವ ಶಾಲಾ ಕಟ್ಟಡದ ದುರಸ್ಥಿ ಕಾರ್ಯ ಶೀಘ್ರವಾಗಿ ಸಂಪೂರ್ಣಗೊಳ್ಳುವಲ್ಲಿ ಧನ ಸಹಾಯದ ಅಗತ್ಯವಿದೆ.

ಧನ ಸಹಾಯ ಮಾಡುವವರು ಬ್ಯಾಂಕ್ ಆಫ್ ಬರೋಡ ಶಾಖೆಯ ಹಳೇ ವಿದ್ಯಾರ್ಥಿಸಂಘದ ಉಳಿತಾಯ ಖಾತೆ ಸಂಖ್ಯೆ 81930100006203ಕ್ಕೆ ಜಮಾ ಮಾಡಬಹುದು. Ifsc code BARB0(ಜಿರೋ) VJARDI

ಶಾಲೆಯ ಹಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಾಗ್ರಿಗಳು ಹಾನಿಯಾಗಿ ಕಟ್ಟಡ ಶಿಥೀಲಗೊಂಡಿದೆ..ಹಳೆ ವಿದ್ಯಾರ್ಥಿಗಳ ಮುಂದಾಳ್ವತದಲ್ಲಿ ಶಾಲಾಭೀವೃದ್ಧಿ ಸಮಿತಿ,ದಾನಿಗಳು,ಮಕ್ಕಳ ಪೋಷಕರು,ಶಿಕ್ಷಣಾಭಿಮಾನಿಗಳ ಸಹಕಾರೊಂದಿಗೆ ಅಂದಾಜು ರೂ.೨ ಲಕ್ಷ ವೆಚ್ಚದಲ್ಲಿ ಹೊಸದಾಗಿ ಮರದ ರೀಪು,ಅಡ್ಡೆಗಳು, ಪಕಾಸ್ಸಿಗಳನ್ನು ಬದಲಾಯಿಸಿ ಹೊಸದಾಗಿ ಹಾಕುವ ದುರಸ್ಥಿ ಕಾರ್ಯವು ಆರಂಭಗೊಂಡಿದೆ,ಶಾಲಾ ಕಟ್ಟಡದ ದುರಸ್ಥಿ ಕಾರ್ಯ ಶೀಘ್ರವಾಗಿ ಸಂಪೂರ್ಣಗೊಳ್ಳುವಲ್ಲಿ ಎಲ್ಲರ ಸಹಕಾರ ಅಗತ್ಯ
ಕೆ.ಜಯದೇವ ಹೆಗ್ಡೆ,ನೂಜಟ್ಟು ಅಧ್ಯಕ್ಷರು,ಹಳೆ ವಿದ್ಯಾರ್ಥಿ ಸಂಘ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಅಲ್ಬಾಡಿ_ಆರ್ಡಿ.

ನಾನು ಈ ಶಾಲೆಗೆ ಇತ್ತೀಚೆಗೆ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದೆನೆ. ಶಾಲೆಯ ಹಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಾಗ್ರಿಗಳು ಹಾನಿಯಾಗಿ ಕಟ್ಟಡ ಹಾಳಾಗಿರುವ ಬಗ್ಗೆ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ,ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೆನೆ.ಶಾಲಾ ಮಕ್ಕಳಿಗೆ ವ್ಯಾಸಂಗ ಮಾಡಲು ತೊಂದರೆಯಾಗದಂತೆ ಹಳೆ ವಿದ್ಯಾರ್ಥಿ ಸಂಘದ ನೇತ್ರತ್ವದಲ್ಲಿ ಶಾಲಾಭೀವೃದ್ಧಿ ಸಮಿತಿ,ದಾನಿಗಳು,ಮಕ್ಕಳ ಪೋಷಕರು,ಶಿಕ್ಷಣಾಭಿಮಾನಿಗಳ ಸಹಕಾರೊಂದಿಗೆ ಶಾಲಾ ಕಟ್ಟಡದ ದುರಸ್ಥಿ ಕಾರ್ಯ ನಡೆಯುತ್ತಿದೆ.

ಯಶೋದ, ಮುಖ್ಯ ಶಿಕ್ಷಕಿ, , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಅಲ್ಬಾಡಿ_ಆರ್ಡಿ

ಶಾಲೆಯ ಹಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಾಗ್ರಿಗಳು ಹಾನಿಯಾಗಿ ದುಸ್ಥಿಯನ್ನು ತಲುಪಿದೆ. ಇಲ್ಲಿನ ಶಾಲೆಯಲ್ಲಿ ೧೫೭ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಶಾಲೆಯಲ್ಲಿ ಮಕ್ಕಳಿಗೆ ಕಲಿಯಲು ತೊಂದರೆಯಾಗದಂತೆ ತುರ್ತು ದುರಸ್ಥಿ ಕೆಲಸ ಮಾಡಲಾಗುತ್ತಿದೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು.
ಕೃಷ್ಣಮೂರ್ತಿ ಆಚಾರ್ಯ, ಕೊಂಜಾಡಿ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!