Saturday, April 20, 2024

ಗುಜ್ಜಾಡಿ ಶಾಲಾ ಆವರಣದಲ್ಲಿ ಸಮೃದ್ದ ತರಕಾರಿ ಕೃಷಿ: ಬಿಸಿ ಊಟಕ್ಕೆ ಸಾವಯವ ತರಕಾರಿ ಬಳಕೆ: ವಿದ್ಯಾರ್ಥಿಗಳಿಗೆ ಬಲು ಖುಷಿ

ಗಂಗೊಳ್ಳಿ : ಬೈಂದೂರು ವಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಮಕ್ಕಳ ದಾಖಲಾತಿ ಹಾಗೂ ಶೈಕ್ಷಣಿಕ ಸಾಧನೆಗಳಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶಾಲೆಯ ವಠಾರದಲ್ಲಿ ಮಾಡಲಾಗಿರುವ ತರಕಾರಿ ಕೃಷಿಯ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

ಶಾಲೆಯ ವಠಾರದಲ್ಲಿ ಸುಮಾರು 10 ಸೆಂಟ್ಸ್ ಜಾಗದಲ್ಲಿ ಮಾಡಿರುವ ತರಕಾರಿ ತೋಟದಲ್ಲಿ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲಾಗಿದ್ದು, ಶಾಲೆಯ ಮಧ್ಯಾಹ್ನದೂಟಕ್ಕೆ ಇಲ್ಲಿ ಬೆಳೆದ ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಒಂದು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆದಿದೆ. ಇದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ.

ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತು ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಲೆಯ ಎಸ್‌ಡಿ‌ಎಂಸಿ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಎಸ್‌ಡಿ‌ಎಂಸಿ ಸದಸ್ಯೆ ಶಾಂತಾ ಹಾಗೂ ವಿದ್ಯಾರ್ಥಿ ಪೋಷಕರಾದ ಉಷಾ ಅವರು ಶಾಲಾ ವಠಾರದಲ್ಲಿ ಸುಮಾರು 10 ಸೆಂಟ್ಸ್ ಜಾಗದಲ್ಲಿ ತರಕಾರಿ ತೋಟ ಮಾಡಲು ಮುಂದಾದರು. ಸ್ಥಳೀಯ ಕೃಷಿಕ ಜಿ.ನರಸಿಂಹ ನಾಯಕ್ ಅವರು ಕೃಷಿಗೆ ಗುರುತಿಸಲಾದ ಜಾಗವನ್ನು ಟ್ರ್ಯಾಕ್ಟರ್ ಮೂಲಕ ಊಳಿ ಜಾಗವನ್ನು ಕೃಷಿಗೆ ಸಿದ್ಧಪಡಿಸಿದರು. ಈ ಸ್ಥಳದಲ್ಲಿ ಶಾಲೆಯ ಮಧ್ಯಾಹ್ನದ ಊಟಕ್ಕೆ ಅವಶ್ಯಕವಾಗಿರುವ ಸೌತೆ ಕಾಯಿ, ಹೀರೆಕಾಯಿ, ಬೆಂಡೆಕಾಯಿ, ಮುಳ್ಳುಸೌತೆ ಕಾಯಿ, ಬಸಲೆ ಮೊದಲಾದ ತರಕಾರಿಗಳ ಬೀಜವನ್ನು ಹಾಕಲಾಗಿತ್ತು. ಜೂನ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಹಾಕಲಾದ ಬೀಜ ಕೊಳೆತು ಹೋಗಿದ್ದರೂ, ದೃತಿಗಡೆದ ಇಂದಿರಾ ಪೂಜಾರಿ, ಶಾಂತಾ ಮತ್ತು ಉಷಾ ಅವರು ಮತ್ತೊಮ್ಮೆ ತರಕಾರಿ ಬೀಜಗಳನ್ನು ಹಾಕಿ ಕೃಷಿ ಕಾರ್ಯ ಮಾಡಿದರು.

ಎಸ್‌ಡಿ‌ಎಂಸಿ ಸದಸ್ಯರು ಹಾಗೂ ಪೋಷಕರ ಅವಿರತ ಪರಿಶ್ರಮದಿಂದ ಇಂದು ತೋಟದಲ್ಲಿ ಉತ್ತಮ ಫಸಲು ಬಂದಿದ್ದು, ಕಳೆದ ಒಂದು ತಿಂಗಳಿನಿಂದ ಶಾಲೆಯ ಮಧ್ಯಾಹ್ನದ ಉಟಕ್ಕೆ ಇಲ್ಲಿ ಬೆಳೆದ ತರಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಇದೀಗ ಸುಮಾರು ಒಂದು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆ ದೊರೆತಿದ್ದು, ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಗಿದೆ.

ಶಾಲಾ ತರಕಾರಿ ರಚನೆಯಲ್ಲಿ ಎಸ್‌ಡಿ‌ಎಂಸಿ ಸದಸ್ಯೆ ಶಾಂತಾ ಅವರ ಪಾತ್ರ ಹೆಚ್ಚಿದ್ದು, ಮನೆಯಿಂದಲೇ ಬೀಜ, ಗೊಬ್ಬರವನ್ನು ತಂದು ಶಾಲಾ ತರಕಾರಿ ತೋಟ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರತಿನಿತ್ಯ ಗಿಡಗಳಿಗೆ ಗೊಬ್ಬರವನ್ನು ಹಾಕುವುದಲ್ಲದೆ ಪ್ರಾಣಿ ಪಕ್ಷಿಗಳಿಂದ ಗಿಡಗಳನ್ನು ರಕ್ಷಿಸಿ ಗಿಡಗಳು ಉತ್ತಮವಾಗಿ ಬೆಳೆದು ನಿರೀಕ್ಷೆಗೆ ಮೀರಿದ ಫಸಲು ದೊರಕುವಲ್ಲಿ ಬಿ.ಕೆ.ರಮೇಶ್, ಮಹೇಶ ಆಚಾರಿ, ಅಮರ್ ಪೂಜಾರಿ ಹಾಗೂ ಸುಧಾಕರ ಪೂಜಾರಿ ಅವರು ಕೈಜೋಡಿಸಿ ಶ್ರಮಿಸಿದ್ದಾರೆ. ಎಸ್‌ಡಿ‌ಎಂಸಿ ಸದಸ್ಯರು ಹಾಗೂ ಪೋಷಕರ ಈ ಕಾರ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕ ಆನಂದ ಜಿ. ಮತ್ತು ಸಹಶಿಕ್ಷಕ ವಿಶ್ವನಾಥ ಅವರು ಬೆಂಬಲ ನೀಡಿದ ಫಲವಾಗಿ ಶಾಲಾ ವಠಾರದಲ್ಲಿ ಸುಂದರ ತರಕಾರಿ ತೋಟ ನಿರ್ಮಾಣಗೊಂಡು ಶಾಲೆಯ ಮಕ್ಕಳ ಮಧ್ಯಾಹ್ನದೂಟಕ್ಕೆ ಉತ್ತಮ ತರಕಾರಿ ದೊರೆಯುವಂತೆ ಆಗಿದೆ.

ಶಾಲೆಯ ವಠಾರದಲ್ಲಿ ತರಕಾರಿ ತೋಟ ಮಾಡುವಲ್ಲಿ ವಿಶೇಷ ಶ್ರಮವಹಿಸಿದ ಶಾಲೆಯ ಎಸ್‌ಡಿ‌ಎಂಸಿ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಎಸ್‌ಡಿ‌ಎಂಸಿ ಸದಸ್ಯೆ ಶಾಂತಾ ಹಾಗೂ ವಿದ್ಯಾರ್ಥಿ ಪೋಷಕರಾದ ಉಷಾ ಹಾಗೂ ಈ ಕಾರ್ಯದಲ್ಲಿ ಕೈಜೋಡಿಸಿದ ಎಸ್‌ಡಿ‌ಎಂಸಿ ಸದಸ್ಯರು, ಪೋಷಕರು ಹಾಗೂ ಶಾಲೆಯ ಶಿಕ್ಷಕರನ್ನು ಶಾಲೆಯ ಎಸ್‌ಡಿ‌ಎಂಸಿ ಅಧ್ಯಕ್ಷ ನಾರಾಯಣ ಕೆ. ಅಭಿನಂದಿಸಿದ್ದಾರೆ.

ಶಾಲೆಯ ವಠಾರದಲ್ಲಿ ಮಾಡಿರುವ ತರಕಾರಿ ತೋಟದಲ್ಲಿ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲಾಗಿದ್ದು, ಶಾಲೆಯ ಮಧ್ಯಾಹ್ನದೂಟಕ್ಕೆ ಇಲ್ಲಿ ಬೆಳೆದ ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಒಂದು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆದಿದೆ. ತರಕಾರಿ ತೋಟ ಮಾಡುವಲ್ಲಿ ಶಾಲೆಯ ಎಸ್‌ಡಿ‌ಎಂಸಿ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಎಸ್‌ಡಿ‌ಎಂಸಿ ಸದಸ್ಯೆ ಶಾಂತಾ ಹಾಗೂ ವಿದ್ಯಾರ್ಥಿ ಪೋಷಕರಾದ ಉಷಾ ಅವರ ಪರಿಶ್ರಮ ಶ್ಲಾಘನೀಯ ಹಾಗೂ ಈ ಕಾಯಕದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು – ಆನಂದ ಜಿ., ಮುಖ್ಯಶಿಕ್ಷಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಜ್ಜಾಡಿ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!