Sunday, September 8, 2024

ವಿದ್ಯಾರ್ಥಿಗಳು ಗಾಂಧಿ ಚರಿತ್ರೆ ಓದಬೇಕು-ಎಸ್. ಜನಾರ್ದನ ಮರವಂತೆ

ಮರವಂತೆ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಎಂಬ ಕಾರಣಕ್ಕೆ ಮಾತ್ರವಲ್ಲದೆ ಬದುಕು ಮತ್ತು ಹೋರಾಟವನ್ನು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಸಿದರು ಎಂಬ ಕಾರಣಕ್ಕಾಗಿಯೂ ವಿದ್ಯಾರ್ಥಿಗಳು ಗಾಂಧೀಜಿ ಅವರ ಜೀವನ ಚರಿತ್ರೆಯನ್ನು ಓದಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

ಮರವಂತೆಯ ಸಾಧನಾ ಜನಾರ್ದನ ಪ್ರತಿಷ್ಠಾನ, ಸಾಧನಾ ಸಮಾಜ ಸೇವಾ ವೇದಿಕೆ, ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಸಂದರ್ಭ ಮಾತನಾಡಿದರು.

ವಿದ್ಯಾರ್ಥಿಗಳು ಗಾಂಧೀಜಿ ಕುರಿತು ಅರಿಯಲಿ ಎಂಬ ಉದ್ದೇಶಕ್ಕಾಗಿ ಶಿಕ್ಷಕ ಉದಯ ಗಾಂವಕಾರ ಬರೆದ ಮಕ್ಕಳಿಗಾಗಿ ಮಹಾತ್ಮ ಪುಸ್ತಕ ಆಧರಿಸಿದ ಪರೀಕ್ಷಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅದರಲ್ಲಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಅವರು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷ ಲೋಕೇಶ ಖಾರ್ವಿ ಉದ್ಘಾಟಿಸಿದರು.ವಿಶ್ವಸ್ಥ ಎಂ. ಶಂಕರ ಖಾರ್ವಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನಿತಾ ಆರ್. ಕೆ, ರವಿ ಮಡಿವಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಉಪಸ್ಥಿತರಿದ್ದರು.

ಧನ್ಯತಾ ಶ್ಯಾನುಭಾಗ್ ಮತ್ತು ಕೇದಾರ ಮರವಂತೆ ರಾಮನಾಮ ಮತ್ತು ವೈಷ್ಣವ ಜನತೊ ಗೀತೆ ಹಾಡಿದರು. ವಿದ್ಯಾರ್ಥಿಗಳಾದ ಅನುಷಾ, ಧನುಷ್, ಧನ್ಯತಾ, ಉಲ್ಲಾಸ್, ಸಂಕೇತ್, ಸಂಜನಾ, ದಿವ್ಯಾ, ಆರ್ತಿಕ್, ರಶ್ಮಿತಾ, ಆಶಿತಾ, ಶ್ರದ್ಧಾ, ಸಾಕ್ಷಿತಾ, ಸಮನ್ವಿ, ಮಾನಸ, ರಾಜಶ್ರೀ, ರಂಜಿತಾ ಗಾಂಧೀಜಿ ಜೀವನದ ವಿವಿಧ ಘಟನೆಗಳನ್ನು ನಿರೂಪಿಸುವ ಮೂಲಕ ಅವರ ಬದುಕಿನ ಮೇಲೆ ಬೆಳಕು ಚೆಲ್ಲಿದರು.

ಪ್ರತಿಷ್ಠಾನದ ವಿಶ್ವಸ್ಥರು ಹಾಗೂ ಸಾಧನಾ ಸದಸ್ಯರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸರ್ವೋತ್ತಮ ಭಟ್ ಸ್ವಾಗತಿಸಿದರು. ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸೀತಾರಾಮ ವಂದಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!